ETV Bharat / entertainment

ಸಲ್ಮಾನ್​ ಕತ್ರಿನಾ ಆಕರ್ಷಕ ಫೋಟೋ ಶೇರ್​: ಜೊತೆಯಾಗಿ ದೀಪಾವಳಿ ಹಬ್ಬಕ್ಕೆ ಶುಭಕೋರಿದ ಸ್ಟಾರ್ಸ್ - tiger 3

ಸಲ್ಮಾನ್ ಖಾನ್​ ಮತ್ತು​ ಕತ್ರಿನಾ ಜೊತೆಯಾಗಿ ಆಕರ್ಷಕ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.

Salman and Katrina
ಸಲ್ಮಾನ್​ ಕತ್ರಿನಾ ಆಕರ್ಷಕ ಫೋಟೋ
author img

By ETV Bharat Karnataka Team

Published : Nov 10, 2023, 3:02 PM IST

2023ರ ದೀಪಾವಳಿ ಸಲ್ಲು ಕ್ಯಾಟ್​ ಫ್ಯಾನ್ಸ್​ಗೆ ಬಹಳ ವಿಶೇಷ. ಬೆಳಕಿನ ಹಬ್ಬದಂದು ನಟರ ಬಹುನಿರೀಕ್ಷಿತ ಚಿತ್ರ ತೆರೆಗಪ್ಪಳಿಸಲಿದೆ. ದೇಶಾದ್ಯಂತ ಪ್ರತೀ ಮನೆಯೂ ಬೆಳಗಲಿದೆ. ಜನರು ಈ ಬೆಳಕಿನ ಹಬ್ಬವನ್ನು ತಮ್ಮದೇ ಆದ ರೀತಿಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಜೊತೆಗೆ ಈ ವಿಶೇಷ ದಿನದಂದು, ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಬಹುಬೇಡಿಕೆ ತಾರೆ ಕತ್ರಿನಾ ಕೈಫ್ ಅಭಿನಯದ ಸ್ಪೈ ಆ್ಯಕ್ಷನ್ ಥ್ರಿಲ್ಲರ್​ ಸಿನಿಮಾ 'ಟೈಗರ್ 3' ಬಿಡುಗಡೆಯಾಗಲಿದೆ.

ಅಭಿಮಾನಿಗಳ ಗಮನ ಸೆಳೆದ ಸಲ್ಲು ಕ್ಯಾಟ್: ದಿ ಮೋಸ್ಟ್ ಎಕ್ಸ್​​ಪೆಕ್ಟೆಡ್ ಸಿನಿಮಾ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಅಭಿಮಾನಿಗಳು ಬಹಳ ಕುತೂಹಲ ವ್ಯಕ್ತಪಡಿಸಿದ್ದಾರೆ. ಚಿತ್ರತಂಡ ವಿಭಿನ್ನವಾಗಿ ಪ್ರಚಾರ ಮಾಡುತ್ತಿದೆ. ಸಲ್ಮಾನ್​ ಖಾನ್​ ನಿರೂಪಣೆಯ ಬಿಗ್​ ಬಾಸ್​​ನ ವೀಕೆಂಡ್​ ಎಪಿಸೋಡ್​ನಲ್ಲಿ ನಟಿ ಕತ್ರಿನಾ ಕೈಫ್​​ ಕಾಣಿಸಿಕೊಳ್ಳಲಿದ್ದಾರೆ. ನಿನ್ನೆ ಹಿಂದಿ ಬಿಗ್​ ಬಾಸ್ 17 ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಇದೀಗ ಮತ್ತೊಮ್ಮೆ ಸಲ್ಲು ಕ್ಯಾಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸಾಂಪ್ರದಾಯಿಕ ನೋಟದಲ್ಲಿ ಸ್ಟಾರ್ಸ್: ​ಹೌದು, 'ಟೈಗರ್ 3' ಬಿಡುಗಡೆಗೂ ಮುನ್ನ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ವರ್ಚುಯಲ್​ ವೇದಿಕೆಗೆ ಒಟ್ಟಿಗೆ ಆಗಮಿಸಿ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ. ಇಬ್ಬರೂ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 'ಕಾಫಿ ವಿತ್ ಕರಣ್ ಸೀಸನ್ 8' ಫೈನಲ್​ ಎಪಿಸೋಡ್​ಗೆ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​​?

ಸಲ್ಮಾನ್​ ಕತ್ರಿನಾ ಆಕರ್ಷಕ ಫೋಟೋ ಶೇರ್: ಎಥ್ನಿಕ್ ಲುಕ್‌ನಲ್ಲಿರುವ ತಮ್ಮ ಜೋಡಿ ಚಿತ್ರವನ್ನು ಹಂಚಿಕೊಂಡಿರುವ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​​, ಅಭಿಮಾನಿಗಳಿಗೆ ''ಶುಭ ದೀಪಾವಳಿ'' ಎಂದು ಶುಭಾಶಯ ಕೋರಿದ್ದಾರೆ. ಜೊತೆಗೆ, ಟೈಗರ್​ 3 ಸಿನಿಮಾ ಇದೇ ಭಾನುವಾರ (ನವೆಂಬರ್​ 12) ಚಿತ್ರಮಂದಿರಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ. ಈಗಲೇ ನಿಮ್ಮ ಟಿಕೆಟ್​ ಬುಕ್​ ಮಾಡಿ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಕತ್ರಿನಾ ಕೈಫ್ ಮಿನುಗುವ ಫ್ಯಾನ್ಸಿ ಸೀರೆಯುಟ್ಟು ಬಹಳ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಭಾಯ್​​​ಜಾನ್ ಕೂಡ ಕಡಿಮೆಯಿಲ್ಲ. ಕೆಂಪು ಕರ್ತಾದಲ್ಲಿ ಸಾಂಪ್ರದಾಯಿಕ ನೋಟ ಬೀರಿದ್ದಾರೆ. ಇಬ್ಬರೂ ಜೊತೆಯಾಗಿ ನಿಂತಿರುವ ಫೋಟೋ ಕಂಡ ಅಭಿಮಾನಿಗಳ ಮೊಗದಲ್ಲಿ ನಗುವಿನಲೆ ಎದ್ದಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್​​ ನಡೆಸಿಕೊಡುವ ಬಿಗ್​ ಬಾಸ್​ಗೆ ಕತ್ರಿನಾ ಕೈಫ್ ಎಂಟ್ರಿ: ಟೈಗರ್​ 3 ಪ್ರಮೋಶನ್

ಬಹುನಿರೀಕ್ಷಿತ ಟೈಗರ್ 3 ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್ ಬ್ಯಾನರ್ ಅಡಿ ಬಹಳ ಅದ್ಧೂರಿಯಾಗಿ ನಿರ್ಮಾಣಗೊಂಡಿದೆ. ಸಲ್ಲು ಕ್ಯಾಟ್​ ಮುಖ್ಯಭೂಮಿಕೆಯಲ್ಲಿದ್ದರೆ, ಇಮ್ರಾನ್​ ಹಶ್ಮಿ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ಶಾರುಖ್ ಖಾನ್ ಜೊತೆಗೆ ಹೃತಿಕ್ ರೋಷನ್ ಸಹ ಅತಿಥಿ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಚಿತ್ರದ ಅತಿಥಿ ಪಾತ್ರಗಳ ಪೈಕಿ ಆರ್​ಆರ್​ಆರ್​ ಖ್ಯಾತಿಯ ಜೂನಿಯರ್ ಎನ್‌ಟಿಆರ್ ಹೆಸರು ಸಹ ಕೇಳಿ ಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.