ETV Bharat / entertainment

ಕಾಡಿನಂಚಿನ ಜನರ ಸಮಸ್ಯೆ ಪರಿಹರಿಸುವಂತೆ ಸಿಎಂಗೆ ಮನವಿ ಪತ್ರ ಸಲ್ಲಿಸಿದ ರಿಷಬ್​ ಶೆಟ್ಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕಾಡಿನಂಚಿನ ಜನರ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದ್ದಾರೆ ಕಾಂತಾರ ನಟ ರಿಷಬ್​ ಶೆಟ್ಟಿ.

Rishab Shetty appeal to cm bommai
ಸಿಎಂಗೆ ಮನವಿ ಪತ್ರ ಸಲ್ಲಿಸಿದ ರಿಷಬ್​ ಶೆಟ್ಟಿ
author img

By

Published : Mar 8, 2023, 3:43 PM IST

ರಾಜಕೀಯಕ್ಕೆ ಕಾಂತಾರ ನಟ ರಿಷಬ್​ ಶೆಟ್ಟಿ ಎಂಟ್ರಿ ಕೊಡ್ತಾರಾ ಅನ್ನೋ ಚರ್ಚೆ ಇದ್ದು, ಈ ಹೊತ್ತಿನಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಸಿಎಂ ಬೊಮ್ಮಾಯಿ ಜೊತೆಗಿನ ಫೋಟೋ ಕೂಡ ಶೇರ್ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಭೇಟಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಈ ಭೇಟಿಯ ಹಿಂದಿನ ಉದ್ದೇಶ ಸಹ ತಿಳಿಸಿದ್ದಾರೆ.

  • ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ,ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶ್ರೀ @BSBommai ಯವರಿಗೆ ಧನ್ಯವಾದಗಳು.@CMofKarnataka @aranya_kfd pic.twitter.com/VRL9YDDZcg

    — Rishab Shetty (@shetty_rishab) March 8, 2023 " class="align-text-top noRightClick twitterSection" data=" ">

ಸಿಎಂಗೆ ಮನವಿ ಪತ್ರ ಸಲ್ಲಿಸಿದ ರಿಷಬ್​ ಶೆಟ್ಟಿ: ನಟ, ನಿರ್ದೇಶಕ ರಿಷಬ್​ ಶೆಟ್ಟಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಸ್ಯೆಯೊಂದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿರುವುದು ಈ ಫೋಟೋದಲ್ಲಿ ಗೊತ್ತಾಗುತ್ತದೆ. ತಮ್ಮ ಮನವಿಗೆ ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಕೂಡ ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸ್ವತಃ ನಟ ರಿಷಬ್​ ಶೆಟ್ಟಿ ಮಾತನಾಡಿರುವ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

ರಿಷಬ್​ ಶೆಟ್ಟಿ ಟ್ವೀಟ್: ''ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜೊತೆ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಚರ್ಚಿಸಿ ಕಲೆ ಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದಗಳು'' ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲೇನಿದೆ?: ಕಾಂತಾರ ಸಿನಿಮಾ ಮಾಡುವಾಗ ಕಾಡಂಚಿನ ಜನರ ಪರಿಚಯ ಆಯಿತು. ಅರಣ್ಯಾಧಿಕಾರಿ, ಸಿಬ್ಬಂದಿ ಜೊತೆಯೂ ಬೆರೆಯಲು ಅವಕಾಶ ಸಿಕ್ಕಿತು. ಕಾಡಾನೆ ಸಮಸ್ಯೆ, ಕಾಳ್ಗಿಚ್ಚು ಸೆರಿದಂತೆ ಕೆಲ ಸಮಸ್ಯೆಗಳು ನಮ್ಮ ಅರಿವಿಗೆ ಬಂದಿತು. ಈ ಬಗ್ಗೆ 20 ಅಂಶಗಳುಳ್ಳ ಮನವಿ ಪತ್ರವನ್ನು ಸಿಎಂ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಇಂತಹ ಮುಖ್ಯಮಂತ್ರಿ ಪಡೆದ ನಾವು ಧನ್ಯ ಎಂದು ರಿಷಬ್​ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಪಿಎಯಿಂದ ನಟಿ ಅರ್ಚನಾ ಗೌತಮ್​ಗೆ ಕೊಲೆ ಬೆದರಿಕೆ ಆರೋಪ.. ದೂರು ದಾಖಲು

ಕೆಲ ದಿನಗಳ ಹಿಂದಷ್ಟೇ ಕಾಳ್ಗಿಚ್ಚಿನ ಬಗ್ಗೆ ನಟ ರಿಷಬ್​ ಶೆಟ್ಟಿ ಟ್ವೀಟ್ ಮಾಡಿದ್ದರು. ಕಿಡಿಗೇಡಿಗಳು ಹಚ್ಚಿದ ಕಾಡ್ಗಿಚ್ಚಿಗೆ ಹಸಿರು ಸೈನಿಕ ಗಸ್ತು ಅರಣ್ಯ ಪಾಲಕ ಸುಂದರೇಶ್ ಹುತಾತ್ಮರಾಗಿದ್ದಾರೆ. ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳೋದನ್ನು ತಡೆಯಲು ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಸಿಬ್ಬಂದಿ ಜೊತೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಕಾಡುಗಳ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಅದು ನಮ್ಮೆಲ್ಲರ ಜವಾಬ್ದಾರಿ ಎಂದು ಕೂಡ ತಿಳಿಸಿದ್ದರು.

ಇದನ್ನೂ ಓದಿ: TJMM ಸಿನಿಮಾದಲ್ಲಿ ರಣ್​​ಬೀರ್ ಶ್ರದ್ಧಾ ರೊಮ್ಯಾನ್ಸ್: ಗೆಲ್ಲುವ ವಿಶ್ವಾಸದಲ್ಲಿ ಚಿತ್ರತಂಡ

ಭಾರತ ಚಿತ್ರರಂಗಕ್ಕೆ ಕೆಜಿಎಫ್‌ ಎಂಬ ಅತ್ಯುತ್ತಮ ಚಿತ್ರ ನೀಡಿರುವ ಹೊಂಬಾಳೆ ಫಿಲ್ಮ್ಸ್​​ನ ವಿಜಯ್ ಕಿರಗಂದೂರು ಅವರ ನಿರ್ಮಾಣದ ಕಾಂತಾರ ಚಿತ್ರ ಅಭೂತಪೂರ್ವ ಯಶಸ್ಸು ಕಂಡಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಚಿತ್ರದ ಮಾನವ ಮತ್ತು ಪ್ರಕೃತಿ ಸಂಘರ್ಷದ ಕಥೆ ಪ್ರೇಕ್ಷಕರ ಗಮನ ಸೆಳೆದಿತ್ತು. ಕರಾವಳಿ ಸೊಗಡಿನ ಕ್ರೀಡೆ, ಭೂತಾರಾಧನೆ ಸೇರಿದಂತೆ ಹಲವು ವಿಷಯಗಳು ಪ್ರೇಕ್ಷಕರ ಮನ ಮುಟ್ಟಿದೆ. ಈ ಸಿನಿಮಾ ಕಾಡಿನ ವಿಚಾರವನ್ನೇ ಒಳಗೊಂಡಿದ್ದು, ಸದ್ಯ ರಿಷಬ್​ ಶೆಟ್ಟಿ ಕಾಡಿನ ಮತ್ತು ಕಾಡಿನಂಚಿನ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕನ್ನಡಿಗರ ಗಮನ ಸೆಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.