ETV Bharat / entertainment

'ಸಲಾರ್'​ ಸಿನಿಮಾ ರಿಲೀಸ್ ಮುಂದೂಡಿಕೆ: ಹೊಂಬಾಳೆ ಫಿಲಂಸ್ ಪೋಸ್ಟ್‌ ಸ್ಪಷ್ಟನೆ ಹೀಗಿದೆ.. - ನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ನಿರ್ದೇಶನ, ಪ್ರಭಾಸ್ ನಾಯಕನಾಗಿ ನಟಿಸಿರುವ 'ಸಲಾರ್'​ ಆ್ಯಕ್ಷನ್ ಥ್ರಿಲ್ಲರ್‌ ಚಿತ್ರಕ್ಕಾಗಿ ಅಭಿಮಾನಿಗಳು ಹಲವು ದಿನಗಳಿಂದ ಕಾಯುತ್ತಿದ್ದಾರೆ. ಇದೀಗ ಹೊಂಬಾಳೆ ಫಿಲಂಸ್​ ಚಿತ್ರ ಬಿಡುಗಡೆ ಮುಂದೂಡಿರುವ ಕುರಿತು ಮಾಹಿತಿ ನೀಡಿದೆ.

Finally Salaar Movie release date postponed  Salaar Movie release date  Hombale Films  SalaarTheSaga  ದಯವಿಟ್ಟು ಅರ್ಥಮಾಡಿಕೊಳ್ಳಿ  ಸಲಾರ್​ ಸಿನಿಮಾ ರಿಲೀಸ್ ಮುಂದೂಡಲಾಗಿದೆ  ರಿಲೀಸ್ ಮುಂದೂಡಲಾಗಿದೆ ಎಂದ ಹೊಂಬಾಳೆ  ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಾಯಕ  ಸಲಾರ್​ ಆ್ಯಕ್ಷನ್ ಚಿತ್ರಕ್ಕಾಗಿ ಅಭಿಮಾನಿಗಳು  ನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಶಾಂತ್ ನೀಲ್  ಸಿನಿಮಾ ವಿಕ್ಷಿಸಲು ಸಿನಿಪ್ರಿಯರು ಸಾಕಷ್ಟು ಉತ್ಸುಕ
ಸಲಾರ್​ ಸಿನಿಮಾ ರಿಲೀಸ್ ಮುಂದೂಡಲಾಗಿದೆ ಎಂದ ಹೊಂಬಾಳೆ!
author img

By ETV Bharat Karnataka Team

Published : Sep 13, 2023, 10:35 AM IST

ಬೆಂಗಳೂರು: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹಾಗು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ಸಲಾರ್' ಸಿನಿಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗುತ್ತೆ ಎಂದು ಸಿನಿಮಾ ಪ್ರೇಮಿಗಳು ಭಾರಿ ನಿರೀಕ್ಷೆ ಹೊಂದಿದ್ದರು. ಆದರೆ ಹೊಸ ಬೆಳವಣಿಗೆಯಲ್ಲಿ ಕಾರಣಾಂತರಗಳಿಂದ ಬಿಡುಗಡೆ ಮುಂದೂಡಲಾಗಿದೆ ಎಂದು ನಿರ್ಮಾಪಕ ಸಂಸ್ಥೆ ಹೊಂಬಾಳೆ ಫಿಲಂಸ್‌ ಸ್ಪಷ್ಟನೆ ನೀಡಿದೆ. ಹೀಗಾಗಿ, ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಯೂ ನಿಜವಾಗಿದೆ.

'ಕೆಲವು ಕಾರಣಗಳಿಂದ ಸಲಾರ್ ಫಸ್ಟ್​ ಪಾರ್ಟ್​ ಅನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್‌) ಖಾತೆಯಲ್ಲಿ ಹೊಂಬಾಳೆ ಫಿಲಂಸ್‌ ತಿಳಿಸಿದೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದಿದೆ.

  • We deeply appreciate your unwavering support for #Salaar. With consideration, we must delay the original September 28 release due to unforeseen circumstances.
    Please understand this decision is made with care, as we're committed to delivering an exceptional cinematic experience.… pic.twitter.com/abAE9xPeba

    — Hombale Films (@hombalefilms) September 13, 2023 " class="align-text-top noRightClick twitterSection" data=" ">

'ನೀವೆಲ್ಲರೂ ಸಲಾರ್ ಮೇಲೆ ತೋರಿಸುತ್ತಿರುವ ಪ್ರೀತಿಯಿಂದ ತುಂಬಾ ಸಂತೋಷವಾಗುತ್ತಿದೆ. ಕಾರಣಾಂತರಗಳಿಂದ ಸಿನಿಮಾವನ್ನು ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ. ನಿಮಗೆ ಒಳ್ಳೆಯ ಸಿನಿಮಾ ಕೊಡಬೇಕೆಂದು ಈ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಇಡೀ ತಂಡ ನಿಮಗಾಗಿ ದಣಿವರಿಯದೆ ಕೆಲಸ ಮಾಡುತ್ತಿದೆ. ಸದ್ಯ ಚಿತ್ರಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದೇವೆ. ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ' ಎಂದು ಹೊಂಬಾಳೆ ಫಿಲಂಸ್ ಪೋಸ್ಟ್‌ ಮಾಡಿದೆ.

ಬಹುನಿರೀಕ್ಷಿತ ಸಿನಿಮಾ ವೀಕ್ಷಿಸಲು ಸಿನಿಪ್ರಿಯರು ಸಾಕಷ್ಟು ಉತ್ಸುಕರಾಗಿದ್ದಾರೆ. ಸೆಪ್ಟೆಂಬರ್​ 28ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಈ ಮೊದಲು ಯೋಜಿಸಿತ್ತು. ಆದ್ರೆ ರಿಲೀಸ್​ ಡೇಟ್​ ಮುಂದೂಡಿರುವ ಸುದ್ದಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದಕ್ಕೂ ಮುನ್ನ ಸಿನಿಮಾ ವಿಶ್ಲೇಷಕ ತರಣ್​ ಆದರ್ಶ್, ಸಿನಿಮಾ ರಿಲೀಸ್​ ಡೇಟ್​ ಪೋಸ್ಟ್​​ಪೋನ್​ ಆಗಿದೆ ಎಂದು ಪೋಸ್ಟ್​ ಮಾಡಿದ್ದರು.

ಸಲಾರ್​ ಪೋಸ್ಟರ್​ ಶೇರ್ ಮಾಡಿದ್ದ ಅವರು, ಸಲಾರ್​ ನವೆಂಬರ್​ಗೆ ಚಿತ್ರಮಂದಿರಗಳಿಗೆ ಬರಲಿದೆ. ಇದೇ ಸೆಪ್ಟೆಂಬರ್​​ 28ರಂದು ತೆರೆಕಾಣುತ್ತಿಲ್ಲ. ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಅನೌನ್ಸ್ ಆಗಲಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ 'ಸಲಾರ್'​ ರಿಲೀಸ್​ ಮುಂದೂಡಿಕೆ...ತರಣ್​ ಆದರ್ಶ್​ ಟ್ವೀಟ್​ನಲ್ಲೇನಿದೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.