ETV Bharat / entertainment

ಖ್ಯಾತ ಅಸ್ಸಾಮಿ ಚಲನಚಿತ್ರ ನಿರ್ಮಾಪಕ ಪುಲಕ್ ಗೊಗೋಯ್ ನಿಧನ - ರೇಲಾರ್ ಅಲಿರ್ ದುಬಾರಿ ಬಾನ್

ಗೊಗೊಯ್ 1974 ರಲ್ಲಿ ತಮ್ಮ ಮೊದಲ ಚಿತ್ರ 'ಖೋಜ್' ಮೂಲಕ ಚಲನಚಿತ್ರ ನಿರ್ಮಾಣಕ್ಕೆ ಕಾಲಿಟ್ಟರು. ಇಲ್ಲಿಯವರೆಗೆ, ಅವರು ಒಂಬತ್ತು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ಅವುಗಳಲ್ಲಿ 5 ಸ್ವಯಂ ನಿರ್ಮಿತ.

Reknown Assamese film Maker Pulok Gogoi Passes away
ಖ್ಯಾತ ಅಸ್ಸಾಮಿ ಚಲನಚಿತ್ರ ನಿರ್ಮಾಪಕ ಪುಲಕ್ ಗೊಗೋಯ್ ನಿಧನ
author img

By

Published : Nov 12, 2022, 1:51 PM IST

ಗುವಾಹಟಿ: ಖ್ಯಾತ ಅಸ್ಸಾಮಿ ಚಲನಚಿತ್ರ ನಿರ್ಮಾಪಕ "ಪುಲಕ್ ಗೊಗೊಯ್" ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಶನಿವಾರ ಬೆಳಗ್ಗೆ ನಿಧನರಾದರು. ಅಸೌಖ್ಯದ ಕಾರಣ ದೀರ್ಘಕಾಲದಿಂದ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಬೆಳಗ್ಗೆ 8.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಇವರಿಗೆ 84 ವರ್ಷ ವಯಸ್ಸಾಗಿತ್ತು.

1938 ರಲ್ಲಿ ಜನಿಸಿದ ಗೊಗೊಯ್ ಅವರು ಕ್ಯಾನ್ವಾಸ್ ಮತ್ತು ಸೆಲ್ಯುಲಾಯ್ಡ್ ಈ ಎರಡರಲ್ಲೂ ಆಳವಾದ ಪರಿಣತಿಯನ್ನು ಹೊಂದಿದ್ದರು. ಇದರ ಪರಿಣಾಮವಾಗಿ 1960 ರ ದಶಕದಲ್ಲಿ ಗುವಾಹಟಿ, ಶಿಲ್ಲಾಂಗ್, ಕೋಲ್ಕತ್ತಾ, ಮುಂಬೈ ಮತ್ತು ವಾಷಿಂಗ್ಟನ್‌ನಂತಹ ಸ್ಥಳಗಳಲ್ಲಿ ಸರಣಿ ಪ್ರದರ್ಶನ ನೀಡದರಲ್ಲದೆ, ಸಮಾನಾಂತರ ಚಲನಚಿತ್ರ ಪರಿಕಲ್ಪನೆಯನ್ನು ಪರಿಚಯಿಸಿದರು.

ಅಸ್ಸಾಂನ ಪ್ರವರ್ತಕ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರಾದ ಇವರು ರಾಜಕೀಯ ವ್ಯಂಗ್ಯಚಿತ್ರಕಾರರಾಗಿ ತಮ್ಮ ವೃತ್ತಿಜೀವನವನ್ನು 1963 ರಿಂದ 1964 ರವರೆಗೆ ಅಸ್ಸೋಂ ಟ್ರಿಬ್ಯೂನ್ ಗುಂಪಿನ ಜನಪ್ರಿಯ ಸಾಪ್ತಾಹಿಕ ಸುದ್ದಿಯಾದ ಅಸಾಮ್ ಬಾನಿಯಲ್ಲಿ ಪ್ರಾರಂಭಿಸಿದರು. 1967 ರಲ್ಲಿ, ಅವರು ಕಾರ್ಟೂನ್ ಎಂಬ ನಿಯತಕಾಲಿಕದ ಸಂಪಾದಕರಾಗಿ ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಿದರು, ನಂತರ ಅವರು ಡಾ ಭೂಪೇನ್ ಹಜಾರಿಕಾ ಅವರ ಸಂಪಾದಕತ್ವದಲ್ಲಿ 1967 ರಿಂದ 1972 ರವರೆಗೆ ಜನಪ್ರಿಯ ಅಸ್ಸಾಮಿ ನಿಯತಕಾಲಿಕ ಅಮರ್ ಪ್ರತಿನಿಧಿಧಿಯ ಮುಖ್ಯ ಸಹಾಯಕರಾಗಿಯೂ ಕೆಲಸ ಮಾಡಿದರು.

ಇವರು ಸ್ವತಂತ್ರ ರಾಜಕೀಯ ವ್ಯಂಗ್ಯಚಿತ್ರಕಾರರಾಗಿ ಸಾದಿನ್, ಅಬಿಕಲ್ ಸೇರಿದಂತೆ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಲ್ಲದೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ಆರ್ಟ್ ಸೊಸೈಟಿಯ ಸಹಾಯದಿಂದ ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಅಸ್ಸೋಂನಲ್ಲಿ ಮತ್ತು ಬೇರೆ ಕಡೆ ಕೂಡ ಅನೇಕ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ.

ಗೊಗೊಯ್ 1974 ರಲ್ಲಿ ತಮ್ಮ ಮೊದಲ ಚಿತ್ರ 'ಖೋಜ್' ಮೂಲಕ ಚಲನಚಿತ್ರ ನಿರ್ಮಾಣಕ್ಕೆ ಕಾಲಿಟ್ಟರು. ಇಲ್ಲಿಯವರೆಗೆ, ಅವರು ಒಂಬತ್ತು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ಅವುಗಳಲ್ಲಿ 5 ಸ್ವಯಂ ನಿರ್ಮಿತ. ಅಲ್ಲದೆ ಅವುಗಳಲ್ಲಿ ಒಂದು 1993 ರಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ ಮತ್ತು 2014 ರಲ್ಲಿ ಅತ್ಯುತ್ತಮ ಅಸ್ಸಾಮಿ ಚಲನಚಿತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇವರ ಕೆಲವು ಪ್ರಮುಖ ಚಲನಚಿತ್ರಗಳೆಂದರೆ, ಶ್ರೀಮತಿ ಮಹಿಮಾಮೊಯಿ (1978), ಸದಾರಿ (1983), ಸೆಂಡೂರ್ (1984), ರೇಲಾರ್ ಅಲಿರ್ ದುಬಾರಿ ಬಾನ್ (1993), ಮೊರೊಮ್ ನೋಡಿರ್ ಗಭಾರು ಘಾಟ್ (1999), ಪಟ್ನೀ (2003). ಈ ಎಲ್ಲಾ ಸಾಧನೆಗಳಿಗಾಗಿ ಇವರಿಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳು ಲಭಿಸಿವೆ. 2013 ರ ಪ್ರಾಗ್ ಸಿನಿ ಅವಾರ್ಡ್ಸ್‌ನಲ್ಲಿ ಮೊಮ್ತಾಜ್‌ಗಾಗಿ ಅಸ್ಸಾಮಿ ಚಲನಚಿತ್ರ ವರ್ಗದಲ್ಲಿ ಅತ್ಯುತ್ತಮ ನಿರ್ದೇಶನಕ್ಕಾಗಿ ಪ್ರಶಸ್ತಿ ಜೊತೆಗೆ, 2016 ರಲ್ಲಿ ಗುರೂಜಿ ಆದ್ಯಾ ಶರ್ಮಾ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಮುಖ್ಯವಾಗಿ 2017 ರಲ್ಲಿ, ಅಸ್ಸೋಂ ಸರ್ಕಾರವು ಅಸ್ಸೋಂ ಲಲಿತಕಲೆ ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ ಪ್ರತಿಷ್ಠಿತ ಕಲಗುರು ಬಿಷ್ಣು ಪ್ರಸಾದ್ ರಭಾ ಪ್ರಶಸ್ತಿಯನ್ನು ಕೂಡ ನೀಡಿದೆ.

ಇದನ್ನೂ ಓದಿ:ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ‌ ಅಪ್ಪು ಅಮರ ಹೆಲ್ತ್ ಪ್ರಿವಿಲೇಜ್ ಕಾರ್ಡ್ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.