ಗೂಗ್ಲಿ, ನಟಸಾರ್ವಭೌಮ ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪವನ್ ಒಡೆಯರ್. ಟ್ರೈಲರ್ ಹಾಗೂ ಹಾಡುಗಳಿಂದಲೇ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿದ್ದ ರೇಮೊ ಸಿನಿಮಾ ಇಂದು ರಾಜ್ಯಾದ್ಯಂತ 175ಕ್ಕೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಲವ್ ಸ್ಟೋರಿ ಜೊತೆಗೆ ಸಂಬಂಧಗಳನ್ನು ಬೆಸುಯುವ ಕಥೆ ಇಟ್ಟುಕೊಂಡು ಬಂದ ರೇಮೊ ಚಿತ್ರಕ್ಕೆ ಸಿನಿ ಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಅವರ ನಟನೆಗೆ ಈ ಸಿನಿಮಾದಲ್ಲಿ ಹೆಚ್ಚಿನ ಸ್ಕೋಪ್ ಸಿಕ್ಕಿದೆ. ಇನ್ನು ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಆರಡಿ ಕಟೌಟ್ ನಟ ಸಿಕ್ಕಂತಾಗಿದೆ.
ಇಂತಂಹ ಸಮಯದಲ್ಲಿ ಸಿನಿಮಾ ತಂಡ ಟೈಟಲ್ ಚೇಂಜ್ ಮಾಡಲು ನಿರ್ಧಾರ ಮಾಡಿದ್ದು, ಪ್ರೇಕ್ಷಕರನ್ನು ದಂಗಾಗಿಸಿತ್ತು. ಆದರೆ ಇದು ರಿಯಲ್ ಅಲ್ಲ ರೀಲು ಅನ್ನೋದು ಅಷ್ಟೇ ಸತ್ಯ. ಹೌದು, ಪವನ್ ಒಡೆಯರ್, ನಾಯಕ ನಟ ಇಶಾನ್ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮೋಹಕ ತಾರೆ ರಮ್ಯಾ ಜೊತೆ ನಟನೆ ಮಾಡಲು ಅವಕಾಶ ಸಿಕ್ಕರೆ ಏನು ಮಾಡ್ತೀರಾ ಎಂದು ಪವನ್ ಒಡೆಯರ್ ಇಶಾನ್ಗೆ ಕೇಳ್ತಾರೆ. ಆಗ ಇಶಾನ್ ಜೋಶ್ನಲ್ಲಿ ಒಕೆ ಎನ್ನುತ್ತಾರೆ. ಆದರೆ ಅವರನ್ನು ಮೀಟ್ ಮಾಡೋದು ಹೇಗೆ ಎಂದಾಗ ಪವನ್ ಒಡೆಯರ್ ಅವರಿಗಾಗಿ ಸಿನಿಮಾ ಟೈಟಲ್ ಅನ್ನೇ ರಮ್ಯಾ ಎಂದು ಚೇಂಜ್ ಮಾಡೋಣ ಬಿಡಿ ಎನ್ನುವ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಆದರೆ ಇದು ರಿಯಲ್ ಅಲ್ಲ ರೀಲ್. ಹೌದು, ಇದು ಸಿನಿಮಾದ ಪ್ರಚಾರದ ನಿಮಿತ್ತ ಚಿತ್ರತಂಡ ಕ್ರಿಯೇಟ್ ಮಾಡಿರುವ ವಿಡಿಯೋ ಕಟೆಂಟ್ ಆಗಿದೆ.
ಅದ್ಧೂರಿ ಮೇಕಿಂಗ್ ಜೊತೆಗೆ ಉತ್ತಮ ಕಥೆಗೆ ಸಿನಿಮಾ ಪ್ರೇಕ್ಷಕರು ಮನ ಸೋತಿದ್ದಾರೆ. ಜಯಾದಿತ್ಯ ಬ್ಯಾನರ್ ಅಡಿ ನಿರ್ಮಾಣವಾದ ಈ ಚಿತ್ರಕ್ಕೆ ಸಿಆರ್ ಮನೋಹರ್ ಬಂಡವಾಳ ಹೂಡಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಇನ್ನು ನಿರ್ದೇಶಕ ಪವನ್ ಒಡೆಯರ್ ನಿರ್ದೇಶನಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ರೇಮೊ ಕಮಾಲ್