ETV Bharat / entertainment

ಖ್ಯಾತ ಚಿತ್ರಕಲಾವಿದ ಬಿ.ಕೆ.ಎಸ್‌. ವರ್ಮಾ ಇನ್ನಿಲ್ಲ.. - ಮೈಸೂರಿನ ಜಗನ್ಮೋಹನ ಅರಮನೆ

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಚಿತ್ರಕಲಾವಿದರಾದ ಬಿ.ಕೆ.ಎಸ್ ವರ್ಮಾ ಇಂದು ನಿಧನರಾಗಿದ್ದಾರೆ.

Senior artist BKS Verma
ಹಿರಿಯ ಚಿತ್ರಕಲಾವಿದರಾದ ಬಿ.ಕೆ.ಎಸ್ ವರ್ಮಾ
author img

By

Published : Feb 6, 2023, 12:07 PM IST

Updated : Feb 6, 2023, 2:06 PM IST

ಬೆಂಗಳೂರು: ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8:20 ಕ್ಕೆ ಹೆಬ್ಬಾಳದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬಿ.ಕೆ.ಎಸ್ ವರ್ಮಾ ಅವರಿಗೆ 76 ವರ್ಷ ವಯಸ್ಸಾಗಿತ್ತು.

Senior artist BKS Verma
ಬಿ.ಕೆ.ಎಸ್‌.ವರ್ಮಾರವರ ಕೈಯಲ್ಲಿ ಅರಳಿರುವ ಅರ್ಥಗರ್ಭಿತ ಚಿತ್ರ

ಬಿ.ಕೆ.ಎಸ್ ವರ್ಮಾ ಅವರು ಅತ್ತಿಬೆಲೆ ತಾಲೂಕಿನ ಕರ್ನೂರಿನಲ್ಲಿ 1949 ರಲ್ಲಿ ಜನಿಸಿದ್ದರು. ಬೆಂಗಳೂರು ವಿವಿಯು ಇವರಿಗೆ 2011 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಪರಿಸರ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುತ್ತಿದ್ದ ಅವರು, ಎಲ್ಲರ ಗಮನಸೆಳೆದಿದ್ದರು. ತಮ್ಮ 6 ನೇ ವಯಸ್ಸಿಗೇ ರೇಖಾಚಿತ್ರ ಕೂಡ ಪ್ರಾರಂಭಿಸಿದ್ದರು.

  • ಅತ್ಯದ್ಭುತ ಚಿತ್ರಗಳ ಮೂಲಕ ವಿಶ್ವಾದ್ಯಂತ ಉತ್ತಮ ಹೆಸರು ಗಳಿಸಿದ್ದ,ಆಧುನಿಕ ರವಿವರ್ಮ, ಖ್ಯಾತ ಚಿತ್ರ ಕಲಾವಿದ ಬಿ. ಕೆ. ಎಸ್. ವರ್ಮಾರವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ.
    1/2 pic.twitter.com/TqxjTCLKLV

    — Basavaraj S Bommai (@BSBommai) February 6, 2023 " class="align-text-top noRightClick twitterSection" data=" ">

ವರ್ಮಾ ಅವರ ಬಾಲ್ಯದ ಹೆಸರು ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ. ಆದರೆ ಕಲಾ ಪ್ರಪಂಚಕ್ಕೆ ಅವರು ಬಿ ಕೆ ಎಸ್​ ವರ್ಮಾ ಎಂದೇ ಖ್ಯಾತರು. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮಾ ಅವರ ಚಿತ್ರಕಲೆಗಳನ್ನು ನೋಡುತ್ತಿದ್ದಾಗ ಮನಸೋತು, ತಮ್ಮ ಹೆಸರಿನೊಂದಿಗೆ ವರ್ಮಾ ಎಂದು ಜೋಡಿಸಿಕೊಂಡಿದ್ದರು. ನಂತರ ನಡೆದದ್ದೆಲ್ಲ ಇತಿಹಾಸ‌. ಅದ್ಭುತ ಚಿತ್ರ ಕಲಾವಿದರಾಗಿ ಬೆಳೆದು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ವರ್ಮಾ ನಿಧನಕ್ಕೆ ಸಿಎಂ ಸೇರಿ ಬಿಜೆಪಿ ನಾಯಕರ ಸಂತಾಪ: ಚಿತ್ರಕಲಾವಿದ ಬಿಕೆಎಸ್ ವರ್ಮಾ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.

ಅತ್ಯದ್ಭುತ ಚಿತ್ರಗಳ ಮೂಲಕ ವಿಶ್ವಾದ್ಯಂತ ಉತ್ತಮ ಹೆಸರು ಗಳಿಸಿದ್ದ, ಆಧುನಿಕ ರವಿವರ್ಮ, ಖ್ಯಾತ ಚಿತ್ರ ಕಲಾವಿದ ಬಿಕೆಎಸ್ ವರ್ಮಾರವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಅವರ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಚಿತ್ರಕಲಾ ಪ್ರಪಂಚದ ಮೇರು ಕಲಾವಿದ ಶ್ರೀ ಬಿ ಕೆ ಎಸ್ ವರ್ಮಾ ಅವರ ನಿಧನದ ಸುದ್ದಿ ದುಃಖ ತಂದಿದೆ. ಕಲ್ಪನಾಶಕ್ತಿಗೆ ಕುಂಚದ ಮೂಲಕ ಜೀವ ತುಂಬಿದ ಅಪ್ರತಿಮ ಕಲಾವಿದ, ಚಿತ್ರಕಲೆಯನ್ನೇ ಉಸಿರಾಡಿದ ಅವರ ಬದುಕು ಹಲವು ಯುವ ಕಲಾವಿದರಿಗೆ ಸ್ಪೂರ್ತಿ. ಭಗವಂತನು ಆ ಮಹಾನ್ ಚೇತನಕ್ಕೆ ಸದ್ಗತಿ ಕರುಣಿಸಲಿ. ಓಂ ಶಾಂತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  • ಚಿತ್ರಕಲಾ ಪ್ರಪಂಚದ ಮೇರು ಕಲಾವಿದ ಶ್ರೀ ಬಿ ಕೆ ಎಸ್ ವರ್ಮಾ ಅವರ ನಿಧನದ ಸುದ್ದಿ ದುಃಖ ತಂದಿದೆ.
    ಕಲ್ಪನಾಶಕ್ತಿಗೆ ಕುಂಚದ ಮೂಲಕ ಜೀವ ತುಂಬಿದ ಅಪ್ರತಿಮ ಕಲಾವಿದ, ಚಿತ್ರಕಲೆಯನ್ನೇ ಉಸಿರಾಡಿದ ಅವರ ಬದುಕು ಹಲವು ಯುವ ಕಲಾವಿದರಿಗೆ ಸ್ಪೂರ್ತಿ.
    ಭಗವಂತನು ಆ ಮಹಾನ್ ಚೇತನಕ್ಕೆ ಸದ್ಗತಿ ಕರುಣಿಸಲಿ.
    ಓಂ ಶಾಂತಿ. pic.twitter.com/1yKYUBUUAW

    — Nalinkumar Kateel (@nalinkateel) February 6, 2023 " class="align-text-top noRightClick twitterSection" data=" ">

ಚಿತ್ರ ಕಲಾವಿದ ಡಾ. ಬಿಕೆಎಸ್ ವರ್ಮಾ ಅವರ ನಿಧನದ ಸುದ್ದಿ ತಿಳಿದು ಅಪಾರ ದುಃಖವಾಯಿತು. ವರ್ಮಾರವರು ರಚಿಸಿರುವ ದೇವರುಗಳ ಹಾಗೂ ಪ್ರಸಿದ್ಧ ವ್ಯಕ್ತಿಗಳ ತೈಲಚಿತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಶ್ರೀಯುತರು ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅನೇಕ ಉದಯೋನ್ಮುಖ ಕಲಾವಿದರಿಗೆ ಪ್ರೇರಣೆಯಾಗಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ. ಅವರ ಕಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚಿಸಿದರು.

ಶ್ರೇಷ್ಠ ಕಲಾವಿದರು, ವಿದ್ವಾಂಸರು, ಕುಂಚ ಬ್ರಹ್ಮನೆಂದೇ ಖ್ಯಾತರಾಗಿದ್ದ ಬಿಕೆಎಸ್ ವರ್ಮಾರವರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂದು ತಿಳಿಸಲು ವಿಷಾದವೆನಿಸುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದೇವರು ದುಃಖವನ್ನು ತಡೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಭಾವಪೂರ್ಣ ಶ್ರದ್ದಾಂಜಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಚಿತ್ರಕಲಾ ಪ್ರಪಂಚಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ನಾಡಿನ ಹೆಮ್ಮೆಯ ಕಲಾವಿದ ಬಿಕೆಎಸ್ ವರ್ಮಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿ ಎಂದು ಬಿಜೆಪಿ ಅಧಿಕೃತ ಟ್ವೀಟ್ ಖಾತೆಯಲ್ಲಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ.

ಇದನ್ನೂ ಓದಿ: ವಿಶ್ವದ ಜನರು ನೋಡಿದ್ದು ಕಾಂತಾರ ‘2’, ಪಾರ್ಟ್ 1 ಬರಬೇಕಿದೆ: ನಿರ್ದೇಶಕ ರಿಷಬ್ ಶೆಟ್ಟಿ

Last Updated : Feb 6, 2023, 2:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.