ETV Bharat / entertainment

'ಲಿಯೋ' ಮೀರಿಸಿದ 'ಸಲಾರ್'​; ಜೈಲರ್, ಬಾಹುಬಲಿ ದಾಖಲೆ ಮುರಿಯಲು ಸಜ್ಜು - Salaar Collection

Salaar Collection: ಸಲಾರ್​ ಸಿನಿಮಾ ದೇಶೀಯ ಮಾರುಕಟ್ಟೆಯಲ್ಲಿ 625 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದೆ.

Salaar Collection
ಸಲಾರ್ ಕಲೆಕ್ಷನ್​​
author img

By ETV Bharat Karnataka Team

Published : Jan 2, 2024, 1:57 PM IST

ದಕ್ಷಿಣ ಚಿತ್ರರಂಗ ಸದ್ಯ 'ಸಲಾರ್'​ ಮೂಲಕ ಸದ್ದು ಮಾಡುತ್ತಿದೆ. ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಗಡಿ ಸಮೀಪಿಸಿದೆ. ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಸೌತ್​ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯ ಈ ಚಿತ್ರ ಮೊದಲ ವಾರಾಂತ್ಯದ ಬಳಿಕ, ವಾರದ ದಿನಗಳಲ್ಲಿ ಕೊಂಚ ಕುಸಿತ ಕಂಡಿತ್ತು. ಅದಾಗ್ಯೂ ಹೊಸ ವರ್ಷ ಸಂದರ್ಭದಲ್ಲಿ ಉತ್ತಮ ವ್ಯವಹಾರ ನಡೆಸಿದೆ.

ಇಲ್ಲಿ ಗಮನಾರ್ಹ ವಿಚಾರವೆಂದರೆ, ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 'ಲಿಯೋ' ಸಿನಿಮಾದ ಒಟ್ಟು ಕಲೆಕ್ಷನ್​ ಮೀರಿಸಿದೆ. ಪ್ರಭಾಸ್​ ಅವರದ್ದೇ ಆದ 'ಬಾಹುಬಲಿ: ದಿ ಬಿಗಿನಿಂಗ್'ನ ದಾಖಲೆ ಮುರಿಯಲು ಸಜ್ಜಾಗಿದೆ. ಅಲ್ಲದೇ ತಲೈವಾ ರಜನಿಕಾಂತ್​ ಅಭಿನಯದ ಜೈಲರ್​ ಚಿತ್ರದ ದಾಖಲೆಯನ್ನೂ ಕೂಡ ಇನ್ನೆರಡು ದಿನಗಳಲ್ಲಿ ಮುರಿಯುವ ಸಾಧ್ಯತೆ ಇದೆ.

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಸಲಾರ್ ತೆರೆಕಂಡ 11ನೇ ದಿನ (ಸೋಮವಾರ) 15.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತೀಯ ಬಾಕ್ಸ್ ಆಫೀಸ್‌ನಲ್ಲಾದ ಒಟ್ಟು ಕಲೆಕ್ಷನ್​ 360.77 ಕೋಟಿ ರೂಪಾಯಿ. ತೆಲುಗು ಪ್ರೇಕ್ಷಕರು ಸಿನಿಮಾಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಸಿನಿಮಾದ ತೆಲುಗು ಆವೃತ್ತಿಯು ಶೇ. 48.75ರಷ್ಟು ಆಕ್ಯುಪೆನ್ಸಿ ದರ ಹೊಂದಿತ್ತು.

ಜಾಗತಿಕ ಮಟ್ಟದಲ್ಲಿ ಸಲಾರ್​ ಸಿನಿಮಾ ಒಟ್ಟು 625 ಕೋಟಿ ರೂಪಾಯಿ ಗಳಿಸಿದೆ. ಬಾಹುಬಲಿ ಪಾರ್ಟ್ ಒನ್​​ ಸಿನಿಮಾದ ಒಟ್ಟು ಕಲೆಕ್ಷನ್​​ 650 ಕೋಟಿ ರೂ. ಆಗಿದ್ದು, ತಮ್ಮದೇ ದಾಖಲೆ ಮುರಿಯಲು ಪ್ರಭಾಸ್​​ ಸಜ್ಜಾಗಿದ್ದಾರೆ. ಬಾಹುಬಲಿ ಸರಣಿ ಸಿನಿಮಾಗಳ ಮೂಲಕ ಪ್ರಭಾಸ್​ ಪ್ಯಾನ್​ ಇಂಡಿಯಾ ಸ್ಟಾರ್ ಆಗಿದ್ದು ನಿಮಗೆ ತಿಳಿದೇ ಇದೆ. ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಸಿನಿಮಾಗಳ ಸಾಲಿನಲ್ಲಿ ಬಾಹುಬಲಿ ಇದೆ.

ಇದನ್ನೂ ಓದಿ: ನಾಳೆ ಅಮೀರ್​ ಖಾನ್​ ಮಗಳ ಮದುವೆ: ಇರಾ-ನೂಪುರ್ ನಿವಾಸಕ್ಕೆ ವಿಶೇಷ ದೀಪಾಲಂಕಾರ

'ಸಲಾರ್' ಈಗಾಗಲೇ ಸೂಪರ್​ ಸ್ಟಾರ್ ವಿಜಯ್ ಅವರ 'ಲಿಯೋ'ವನ್ನು ಹಿಂದಿಕ್ಕಿದೆ. ಲಿಯೋ ಚಿತ್ರ ಜಾಗತಿಕವಾಗಿ 605 ಕೋಟಿ ರೂಪಾಯಿ ಸಂಪಾದಿಸಿದೆ. ಅಲ್ಲದೇ, ತಲೈವಾ ರಜನಿಕಾಂತ್ ಅವರ ಬ್ಲಾಕ್​ಬಸ್ಟರ್ ಸಿನಿಮಾ 'ಜೈಲರ್‌'ನ ಒಟ್ಟು ಗಳಿಕೆಯ ಸಂಖ್ಯೆಗೆ ಸಮೀಪಿಸಿದೆ. ಜೈಲರ್​​ನ ಟೋಟಲ್​ ಕಲೆಕ್ಷನ್​ ಸರಿಸುಮಾರು 650 ಕೋಟಿ ರೂಪಾಯಿ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್​ 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಐದನೇ ಸಿನಿಮಾವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಅಭಿನಯದ 'ಕಾಳಿ' ಸಿನಿಮಾ ನಿಂತು ಹೋಗಿದ್ದೇಕೆ?

ಸಲಾರ್ ಯಶಸ್ಸಿನ ನಂತರ ಚಿತ್ರತಯಾರಕರು ಮತ್ತೊಂದು ಅದ್ಭುತ ಸಿನಿಮೀಯ ಅನುಭವ ನೀಡುವ ಸೀಕ್ವೆಲ್​​​ ಬಗ್ಗೆಯೂ ಈಗಾಗಲೇ ಸುಳಿವು ನೀಡಿದ್ದಾರೆ. ಖಾನ್ಸಾರ್ ಎಂಬ ಕಾಲ್ಪನಿಕ ಜಗತ್ತಿನಲ್ಲಿ ನಡೆಯುವ ಸ್ನೇಹಿತರ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.