ETV Bharat / entertainment

RRRಗೆ ಹಾಲಿವುಡ್​ನ ಪ್ರತಿಷ್ಠಿತ 'ದಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್' ಪ್ರಶಸ್ತಿ

author img

By

Published : Dec 4, 2022, 10:58 AM IST

ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅಭಿನಯದ ಆರ್​​ಆರ್​ಆರ್​ ಚಲನಚಿತ್ರಕ್ಕೆ ಹಾಲಿವುಡ್​ನ ಪ್ರಶಸ್ತಿ ಒಲಿದು ಬಂದಿದೆ. ರಾಜಮೌಳಿ ಅವರನ್ನು ಉತ್ತಮ ನಿರ್ದೆಶಕ ಎಂದು ದಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಗುರುತಿಸಿದೆ.

rrr-film-awarded-new-york-film-critics-circle
RRRಗೆ ಹಾಲಿವುಡ್​ನ ಪ್ರತಿಷ್ಠತ ದಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಭಾರತದಲ್ಲಿ ಮಾತ್ರವಲ್ಲದೇ ಹಾಲಿವುಡ್​ನಲ್ಲೂ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತ್ತು. ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅಭಿನಯಕ್ಕೆ ಅಭಿಮಾನಿಗಳು ಭೇಷ್​ ಎಂದಿದ್ದರು. ಸಿನಿಮಾ 1,200 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಚಿತ್ರದ ನಿರ್ದೇಶನಕ್ಕೆ ಇದೀಗ ಹಾಲಿವುಡ್‌ನ ಪ್ರತಿಷ್ಠಿತ 'ದಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್' ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪಡೆದ ರಾಜಮೌಳಿ ಅವರಿಗೆ ಸಿನಿಮಾ ಹೀರೋಗಳಾದ ರಾಮ್​ ಚರಣ್​ ಮತ್ತು ತಾರಕ್​ ಶುಭಾಶಯ ತಿಳಿಸಿದ್ದಾರೆ. ಜೂನಿಯರ್​ ಎನ್​ಟಿಆರ್​ ಟ್ವಿಟ್​ ಮಾಡಿ, 'ಅಭಿನಂದನೆಗಳು ಜಕ್ಕಣ್ಣ(ರಾಜಮೌಳಿ). ವಿಶ್ವಾದ್ಯಂತ ನಿಮ್ಮ ವೈಭವದ ಪ್ರಯಾಣ ಪ್ರಾರಂಭವಾಗಿದೆ. ನಿಮ್ಮ ಬಗ್ಗೆ ನನಗೆ ತಿಳಿದಿರುವುದನ್ನು ಜಗತ್ತು ತಿಳಿದುಕೊಳ್ಳುವ ಸಮಯ' ಎಂದಿದ್ದಾರೆ. ಇದಕ್ಕೆ 'ತಾರಕ್ ಒಂದು ಸಣ್ಣ ತಿದ್ದುಪಡಿ. ನನ್ನ ಪಯಣ ಅಲ್ಲ ನಮ್ಮ ಪಯಣ' ಎಂದು ರಾಜಮೌಳಿ ಪ್ರತಿಕ್ರಿಯಿಸಿದ್ದಾರೆ.

ರಾಮ್​ ಚರಣ್​ ಕೂಡ ಟ್ವಿಟ್​ ಮಾಡಿದ್ದು, 'ಅಭಿನಂದನೆಗಳು ರಾಜಮೌಳಿ ಅವರೇ. ಆರ್​ಆರ್​ಆರ್​ ಸಿನಿಮಾಕ್ಕಾಗಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆಯಲು ನೀವು ಅರ್ಹರು. ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ಧನ್ಯವಾದಗಳು' ಎಂದಿದ್ದಾರೆ.

ಆರ್​ಆರ್​ಆರ್ ಸಿನಿಮಾ ಬ್ರಿಟೀಷರ​ ವಿರುದ್ಧದ ಹೋರಾಟದ ಕಥನವಾಗಿ ರಾಜಮೌಳಿ ಹೆಣೆದಿದ್ದರು. ಇಬ್ಬರು ನಾಯಕರು ಬ್ರಿಟೀಷರ ವಿರುದ್ಧ ಬೇರೆ ಬೇರೆ ಉದ್ದೇಶದಿಂದ ಹೋರಾಡುವ ಕಥೆ ಇದಾಗಿತ್ತು. ಸಿನಿಮಾದಲ್ಲಿ ನೈಜ ಸ್ವಾತಂತ್ರ್ಯ ಹೋರಾಟಗಾರರಾದ ಕೊಮುರಂ ಭೀಮ್ ಪಾತ್ರದಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: 'ರಾಘು' ಸಿನಿಮಾದಲ್ಲಿ ಚಿನ್ನಾರಿ ಮುತ್ತನ ಹೊಸ ಪ್ರಯೋಗ!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.