ವಾಷಿಂಗ್ಟನ್: ಪ್ರತಿಷ್ಟಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ರಾಮೋಜಿ ಗ್ರೂಪ್ ಅಧ್ಯಕ್ಷರಾದ ರಾಮೋಜಿ ರಾವ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜ್ಯೂ.ಎನ್ಟಿಆರ್ ಮತ್ತು ರಾಮ್ ಚರಣ್ ಅಭಿನಯದ 'ಆರ್ಆರ್ಆರ್' ಸಿನಿಮಾದ ನಾಟು ನಾಟು ಹಾಡು ಕ್ರಿಟಿಕ್ ಚಾಯ್ಸ್ ಪ್ರಶಸ್ತಿಯನ್ನು ಪಡೆದಿದೆ.
-
Returning home after receiving 4 international awards for RRR including Golden Globe - with gratitude to Ramojirao garu & all the mentors who’d enriched my music by making me cross the boarders of Telugu states. Balachander sir, Bharathan Sir, Arjun Sarja and Bhatt Saab 🙏
— mmkeeravaani (@mmkeeravaani) January 16, 2023 " class="align-text-top noRightClick twitterSection" data="
">Returning home after receiving 4 international awards for RRR including Golden Globe - with gratitude to Ramojirao garu & all the mentors who’d enriched my music by making me cross the boarders of Telugu states. Balachander sir, Bharathan Sir, Arjun Sarja and Bhatt Saab 🙏
— mmkeeravaani (@mmkeeravaani) January 16, 2023Returning home after receiving 4 international awards for RRR including Golden Globe - with gratitude to Ramojirao garu & all the mentors who’d enriched my music by making me cross the boarders of Telugu states. Balachander sir, Bharathan Sir, Arjun Sarja and Bhatt Saab 🙏
— mmkeeravaani (@mmkeeravaani) January 16, 2023
ಕೀರವಾಣಿ ಅವರು ರಾಮೋಜಿ ರಾವ್ ಸೇರಿದಂತೆ ಪ್ರಮುಖ ಮಾರ್ಗದರ್ಶಕರಿಗೆ ತಮ್ಮ ಕಲೆಯನ್ನು ಉತ್ಕೃಷ್ಠಗೊಳಿಸಿದ್ದಕ್ಕೆ ಟ್ವಿಟರ್ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಗೋಲ್ಡನ್ ಗ್ಲೋಬ್ ಸೇರಿದಂತೆ 4 ಅಂತಾರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಮನೆಗೆ ಮರಳಿದ್ದೇನೆ. ತೆಲುಗು ರಾಜ್ಯದ ಗಡಿ ದಾಟಿ ತಮ್ಮ ಸಂಗೀತವನ್ನು ಉತ್ಕೃಷ್ಟಗೊಳಿಸಿದ ರಾಮೋಜಿ ರಾವ್ ಸೇರಿದಂತೆ ಎಲ್ಲಾ ಮಾರ್ಗದರ್ಶಕರಿಗೂ ಧನ್ಯವಾದಗಳು. ಬಾಲಚಂದ್ರ ಸರ್, ಭರತನ್ ಸರ್, ಅರ್ಜುನ್ ಸರ್ಜಾ ಮತ್ತು ಭಟ್ ಸಾಬ್ ಎಂದು ಹೆಸರು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
-
And he complimented on how the music in RRR varies in the volume and body unlike in typical western movies. A great honour and recognition for my work ❤️🙏
— mmkeeravaani (@mmkeeravaani) January 16, 2023 " class="align-text-top noRightClick twitterSection" data="
">And he complimented on how the music in RRR varies in the volume and body unlike in typical western movies. A great honour and recognition for my work ❤️🙏
— mmkeeravaani (@mmkeeravaani) January 16, 2023And he complimented on how the music in RRR varies in the volume and body unlike in typical western movies. A great honour and recognition for my work ❤️🙏
— mmkeeravaani (@mmkeeravaani) January 16, 2023
ರಾಜಮೌಳಿ ನಿರ್ದೇಶನದ ಸಿನಿಮಾ ಮೆಚ್ಚಿದ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಜೊತೆಗಿನ ಫೋಟೋವನ್ನು ಕೀರವಾಣಿ ಹಂಚಿಕೊಂಡಿದ್ದಾರೆ. ಕ್ಯಾಮರೂನ್ ಎರಡು ಬಾರಿ 'ಆರ್ಆರ್ಆರ್' ಸಿನಿಮಾ ವೀಕ್ಷಣೆ ಮಾಡಿದ್ದು, ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಇದು ಅಪಾರ ಸಂತಸ ತಂದಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. 'ಆರ್ಆರ್ಆರ್' ಸಿನಿಮಾದ ಸಂಗೀತವು ಪಾಶ್ಚಿಮಾತ್ಯ ಚಲನಚಿತ್ರಗಳಿಗಿಂತ ಹೇಗೆ ಭಿನ್ನವಾಗುತ್ತದೆ ಎಂಬುದರ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ, ನನ್ನ ಕೆಲಸ ಬಗ್ಗೆ ಗುರುತಿಸಿದ್ದು ದೊಡ್ಡ ಗೌರವ ಎಂದು ತಿಳಿಸಿದ್ದಾರೆ.
-
The great James Cameron has watched RRR twice and gave feedback on my score !!! Ocean full of excitement ☺️☺️☺️ pic.twitter.com/3PrrhMUAIx
— mmkeeravaani (@mmkeeravaani) January 16, 2023 " class="align-text-top noRightClick twitterSection" data="
">The great James Cameron has watched RRR twice and gave feedback on my score !!! Ocean full of excitement ☺️☺️☺️ pic.twitter.com/3PrrhMUAIx
— mmkeeravaani (@mmkeeravaani) January 16, 2023The great James Cameron has watched RRR twice and gave feedback on my score !!! Ocean full of excitement ☺️☺️☺️ pic.twitter.com/3PrrhMUAIx
— mmkeeravaani (@mmkeeravaani) January 16, 2023
ತೆಲುಗಿನ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮ್ಮರಾಂ ಭೀಮ್ ಅವರ ಆಧಾರಿತದ ಕಾಲ್ಪನಿಕ ಚಿತ್ರಕಥೆಯನ್ನು ಆರ್ಆರ್ಆರ್ ಹೊಂದಿದೆ. ಚಿತ್ರದಲ್ಲಿ ಜ್ಯೂ ಎನ್ಟಿಆರ್ ಮತ್ತು ರಾಮ್ಚರಣ್ ತೇಜ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಚಿತ್ರ ಜಗತ್ತಿನಾದ್ಯಂತ 1200 ಕೋಟಿ ರೂ ಕಲೆಕ್ಷನ್ ಮಾಡಿತ್ತು. ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಶ್ರೀಯಾ ಸರಣ್ ಕೂಡ ಅಭಿನಯಿಸಿದ್ದರು.
ಆರ್ಆರ್ಆರ್ನ ನಾಟು ನಾಟು ಸಾಂಗ್ ಅನ್ನು ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ ಹಾಡಿದ್ದಾರೆ. ಪ್ರೇಮ್ ರಕ್ಷಿತ್ ವಿಶಿಷ್ಟ ರೀತಿಯ ನೃತ್ಯ ಸಂಯೋಜನೆ ಮಾಡಿದ್ದು, ಚಂದ್ರ ಬೋಸ್ ಸಾಹಿತ್ಯ ಬರೆದಿದ್ದಾರೆ. ಚಂದ್ರಬೋಸ್ ಅವರು ಈ ಹಾಡನ್ನು ರಚಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಶೇ.90 ರಷ್ಟು ಹಾಡನ್ನು ಅರ್ಧ ದಿನದಲ್ಲಿ ಬರೆದು ಮುಗಿಸಿ, ಉಳಿದ ಶೇ.10 ರಷ್ಟನ್ನು ಪೂರ್ಣಗೊಳಿಸಲು ಸುಮಾರು 1 ವರ್ಷ 7 ತಿಂಗಳು (19 ತಿಂಗಳು) ವ್ಯಯಿಸಿದ್ದಾರೆ. ಕೊನೆಗೂ ಅವರ ಕಠಿಣ ಪರಿಶ್ರಮ, ತಾಳ್ಮೆಗೆ ಫಲ ಸಿಕ್ಕಿದೆ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: ಆರ್ಆರ್ಆರ್ ಬಾಲಿವುಡ್ ಸಿನಿಮಾವಲ್ಲ, ಅಪ್ಪಟ ತೆಲುಗು ಚಿತ್ರ: ಅಮೆರಿಕದಲ್ಲಿ ರಾಜಮೌಳಿ ಪ್ರತಿಕ್ರಿಯೆ