ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಸಿನಿಮಾಗಳು ಡಿಸೆಂಬರ್ ಕೊನೆಯಲ್ಲಿ ಬಿಡುಗಡೆ ಆಗಲು ಸಜ್ಜಾಗಿವೆ. ಬಹುನಿರೀಕ್ಷಿತ ಚಿತ್ರಗಳಾದ ಡಂಕಿ ಮತ್ತು ಸಲಾರ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾದಾಗಿನಿಂದಲೂ ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಧಿಕೃತ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದರೂ ಇತ್ತೀಚೆಗೆ ಹಲವು ವದಂತಿ ಹಬ್ಬಿತ್ತು. ಎಸ್ಆರ್ಕೆ ಸಿನಿಮಾವನ್ನು ಮುಂದೂಡಲಾಗುವುದು ಎಂದು ಕೂಡ ಹೇಳಲಾಗಿತ್ತು. ಇದೀಗ ಡಂಕಿ ಮುಂದೂಡಿಕೆ ಆಗಲ್ಲ ಎಂದು ಎಸ್ಆರ್ಕೆ ಟೀಮ್ ತಿಳಿಸಿದೆ. ಜನಪ್ರಿಯ ಸಿನಿಮಾ ವ್ಯವಹಾರ ತಜ್ಞ ತರಣ್ ಆದರ್ಶ್ ಕೂಡ ಸೋಷಿಯಲ್ ಮೀಡಿಯಾದಲ್ಲಿ, ಡಂಕಿ ಸಿನಿಮಾ ಬಿಡುಗಡೆ ಮುಂದೂಡಿಕೆ ಆಗಲ್ಲ ಎಂದು ಬರೆದುಕೊಂಡಿದ್ದಾರೆ.
ಡಿಸೆಂಬರ್ 22ರಂದು ಡಂಕಿ ಬಿಡುಗಡೆ: ಡಂಕಿ ರಿಲೀಸ್ ಡೇಟ್ ಪೋಸ್ಟ್ಪೋನ್ ಆಗಬಹುದು ಎಂದು ಹೇಳಲಾಗಿತ್ತು. ವದಂತಿಗಳ ನಡುವೆ, ಸಿನಿಮಾ 2023ರ ಕ್ರಿಸ್‌ಮಸ್ ಸಂದರ್ಭವೇ ಬಿಡುಗಡೆಯಾಗಲಿದೆ ಎಂಬುದೀಗ ದೃಢಪಟ್ಟಿದೆ. ಶಾರುಖ್ ಖಾನ್ ಅವರ ಟೀಮ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದೆ. ಉದ್ಭವಿಸಿದ ಅಂತೆ ಕಂತೆಗಳಿಗೆ ಕೊನೆ ಹಾಡಿದೆ. ಶಾರುಖ್ ಖಾನ್ ನಟನೆಯ ಮುಂದಿನ ಸಿನಿಮಾ ಈ ಮೊದಲೇ ತಿಳಿಸಿದಂತೆ ಡಿಸೆಂಬರ್ 22ರಂದು ಬಿಡುಗಡೆ ಆಗಲಿದೆ.
ಬಾಕ್ಸ್ ಆಫೀಸ್ ಪೈಪೋಟಿ: ಡಿಸೆಂಬರ್ 22 ರಂದು ಭಾರತೀಯ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್‌ಗಳ ಸಿನಿಮಾಗಳು ಒಟ್ಟಿಗೆ ತೆರೆಕಾಣಲಿವೆ. ದೊಡ್ಡ ಬಾಕ್ಸ್ ಆಫೀಸ್ ಪೈಪೋಟಿ ಏರ್ಪಡಲಿದೆ. ಶಾರುಖ್ ಖಾನ್ ನಟನೆಯ ಡಂಕಿ ಮತ್ತು ಪ್ರಭಾಸ್ ಅಭಿನಯದ ಸಲಾರ್ ಎರಡೂ ಕೂಡ ಈ ವರ್ಷದ ಕ್ರಿಸ್‌ಮಸ್ ಸಂದರ್ಭ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಚಿತ್ರತಂಡ ಕೂಡ ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಿತ್ತು. ಅದಾಗ್ಯೂ, ಡಂಕಿ ವಿಳಂಬವಾಗಬಹುದು ಎಂಬ ಸುದ್ದಿ ಹರಡಿತ್ತು. ಸಿನಿಮಾ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರ ಟ್ವೀಟ್ ಈ ಸುದ್ದಿಗೆ ಕಾರಣವಾಯಿತು. ಆದ್ರೀಗ ಡಂಕಿ ವಿಳಂಬ ಆಗಲ್ಲ ಎಂಬುದು ಖಚಿತವಾಗಿದೆ.
-
Buzz: #SalaarVsDunki❌
— Manobala Vijayabalan (@ManobalaV) October 12, 2023 " class="align-text-top noRightClick twitterSection" data="
#ShahRukhKhan's #Dunki likely to get POSTPONED.… pic.twitter.com/xWbDqHhioj
">Buzz: #SalaarVsDunki❌
— Manobala Vijayabalan (@ManobalaV) October 12, 2023
#ShahRukhKhan's #Dunki likely to get POSTPONED.… pic.twitter.com/xWbDqHhiojBuzz: #SalaarVsDunki❌
— Manobala Vijayabalan (@ManobalaV) October 12, 2023
#ShahRukhKhan's #Dunki likely to get POSTPONED.… pic.twitter.com/xWbDqHhioj
ಇದನ್ನೂ ಓದಿ: ''ವಿಕಲತೆ ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿರುವ ನಿಮಗೆ ನಾವು ಚಿರಋಣಿ'': ಅಶ್ವಿನಿ ಪುನೀತ್ ರಾಜಕುಮಾರ್
ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾ ಚಿತ್ರಮಂದಿರಗಳಿಗೆ ಬರೋದು ತಡವಾಗಲ್ಲ. ಈ ಹಿಂದೆ ತಿಳಿಸಿದಂತೆ ಡಿಸೆಂಬರ್ 22 ರಂದು ಥಿಯೇಟರ್‌ಗೆ ಬರಲಿದೆ. ಟ್ರೇಡ್ ಎಕ್ಸ್‌ಪರ್ಟ್ ತರಣ್ ಆದರ್ಶ್ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ಹಾಗೂ ಎಸ್ಆರ್ಕೆ ಕಾಂಬಿನೇಶನ್ನ ಮೊದಲ ಸಿನಿಮಾ ಡಂಕಿ ಆಗಿದ್ದು, ಚಿತ್ರದಲ್ಲಿ ಬಹುಭಾಷಾ ನಟಿ ತಾಪ್ಸಿ ಪನ್ನು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ: Salaar vs Dunki: ಶಾರುಖ್ ಸಿನಿಮಾ ಮುಂದೂಡಿಕೆ ಸಾಧ್ಯತೆ - ಕಾರಣ ಇಲ್ಲಿದೆ!