ETV Bharat / entertainment

'ಸಲಾರ್'​ ಟ್ರೇಲರ್​: ಮತ್ತೊಂದು ಹಿಟ್​ಗೆ ಹೊಂಬಾಳೆ ಫಿಲ್ಮ್ಸ್, ಪ್ರಶಾಂತ್​ ನೀಲ್​​ ರೆಡಿ - Prashanth Neel

Salaar Trailer:2023ರ ಬಹುನಿರೀಕ್ಷಿತ ಸಿನಿಮಾ 'ಸಲಾರ್'​ನ ಟ್ರೇಲರ್​ ಅನಾವರಣಗೊಂಡಿದೆ.

Salaar Trailer
ಸಲಾರ್​ ಟ್ರೇಲರ್
author img

By ETV Bharat Karnataka Team

Published : Dec 1, 2023, 7:25 PM IST

Updated : Dec 1, 2023, 7:38 PM IST

ಅಭಿಮಾನಿಗಳ ಒಂದು ಹಂತದ ಕಾಯುವಿಕೆ ಪೂರ್ಣಗೊಂಡಿದೆ. ಕೊನೆಗೂ, ಹೊಂಬಾಳೆ ಫಿಲ್ಮ್ಸ್​​ ಬಹುನಿರೀಕ್ಷಿತ 'ಸಲಾರ್'​ ಟ್ರೇಲರ್ ಅನ್ನು ಅನಾವರಣಗೊಳಿಸಿದೆ. ​ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಆ್ಯಕ್ಷನ್​ ಅವತಾರದ ಟ್ರೇಲರ್​ ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಟ್ರೇಲರ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಾಗಿ ಪಾಸಿಟಿವ್​ ರೆಸ್ಪಾನ್ಸ್​​ ಸಿಕ್ಕಿದೆ. ನಿರ್ದೇಶಕ ಪ್ರಶಾಂತ್​ ನೀಲ್ ಮತ್ತು ಸೂಪರ್​ ಸ್ಟಾರ್ ಪ್ರಭಾಸ್​ ಅಭಿಮಾನಿಗಳು ಹಬ್ಬವನ್ನ ಆಚರಿಸುತ್ತಿದ್ದಾರೆ.

  • " class="align-text-top noRightClick twitterSection" data="">

ನವೆಂಬರ್​ ಎರಡನೇ ವಾರದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಪೋಸ್ಟರ್ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್, ಡಿಸೆಂಬರ್ 1ರ ಸಂಜೆ 7:19ಕ್ಕೆ ಟ್ರೇಲರ್​ ಅನಾವರಣಗೊಳಿಸುವುದಾಗಿ ಘೋಷಿಸಿತ್ತು. ಅಂದಿನಿಂದಲೇ ಅಭಿಮಾನಿಗಳು, ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದರು. ಕೊಟ್ಟ ಮಾತಿನಂತೆ ಇದೀಗ ಚಿತ್ರನಿರ್ಮಾಪಕರು ಟ್ರೇಲರ್ ಅನಾವರಣಗೊಳಿಸಿದ್ದಾರೆ. ಕಂಪ್ಲೀಟ್ ಆ್ಯಕ್ಷನ್​ ಅವತಾರದಲ್ಲಿ ಪ್ರಭಾಸ್​ ದರ್ಶನ ಕೊಟ್ಟಿದ್ದು, ಪ್ರಶಾಂತ್​ ನೀಲ್​​ ನಿರ್ದೇಶನಕ್ಕೆ ಫುಲ್​ ಮಾರ್ಕ್ಸ್​​ ಕೊಟ್ಟಿದ್ದಾರೆ. ಚಿತ್ರದ ಪಾತ್ರವರ್ಗಗಳ ಪರಿಚಯವಾಗಿದೆ. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಸೇರಿ ಕೆಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಸಲಾರ್ ಸಿನಿಮಾ ಪಂಚಭಾಷೆಗಳಲ್ಲಿ ನಿರ್ಮಾಣಗೊಂಡಿದೆ. ಇದೇ ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಹೊಂಬಾಳೆ ಫಿಲ್ಮ್ ಈಗಾಗಲೇ ಆನ್​ಲೈನ್​ನಲ್ಲಿ ಪ್ರಚಾರ ಪ್ರಾರಂಭಿಸಿದೆ. ವಿಭಿನ್ನ ಪೋಸ್ಟ್​ಗಳನ್ನು ಶೇರ್ ಮಾಡಿಕೊಳ್ಳೋ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಡಿಸೆಂಬರ್ 22 ರಂದು ಕನ್ನಡ, ತೆಲುಗು ಮಲಯಾಳಂ, ತಮಿಳು ಮತ್ತು ಹಿಂದಿ ಆವೃತ್ತಿಗಳಲ್ಲಿ ಸಿನಿಮಾ ಥಿಯೇಟರ್​ ಪ್ರವೇಶಿಸಲಿದ್ದು, ಸಿನಿಮಾ ವೀಕ್ಷಿಸುವ ಕಾತರ ಹೆಚ್ಚಾಗಿದೆ. ಟ್ರೇಲರ್ ವೀಕ್ಷಿಸಿದ ಸಿನಿಪ್ರಿಯರ ಕುತೂಹಲ ನೂರು ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: 'ಸಲಾರ್'​ ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ: ಗರಿಗೆದರಿದ ಉತ್ಸಾಹ - ಇದು 'Salaar Trailer Day'

ಡಿಸೆಂಬರ್ 22 ರಂದೇ ಶಾರುಖ್​ ಖಾನ್ ಅವರ ಮತ್ತೊಂದು ಬಹುನಿರೀಕ್ಷಿತ ಡಂಕಿ ಸಿನಿಮಾ ಕೂಡ ಬಿಡುಗಡೆ ಆಗಲಿದೆ. ಈಗಾಗಲೇ ಎರಡು ಬ್ಯಾಕ್ ಟು ಬ್ಯಾಕ್ ಬ್ಲಾಕ್​​ಬಸ್ಟರ್ ಸಿನಿಮಾಗಳನ್ನು ನೀಡಿದ್ದು,​ ಡಂಕಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಪಠಾಣ್​, ಜವಾನ್​ನಂತಹ ಸಿನಿಮಾ ಬಂದ ಮೇಲೆ ಡಂಕಿ ಹೇಗಿರಬಹುದೆಂಬ ಕುತೂಹಲ ಹೆಚ್ಚಾಗಿದೆ. 2018 ರಲ್ಲಿ ಕೂಡ ಶಾರುಖ್​ ಖಾನ್​ ಅವರ ಸಿನಿಮಾ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಮುಖಾಮುಖಿಯಾಗಿತ್ತು. ಕೆಜಿಎಫ್ 1 ಮತ್ತು ಝೀರೋ ಸಿನಿಮಾ ಒಂದೇ ದಿನ ತೆರೆಕಂಡು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್​ ಮುನ್ನಡೆ ಸಾಧಿಸಿತ್ತು. ಇದೀಗ ಎರಡನೇ ಬಾರಿ ಹೊಂಬಾಳೆ ಫಿಲ್ಮ್ಸ್ ಮತ್ತು ಎಸ್​ಆರ್​ಕೆ ಸಿನಿಮಾಗಳು ಮುಖಾಮುಖಿಯಾಗುತ್ತಿವೆ..

ಇದನ್ನೂ ಓದಿ: ರಿಷಬ್​ - ರಶ್ಮಿಕಾ ಮನಸ್ತಾಪ ವದಂತಿ: ಕಾಂತಾರ ಸ್ಟಾರ್ ಹೇಳಿದ್ದಿಷ್ಟು, ಊಹಾಪೋಹಕ್ಕೆ ಫುಲ್​ ಸ್ಟಾಪ್​

Last Updated : Dec 1, 2023, 7:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.