ETV Bharat / entertainment

SIIMA 2023: ಪ್ರತಿಷ್ಠಿತ ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕೆಜಿಎಫ್​ 2, ಕಾಂತಾರ! - ಕೆಜಿಎಫ್ 2

SIIMA Nomination - ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವೀ ಅವಾರ್ಡ್ಸ್ 2023ರ ನಾಮನಿರ್ದೇಶನ ಪಟ್ಟಿ ಹೊರಬಂದಿದೆ.

RRR and KGF 2 got place in SIIMA
ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕೆಜಿಎಫ್​ 2, ಕಾಂತಾರ
author img

By

Published : Aug 2, 2023, 12:06 PM IST

Updated : Aug 2, 2023, 12:30 PM IST

ದಕ್ಷಿಣ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಕಾರ್ಯಕ್ರಮ ಸೈಮಾ ( SIIMA- South Indian International Movie Awards) ಅವಾರ್ಡ್ಸ್. ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವೀ ಅವಾರ್ಡ್ಸ್ 2023 ರಲ್ಲಿ ಮತ್ತೊಮ್ಮೆ ಸ್ಟಾರ್​ ನಟರ ಸಮಾಗಮವಾಗಲಿದೆ. ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾದ ಸಿನಿಮಾ ಮತ್ತು ತಂಡದವರಿಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿ ಇದು.

ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸೌತ್ ಸಿನಿಮಾ ಅಂದರೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಣವಾಗಿರುವ ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಸೈಮಾ 2023ಯ ನಾಮನಿರ್ದೇಶನ ಪಟ್ಟಿ ಹೊರ ಬಂದಿದೆ. ಇದರಲ್ಲಿ ಬಿಗ್​ ಸ್ಟಾರ್ಸ್ ನಟನೆಯ ಪೊನ್ನಿಯಿನ್ ಸೆಲ್ವನ್ 1, ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ಆರ್​ಆರ್​ಆರ್​, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಮತ್ತು ಅತ್ಯಂತ ಜನಪ್ರಿಯ ಕಾಂತಾರ ವಿವಿಧ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿವೆ.

ಈವೆಂಟ್ ಯಾವಾಗ, ಎಲ್ಲಿ ನಡೆಯಲಿದೆ? ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್​ನ 11ನೇ ಆವೃತ್ತಿಯ ಕಾರ್ಯಕ್ರಮ ನಡೆಯಲು ದಿನ ನಿಗದಿ ಆಗಿದೆ. ಈ ಕಾರ್ಯಕ್ರಮವನ್ನು ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 15 ಮತ್ತು 16 ರಂದು ಆಯೋಜಿಸಲಾಗಿದೆ. ಚಿತ್ರ ನಿರ್ಮಾಪಕ ವಿಷ್ಣುವರ್ಧನ್ ಇಂದೂರಿ ಅವರು ಪ್ರಾರಂಭಿಸಿದರು. ಸೈಮಾದ ಅಧ್ಯಕ್ಷರು ಅಡುಸುಮಿಲ್ಲಿ ಬೃಂದಾ ಪ್ರಸಾದ್. ಈ ಕಾರ್ಯಕ್ರಮವನ್ನು ಎರಡು ಭಾಗಗಳಲ್ಲಿ ಆಯೋಜಿಸಲಾಗಿದೆ. ಪ್ರಶಸ್ತಿಗಳ ಮೊದಲ ದಿನದಂದು, ಜನರೇಷನ್ ನೆಕ್ಸ್ಟ್ ಅವಾರ್ಡ್‌ಗಳನ್ನು ದಕ್ಷಿಣ ಭಾರತದ ಭರವಸೆಯ, ಉದಯೋನ್ಮುಖ ನಟರಿಗೆ ನೀಡಲಾಗುತ್ತದೆ. ಎರಡನೇ ದಿನ ಪ್ರಮುಖ ಸೈಮಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಕನ್ನಡ ಚಿತ್ರರಂಗದಿಂದ ನಾಮನಿರ್ದೇಶನಗೊಂಡ ಸಿನಿಮಾಗಳು: ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್ ಯಶ್ ಅವರ ಬ್ಲಾಕ್​ಬಸ್ಟರ್ ಸಿನಿಮಾ ಕೆಜಿಎಫ್ 2 ಮತ್ತು ಡಿವೈನ್​ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಪ್ರಸಿದ್ಧ ಚಿತ್ರ ಕಾಂತಾರ ಅತ್ಯುತ್ತಮ ಚಿತ್ರ ಸೇರಿದಂತೆ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ. ರಕ್ಷಿತ್ ಶೆಟ್ಟಿ ಅವರ ಸೂಪರ್​ ಹಿಟ್ ಚಿತ್ರ '777 ಚಾರ್ಲಿ', ಡಾರ್ಲಿಂಗ್​ ಕೃಷ್ಣ ದಂಪತಿಯ ಲವ್ ಮಾಕ್ಟೇಲ್​ ಮತ್ತು ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಕೂಡ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ.

ತೆಲುಗು ಚಿತ್ರರಂಗದಿಂದ ನಾಮನಿರ್ದೇಶನಗೊಂಡ ಸಿನಿಮಾಗಳು: ಟಾಲಿವುಡ್​​ನಿಂದ ವಿಶ್ವ ಪ್ರತಿಷ್ಠಿತ ಆಸ್ಕರ್ ವಿಜೇತ ಸಿನಿಮಾ 'ಆರ್​ಆರ್​ಆರ್​' 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ. ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅಭಿನಯದ ಹಿಟ್ ಚಿತ್ರ ಸೀತಾ-ರಾಮಮ್ 10 ವಿಭಾಗಗಳಲ್ಲಿ ನಾಮನಿರ್ದೇಶನಗಳನ್ನು ಸ್ವೀಕರಿಸಿದೆ. ಅಷ್ಟೇ ಅಲ್ಲ, ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಡಿಜೆ ಟಿಲ್ಲು, ಕಾರ್ತಿಕೇಯ 2 ಮತ್ತು ಮೇಜರ್‌ನಂತಹ ಹಿಟ್ ಚಿತ್ರಗಳು ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ.

ತಮಿಳು ಚಿತ್ರರಂಗದಿಂದ ನಾಮನಿರ್ದೇಶನಗೊಂಡ ಸಿನಿಮಾಗಳು: ಕಾಲಿವುಡ್​ನಿಂದ ಪೊನ್ನಿಯಿನ್ ಸೆಲ್ವನ್ 1 ಸಿನಿಮಾ 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಮತ್ತು ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಅತ್ಯುತ್ತಮ ಚಿತ್ರ ಸೇರಿದಂತೆ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಇದಲ್ಲದೇ, ಲವ್ ಟುಡೇ, ತಿರುಚಿತ್ರಂಬಲಂ ಮತ್ತು ಆರ್ ಮಾಧವನ್ ಅವರ ರಾಕೆಟ್ರಿ-ದಿ ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ.

ಮಲಯಾಳಂ ಚಿತ್ರರಂಗದಿಂದ ನಾಮನಿರ್ದೇಶನಗೊಂಡ ಸಿನಿಮಾಗಳು: ಮಲಯಾಳಂನ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರ ಭೀಷ್ಮ ಎಂಟು ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಟೊವಿನೋ ಥೋಮಸ್ ಅವರ ತಲ್ಲುಮಲ ಚಿತ್ರ 7 ನಾಮನಿರ್ದೇಶನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಜಯ ಜಯ ಜಯ ಜಯ ಹೇ, ನಾ ಥನ್ ಕೇಸ್ ಕೊಡು ಮತ್ತು ಜನ ಗಣ ಮನ ಚಿತ್ರಗಳು ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ.

ಇದನ್ನೂ ಓದಿ: Shriya Saran: ವಿದೇಶ ಪ್ರವಾಸದಲ್ಲಿ ಕಬ್ಜ ನಟಿ - ಲಿಪ್​ ಲಾಕ್ ಫೋಟೋ ಶೇರ್ ಮಾಡಿದ ಶ್ರೀಯಾ ಶರಣ್​​

Last Updated : Aug 2, 2023, 12:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.