ETV Bharat / entertainment

RARKPK: ನಾಲ್ಕೇ ದಿನದಲ್ಲಿ ₹50 ಕೋಟಿ ಬಾಚಿದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' - ಈಟಿವಿ ಭಾರತ ಕನ್ನಡ

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಬಿಡುಗಡೆಯಾಗಿ ನಾಲ್ಕನೇ ದಿನ 7.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

RARKPK
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'
author img

By

Published : Aug 1, 2023, 3:20 PM IST

ಬಾಲಿವುಡ್​ ನಟರಾದ ರಣ್​ವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಥಿಯೇಟರ್​ಗಳಲ್ಲಿ ಧೂಳೆಬ್ಬಿಸುತ್ತಿದೆ. ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 50 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಮೊದಲ ವಾರಾಂತ್ಯದಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಈ ಚಿತ್ರ ಜುಲೈ 28 ರಂದು (ಶುಕ್ರವಾರ) ತೆರೆಗೆ ಅಪ್ಪಳಿಸಿತ್ತು.

ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಅವರ ಆರಂಭಿಕ ಅಂದಾಜಿನ ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಬಿಡುಗಡೆಯಾದ ನಾಲ್ಕನೇ ದಿನ 7.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಮೊದಲ ದಿನ 11.1 ಕೋಟಿ ರೂ., ಎರಡನೇ ದಿನ 16.5 ಕೋಟಿ ರೂ., ಮೂರನೇ ದಿನ 19 ಕೋಟಿ ರೂ. ಗಳಿಸಿತ್ತು. ವಾರಾಂತ್ಯದ ಎರಡೂ ದಿನವೂ ಥಿಯೇಟರ್​ನಲ್ಲಿ ಚಿತ್ರ ಧೂಳೆಬ್ಬಿಸಿದೆ. ಆದರೆ ಮೂರನೇ ದಿನಕ್ಕಿಂತ ನಾಲ್ಕನೇ ದಿನ ಕೊಂಚ ಕಲೆಕ್ಷನ್​ ಕಡಿಮೆ ಆಗಿದೆ. ಸಿನಿಮಾ ಭಾರತದಲ್ಲಿ ಒಟ್ಟು 53.40 ಕೋಟಿ ರೂ. ಗಳಿಸಿದೆ.

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾಗೆ ಕಾಂಪಿಟೇಶನ್​ ನೀಡಲು ಯಾವುದೇ ಹಿಂದಿ ಸಿನಿಮಾಗಳು ಸದ್ಯ ಬಿಡುಗಡೆಯಾಗಿಲ್ಲ. ಆದರೆ ಹಾಲಿವುಡ್​ ಸಿನಿಮಾಗಳಾದ ಓಪನ್‌ಹೈಮರ್ ಮತ್ತು ಬಾರ್ಬಿಯೊಂದಿಗೆ ಜನರನ್ನು ಸೆಳೆಯುವಲ್ಲಿ ಕರಣ್​ ಜೋಹರ್​ ಚಿತ್ರ ಹೆಚ್ಚು ಪ್ರಯತ್ನಿಸುತ್ತಿದೆ. ವರದಿಗಳ ಪ್ರಕಾರ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ 178 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಂಡಿದೆ. 2300 ಪರದೆಗಳಲ್ಲಿ (2000 ಭಾರತ ಮತ್ತು 300 ವಿದೇಶ) ಶುಕ್ರವಾರ ಬಿಡುಗಡೆಯಾಯಿತು.

ಇದನ್ನೂ ಓದಿ: ಇವರ ವಯಸ್ಸು 68 ಅಂದ್ರೆ ನಂಬ್ತೀರಾ - ಯುವ ಕಲಾವಿದರೊಂದಿಗೆ ತರುಣಿಯಂತೆ ಕಂಗೊಳಿಸಿದ ಬಾಲಿವುಡ್​ ಬ್ಯೂಟಿ ರೇಖಾ

ಚಿತ್ರತಂಡ ಹೀಗಿದೆ.. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ರಣ್​ವೀರ್​ ಸಿಂಗ್​ ಮತ್ತು ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿದ್ದಾರೆ. ಧರ್ಮೇಂದ್ರ, ಜಯಾ ಬಚ್ಚನ್, ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಕಥೆ ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆ ಮತ್ತು ಸಂಸ್ಕೃತಿಯಿಂದ ಬಂದ ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿ ಸುತ್ತ ಸುತ್ತುತ್ತದೆ. ಈ ಜೋಡಿಯ ಪ್ರೇಮಕಥೆಯೇ ಚಿತ್ರದ ಕೇಂದ್ರಬಿಂದು. ಅವರ ವಿಭಿನ್ನ ಆಚರಣೆಗಳು, ಜೀವನ ಶೈಲಿಯಿಂದಾಗಿ ಉದ್ಭವಿಸುವ ಸವಾಲುಗಳು ಮತ್ತು ಸಂತೋಷಕರ ಕ್ಷಣಗಳನ್ನು ಈ ಸಿನಿಮಾ ಹೇಳುತ್ತದೆ.

ಕರಣ್ ಜೋಹರ್ 2016 ರಲ್ಲಿ ಕೊನೆಯದಾಗಿ 'ಏ ದಿಲ್ ಹೈ ಮುಷ್ಕಿಲ್' ಸಿನಿಮಾ ನಿರ್ದೇಶಿಸಿದ್ದರು. ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದು, ಕಥೆ ಮತ್ತು ನಿರ್ದೇಶನ ಶೈಲಿಯನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡಕ್ಕೆ ನಟ ಅನುಪಮ್​ ಖೇರ್ ಭೇಟಿ - ಮುಂದಿನ ಸಿನಿಮಾ ಶೂಟಿಂಗ್​ಗೆ ತಯಾರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.