ಸೌತ್ ಸ್ಟಾರ್ ಡೈರೆಕ್ಟರ್ ಎಸ್ಎಸ್ ರಾಜಮೌಳಿ ನಿರ್ದೇಶನದ, ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್ಆರ್ಆರ್ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ.
ಇಂಗ್ಲಿಷ್ ಹೊರತಾದ ಸಿನಿಮಾಗಳಿಗೆ ನೀಡುವ ವಿಭಾಗದಲ್ಲಿ ಈ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಹಾಗೂ ಅತ್ಯುತ್ತಮ ಗೀತೆ ವಿಭಾಗದಲ್ಲಿ ಈ ಚಿತ್ರ ನಾಮಿನೇಟ್ ಆಗಿದೆ. ತಮ್ಮ ಚಲನ ಚಿತ್ರವನ್ನು ಗುರುತಿಸಿದ್ದಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭವನ್ನು ನಡೆಸುತ್ತಿರುವ ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ (HFPA)ಗೆ ನಿರ್ದೇಶಕ ರಾಜಮೌಳಿ ಅವರು ಧನ್ಯವಾದ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಆರ್ಆರ್ಆರ್ ಚಿತ್ರವನ್ನು ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನ ಮಾಡಿದ್ದಕ್ಕಾಗಿ ಧನ್ಯವಾದಗಳು. ಇಡೀ ತಂಡಕ್ಕೆ ಅಭಿನಂದನೆಗಳು. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ರಾಜಮೌಳಿ ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ. ಉಳಿದಂತೆ ಆರ್ಆರ್ಆರ್ ಟ್ವಿಟರ್ ಪೇಜ್, ಚಿತ್ರದ ಕಲಾವಿದರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ಸೋಮವಾರ ಸಂಜೆ ಗೋಲ್ಡನ್ ಗ್ಲೋಬ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಪ್ರಕಟಣೆ ಹಂಚಿಕೊಂಡಿದೆ. 1920ರ ದಶಕದ ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಸುತ್ತ ಹೆಣೆದ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯನ್ನು ಈ ಚಿತ್ರ ಅನುಸರಿಸುತ್ತದೆ.
-
Thanks to the jury at @goldenglobes for nominating #RRRMovie in two categories. Congratulations to the entire team…
— rajamouli ss (@ssrajamouli) December 12, 2022 " class="align-text-top noRightClick twitterSection" data="
Thanks to all the fans and audience for your unconditional love and support through out. 🤗🤗🤗
">Thanks to the jury at @goldenglobes for nominating #RRRMovie in two categories. Congratulations to the entire team…
— rajamouli ss (@ssrajamouli) December 12, 2022
Thanks to all the fans and audience for your unconditional love and support through out. 🤗🤗🤗Thanks to the jury at @goldenglobes for nominating #RRRMovie in two categories. Congratulations to the entire team…
— rajamouli ss (@ssrajamouli) December 12, 2022
Thanks to all the fans and audience for your unconditional love and support through out. 🤗🤗🤗
ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ಅದ್ಭುತ ಅಭಿನಯ ಮಾಡಿದ್ದು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ರಾಜಮೌಳಿ ಅವರ ನಿರ್ದೇಶನಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಎಲ್ಲೆಡೆ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
-
Delighted that #RRRMovie has been nominated in two categories at the Golden Globe Awards!
— Jr NTR (@tarak9999) December 12, 2022 " class="align-text-top noRightClick twitterSection" data="
Congratulations to all of us... Looking forward.
">Delighted that #RRRMovie has been nominated in two categories at the Golden Globe Awards!
— Jr NTR (@tarak9999) December 12, 2022
Congratulations to all of us... Looking forward.Delighted that #RRRMovie has been nominated in two categories at the Golden Globe Awards!
— Jr NTR (@tarak9999) December 12, 2022
Congratulations to all of us... Looking forward.
ಇದನ್ನೂ ಓದಿ: 10 ವರ್ಷದ ಬಳಿಕ ಮೆಗಾಫ್ಯಾನ್ಸ್ಗೆ ಗುಡ್ ನ್ಯೂಸ್: ಪೋಷಕರಾಗಲಿರುವ ರಾಮಚರಣ್ - ಉಪಾಸನಾ
ಈ ಚಿತ್ರವು ಮಾರ್ಚ್‌ನಲ್ಲಿ ವಿಶ್ವಾದ್ಯಂತ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಅಯಿತು. ಇದರಲ್ಲಿ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಆರ್ಆರ್ಆರ್ ಯಶಸ್ಸು: ಅಮೆರಿಕದಲ್ಲಿ ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ