ETV Bharat / entertainment

ಕೇರಳ ಪೊಲೀಸ್​ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ರಿಷಬ್​ ಶೆಟ್ಟಿ, ವಿಜಯ್ ಕಿರಗಂದೂರು - ರಿಷಬ್​ ಶೆಟ್ಟಿ ವಿಚಾರಣೆ

ವರಾಹರೂಪಂ ಹಾಡಿಗೆ ಸಂಬಂಧಿಸಿದ ಹಕ್ಕು ಸ್ವಾಮ್ಯ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ತಮ್ಮ ಹೇಳಿಕೆ ದಾಖಲಿಸಲು ಇಂದು ಬೆಳಗ್ಗೆ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು ಕೋಯಿಕೋಡ್ ಟೌನ್ ಪೊಲೀಸ್ ಠಾಣೆಗೆ ಹಾಜರಾಗಿದ್ದರು.

Rishab Shetty Vijay Kirgandur
ವಿಚಾರಣೆಗೆ ಹಾಜರಾದ ರಿಷಬ್​ ಶೆಟ್ಟಿ, ವಿಜಯ್ ಕಿರಗಂದೂರು
author img

By

Published : Feb 12, 2023, 1:57 PM IST

Updated : Feb 12, 2023, 3:51 PM IST

ವಿಚಾರಣೆಗೆ ಹಾಜರಾದ ರಿಷಬ್​ ಶೆಟ್ಟಿ, ವಿಜಯ್ ಕಿರಗಂದೂರು

ಕೋಯಿಕೋಡ್ (ಕೇರಳ): ಕನ್ನಡ ಚಿತ್ರರಂಗದ ಸೂಪರ್​ಹಿಟ್​ ಚಿತ್ರ ಕಾಂತಾರದ "ವರಾಹರೂಪಂ" ಹಾಡಿನ ಮೇಲೆ ಕೇರಳದ ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್ ಕೃತಿಚೌರ್ಯ ಆರೋಪ ಮಾಡಿದೆ. ಈ ಪ್ರಕರಣದ ತನಿಖೆ ಮುಂದುವರಿದಿದೆ. ಹಾಡಿಗೆ ಸಂಬಂಧಿಸಿದ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಟ, ನಿರ್ದೇಶಕ ರಿಷಬ್ ಶೆಟ್ಟಿ ಇಂದು ಕೇರಳ ಪೊಲೀಸರ ಮುಂದೆ ಹಾಜರಾದರು. ಇಬ್ಬರೂ ಕೋಯಿಕೋಡ್ ಟೌನ್ ಪೊಲೀಸ್ ಠಾಣೆಗೆ ಬೆಳಗ್ಗೆ 9 ಗಂಟೆಗೆ ಆಗಮಿಸಿದ್ದು, ಹೇಳಿಕೆ ದಾಖಲಿಸಿದ್ದಾರೆ.

ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು ಅವರಿಗೆ ಇಂದು ಮತ್ತು ನಾಳೆ ಬೆಳಗ್ಗೆ 10 ರಿಂದ 1 ಗಂಟೆಯೊಳಗೆ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಕೇರಳ ಪೊಲೀಸ್​ ಸೂಚನೆ ನೀಡಿತ್ತು. ಆದರೆ ಅಭಿಮಾನಿಗಳ ನೂಕುನುಗ್ಗಲಿನ ಕಾರಣ ನೀಡಿ ಇಬ್ಬರೂ ಇಂದು ಬೆಳಗ್ಗೆಯೇ ಆಗಮಿಸಿದ್ದರು ಎಂದು ತನಿಖಾಧಿಕಾರಿ ಡಿಸಿಪಿ ಕೆ.ಇ.ಬೈಜು ತಿಳಿಸಿದ್ದಾರೆ.

ಇದನ್ನೂ ಓದಿ: 'RRR​': ರಾಮ್​ ಚರಣ್ ಅಭಿನಯ ಕೊಂಡಾಡಿದ ​ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರಾನ್

ಕನ್ನಡಿಗರ ಮನಸೂರೆಗೊಂಡಿದ್ದ ವರಾಹರೂಪಂ ಹಾಡು 2015ರಲ್ಲಿ ಕೇರಳದಲ್ಲಿ ರಿಲೀಸ್​ ಆಗಿದ್ದ ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್​ನ 'ನವರಸ'ದ ನಕಲು ಎಂದು ಆರೋಪಿಸಲಾಗಿತ್ತು. ಹಾಡಿನ ಪ್ರಸಾರಕ್ಕೆ ತಡೆ ನೀಡಬೇಕು ಹಾಗು ನಿರ್ದೇಶಕ ಮತ್ತು ನಿರ್ಮಾಪಕರನ್ನು ಕೃತಿಚೌರ್ಯ ಆರೋಪದಡಿ ಬಂಧಿಸಬೇಕು ಎಂದು ಪ್ರಕರಣ ದಾಖಲಿಸಿತ್ತು. ಪ್ರಕರಣ ಇತ್ತೀಚೆಗೆ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು.

ಇದನ್ನೂ ಓದಿ: ವರಾಹರೂಪಂ ವಿವಾದ: ರಿಷಬ್​ ಶೆಟ್ಟಿ, ವಿಜಯ್​ ಕಿರಗಂದೂರಿಗೆ ಸುಪ್ರೀಂಕೋರ್ಟ್ ರಿಲೀಫ್​

ಈ ಹಿಂದೆ ಕೇರಳದಲ್ಲಿ ದಾಖಲಾಗಿದ್ದ ಪ್ರಕರಣಗಳು ಹಿನ್ನಡೆ ಕಂಡ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ ಮೊರೆ ಹೋಗಲಾಗಿತ್ತು. ಆದ್ರೆ ಸುಪ್ರೀಂನಲ್ಲೂ ಈ ತಂಡ ಹಿನ್ನೆಡೆ ಸಾಧಿಸಿದೆ. ಈಗಾಗಲೇ ದಾಖಲಾಗಿರುವ ಪ್ರಕರಣಗಳ ಕುರಿತು ವಿಚಾರಣೆ ಮುಂದುವರಿದಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ: 'ಕಾಂತಾರ 2'ನಲ್ಲಿ ನಟಿಸ್ತಾರಾ ಊರ್ವಶಿ ರೌಟೇಲಾ, ಅಸಲಿ ವಿಚಾರವೇನು?

Last Updated : Feb 12, 2023, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.