ಆಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಶುಕ್ರವಾರದಂದು ವಿಶ್ವದಾದ್ಯಂತ ತೆರೆ ಕಂಡಿದೆ. ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರೂ ಕೂಡ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಸಿನಿಮಾ ನಿರೀಕ್ಷೆ ತಲುಪಿದೆ. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಸಿನಿಮಾ ಮೊದಲ ದಿನ ಎರಡಂಕಿಯ ಹಣ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯ ಆರಂಭಿಕ ಅಂಕಿ-ಅಂಶ ಉತ್ತಮವಾಗಿವೆ. ಸಿನಿಮಾ ಸ್ವೀಕರಿಸಿರುವ ಸಕಾರಾತ್ಮಕ ಸ್ಪಂದನೆ ಮುಂದಿನ ದಿನಗಳಿಗೆ ಸಹಕಾರಿಯಾಗಲಿದೆ. 2ನೇ ಮತ್ತು ಮೂರನೇ ದಿನ ವಾರಾಂತ್ಯ ಆದ ಹಿನ್ನೆಲೆ ಮತ್ತು ಪಾಸಿಟಿವ್ ಮೌತ್ ಟಾಕ್ ಪರಿಣಾಮವಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಿದೆ ಎಂದು ಸಿನಿ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರೇಕ್ಷಕರಿಂದ ಉತ್ತಮ ವಿಮರ್ಷೆ ಸ್ವೀಕರಿಸಿರುವುದರಿಂದ ವಾರಾಂತ್ಯದ ಸಂಗ್ರಹಣೆಯಲ್ಲಿ ಗಮನಾರ್ಹ ಏರಿಕೆ ಆಗಲಿದೆ ಎಂಬ ನಿರೀಕ್ಷೆಯಿದೆ.
ಸಿನಿ ಉದ್ಯಮದ ಟ್ರ್ಯಾಕರ್ ಸಾಕ್ನಿಲ್ಕ್ (Sacnilk) ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಭಾರತದಲ್ಲಿ 11.50 ಕೋಟಿ ರೂಪಾಯಿಗಳನ್ನು ಗಳಿಸಿದೆ (ಆರಂಭಿಕ ಅಂದಾಜಿನ ಪ್ರಕಾರ). ಮೊದಲ ದಿನ ಚಿತ್ರಮಂದಿರಗಳಲ್ಲಿ ಒಟ್ಟು ಶೇ. 21.25 ರಷ್ಟು ಆಕ್ಯುಪೆನ್ಸಿ ದರ ಇತ್ತು. ಬೆಳಗ್ಗಿನ ಶೋಗಳು ಶೇ. 12.16 ರಷ್ಟು ಆಕ್ಯುಪೆನ್ಸಿಯನ್ನು ಹೊಂದಿದ್ದರೆ, ಸಂಜೆ-ರಾತ್ರಿ ಶೋಗಳು ಶೇ. 36.85 ರಷ್ಟು ಆಕ್ಯುಪೆನ್ಸಿ ಹೊಂದಿತ್ತು.
ಇದನ್ನೂ ಓದಿ: RARKPK Release: ವಿಶ್ವಾದ್ಯಂತ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ರಿಲೀಸ್: ಪ್ರೇಕ್ಷಕರೇನಂದ್ರು ಗೊತ್ತಾ?
'ಏ ದಿಲ್ ಹೈ ಮುಷ್ಕಿಲ್' ಕರಣ್ ಜೋಹರ್ ಅವರು ಕೊನೆಯದಾಗಿ ನಿರ್ದೇಶಿಸಿರುವ ಸಿನಿಮಾ. ಸರಿಸುಮಾರು ಏಳು ವರ್ಷಗಳ ಬ್ರೇಕ್ ನಂತರ ಕರಣ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಇನ್ನು ಗಲ್ಲಿ ಬಾಯ್ ಸೂಪರ್ ಹಿಟ್ ಜೋಡಿ ಆಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ಅವರ ಎರಡನೇ ಸಿನಿಮಾವಿದು. ಅಲ್ಲದೇ, ಧರ್ಮೇಂದ್ರ, ಶಬಾನಾ ಅಜ್ಮಿ, ಜಯಾ ಬಚ್ಚನ್ ಅವರಂತಹ ಹಿರಿಯ ಸ್ಟಾರ್ ನಟರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರದ ಮೆಲೆ ಅಭಿಮಾನಿಗಳು ಅಪಾರ ನಿರೀಕ್ಷೆ ಹೊಂದಿದ್ದರು. ಪ್ರಸ್ತುತ ಪ್ರೇಕ್ಷಕರ ವಿಮರ್ಷೆಗಳನ್ನು ಗಮನಿಸಿದರೆ ಅವರ ನಿರೀಕ್ಷೆ ತಲುಪುವಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಬಹುತೇಕ ಯಶಸ್ವಿ ಆಗಿದೆ.
ಇದನ್ನೂ ಓದಿ: 'ಮೈ ನೇಮ್ ಈಸ್ ಲಖನ್' ಸಾಂಗ್ ಆನಂದಿಸಿದ ವಿದೇಶಿಗ - ಮೆಚ್ಚಿನ ನಟ ಅನಿಲ್ ಕಪೂರ್ ಎದುರಿದ್ದರೂ ಗುರುತಿಸದ ಅಭಿಮಾನಿ