ETV Bharat / entertainment

ಥಿಯೇಟರ್​ನಲ್ಲಿ 'ಟೈಗರ್' 3 ಘರ್ಜನೆ: ಸಲ್ಲು ಸಿನಿಮಾಗೆ ಫ್ಯಾನ್ಸ್ ಫಿದಾ! - ​ ಸಲ್ಮಾನ್​ ಖಾನ್​

Tiger 3: ಬಹುನಿರೀಕ್ಷಿತ ಸಿನಿಮಾ 'ಟೈಗರ್ 3' ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.

Tiger 3 release
ಟೈಗರ್ 3 ಬಿಡುಗಡೆ
author img

By ETV Bharat Karnataka Team

Published : Nov 12, 2023, 11:50 AM IST

ದೇಶಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಕಳೆಗಟ್ಟಿದೆ. ದೀಪಾವಳಿ ಹಬ್ಬದ ಉಡುಗೊರೆಯಾಗಿ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಮತ್ತು ಬಹುಬೇಡಿಕೆ ನಟಿ ಕತ್ರಿನಾ ಕೈಫ್​ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟೈಗರ್ 3' ಬಿಡುಗಡೆ ಆಗಿದೆ. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಅವರು ಸಲ್ಲು ವಿರೋಧಿಯಾಗಿ ಕಾಣಿಸಿಕೊಂಡಿದ್ದಾರೆ. 'ಯಶ್​ ರಾಜ್​ ಫಿಲ್ಮ್ಸ್' ನಿರ್ಮಾಣದ ಪವರ್ ಪ್ಯಾಕ್ಡ್ ಆ್ಯಕ್ಷನ್ ಮೂವಿ 'ಟೈಗರ್'ನ ಮೂರನೇ ಭಾಗ. ಇಂಡಿಯನ್​ ಸೂಪರ್​ ಸ್ಟಾರ್​​​ನ ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣವಿದೆ.

ನವೆಂಬರ್ 12, ಭಾನುವಾರ 'ಟೈಗರ್ 3' ತೆರೆಗಪ್ಪಳಿಸಿದೆ. ಈ ಸಿನಿಮಾ ವೀಕ್ಷಿಸಲು ಬಹು ದಿನಗಳಿಂದ ಕಾತರರಾಗಿದ್ದ ಅಭಿಮಾನಿಗಳು ಇಂದು ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಿಡುಗಡೆ ಹಿನ್ನೆಡೆ ಹಲವೆಡೆ ಅದ್ಧೂರಿ ಸೆಲೆಬ್ರೇಷನ್​​ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರೇಷನ್​ ವಿಡಿಯೋಗಳು ವೈರಲ್ ಆಗುತ್ತಿವೆ. ಆನ್​ಲೈನ್​ನಲ್ಲಿ ಕಾಣಿಸಿಕೊಂಡಿರುವ ವಿಡಿಯೋವೊಂದರಲ್ಲಿ ಅಭಿಮಾನಿಗಳು ಒಟ್ಟಿಗೆ ಸೇರಿ ಡೋಲು ಸದ್ದಿಗೆ ಸಖತ್​ ಸ್ಟೆಪ್​ ಹಾಕಿದ್ದಾರೆ. ಹಿನ್ನೆಲೆಯಲ್ಲಿ, ಸಲ್ಮಾನ್ ಖಾನ್ ಕಟೌಟ್​ಗಳು ಕಂಡುಬಂದಿದೆ.

  • #Tiger3

    Average First half Followed by below average Second Half ✅

    Movie is copy paste of pathaan and other Spy movies 👍

    Most of the dialogues and action sceenes are very cringe

    Weakest filim if the spy universe, Villain also weak ✅

    Overall Nothing impressed 1.75 ⭐ pic.twitter.com/zPKkjneXf0

    — C A P (@Karthik49752719) November 12, 2023 " class="align-text-top noRightClick twitterSection" data=" ">

ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಪ್ರೀತಿಯ ಧಾರೆಯೆರೆದರೆ, ಹಲವರು ಸಾಧಾರಣವಾಗಿದೆ ಎಂಬರ್ಥದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.​ ಸೊಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ Xನಲ್ಲಿ ಸಿನಿಮಾ ವೀಕ್ಷಿಸಿರುವ ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಬ್ಲಾಕ್‌ಬಸ್ಟರ್ ಸಿನಿಮಾ ಎಂದು ಕರೆದರೆ, ಕೆಲ ಪ್ರೇಕ್ಷಕರು ಇದನ್ನು ಪಠಾನ್ ಮತ್ತು ಇತರೆ ಸ್ಪೈ ಸಿನಿಮಾಗಳ ನಕಲು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ಬರ್ತ್​ಡೇ ಸೆಲೆಬ್ರೇಶನ್​: ಭೈರಾದೇವಿ, ಅಜಾಗ್ರತ ಸಿನಿಮಾ ಮಾಹಿತಿ ಇಲ್ಲಿದೆ

ಆದಿತ್ಯ ಚೋಪ್ರಾರಿಂದ ರಚಿಸಲ್ಪಟ್ಟ 'ಸ್ಪೈ ಯೂನಿವರ್ಸ್‌'ಗೆ ಟೈಗರ್ 3 ಹೊಸ ಸೇರ್ಪಡೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್​ ಬಳಿಕ ಬಂದ ಮತ್ತೊಂದು ಸ್ಪೈ ಸಿನಿಮಾ. ಈ ಚಿತ್ರದಲ್ಲಿ ಸಲ್ಲು, ಕ್ಯಾಟ್​​ ಜೊತೆ ಇಮ್ರಾನ್ ಹಶ್ಮಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ. ಅದ್ಭುತ ತಾರಾಗಣ ಸಿನಿಮಾದ ತೂಕ ಹೆಚ್ಚಿಸಿದೆ.

  • Maneesh Sharma Maan Gye guru
    🙏🙏🙏

    Yahi toh Chahiye Tha
    Full Mass ,Sab Record Todega Ye Tiger

    Baap Of All Spy Films 🔥🔥💥🔥💥#Tiger3 #Tiger3Review

    — 𝔻𝕒𝕣𝕜 𝕊𝕙𝕒𝕕𝕠𝕨 (@RahulRyonn) November 12, 2023 " class="align-text-top noRightClick twitterSection" data=" ">

ಇದನ್ನೂ ಓದಿ: 'ಟೈಗರ್​ 3 ಲೀಕ್ ಆಗದಂತೆ ನೋಡಿಕೊಳ್ಳಿ'​: ಅಭಿಮಾನಿಗಳಲ್ಲಿ ಸಲ್ಮಾನ್​, ಕತ್ರಿನಾ ಮನವಿ!

ಸಿನಿಮಾ ಬಿಡುಗಡೆಗೂ ಮುನ್ನವೇ ಸಖತ್​​ ಸೌಮಡ್​ ಮಾಡಿತ್ತು. ಪ್ರಚಾರ ಕೂಡ ಜೋರಾಗೇ ನಡೆದಿದೆ. ನಿರೀಕ್ಷೆ ಹೆಚ್ಚಿಸುವ ಸಲುವಾಗಿ ಸ್ಪೆಷಲ್​ ವಿಡಿಯೋ, ಟೀಸರ್, ಟ್ರೇಲರ್, ಸಾಂಗ್ಸ್​ಗಳನ್ನು ಹಂತ ಹಂತವಾಗಿ ಅನಾವರಣಗೊಳಿಸಲಾಗಿತ್ತು. "ಲೇಕೆ ಪ್ರಭು ಕಾ ನಾಮ್" ಅಭಿಮಾನಿಗಳ ನಿರಿಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯ ವರ್ಣರಂಜಿತ ನೃತ್ಯ ಅಭಿಮಾನಿಗಳ ಗಮನ ಸೆಳೆದಿತ್ತು. ಇದೀಗ ಥಿಯೇಟರ್​ಗಳಲ್ಲಿ ಟೈಗರ್​ ಘರ್ಜಿಸುತ್ತಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.