ETV Bharat / entertainment

ಲಿಯೋ ಆಡಿಯೋ ರಿಲೀಸ್​ ಈವೆಂಟ್ ರದ್ದು,​ ರಾಜಕೀಯ ಒತ್ತಡವಿಲ್ಲ: ಚಿತ್ರತಂಡ ಸ್ಪಷ್ಟನೆ - ಲಿಯೋ ಲೇಟೆಸ್ಟ್ ನ್ಯೂಸ್

Leo audio launch cancelled: ಲಿಯೋ ಆಡಿಯೋ ರಿಲೀಸ್​ ಈವೆಂಟ್​ ರದ್ದುಗೊಳಿಸಲಾಗಿದ್ದು, ಕಾರಣವನ್ನು ಚಿತ್ರ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ.

Thalapathy Vijay
ಸೌತ್​ ಸೂಪರ್​ಸ್ಟಾರ್ ವಿಜಯ್
author img

By ETV Bharat Karnataka Team

Published : Sep 27, 2023, 8:37 PM IST

ಸೌತ್​ ಸೂಪರ್​ಸ್ಟಾರ್ ವಿಜಯ್ ಹಾಗೂ ಸ್ಟಾರ್​ ಡೈರೆಕ್ಟರ್​​ ಲೋಕೇಶ್ ಕನಗರಾಜ್ ಕಾಂಬೋದ ಮುಂಬರುವ ಬಹುನಿರೀಕ್ಷಿತ ಚಿತ್ರ 'ಲಿಯೋ'. ಚಿತ್ರದ ಆಡಿಯೋ ರಿಲೀಸ್​ ಈವೆಂಟ್​ ಅನ್ನು ಪಾಸ್​ಗಾಗಿ ಬಂದ ವಿನಂತಿಗಳು ಹಾಗೂ ಸುರಕ್ಷತೆಯ ಕುರಿತಾದ ಆತಂಕಗಳ ಕಾರಣದಿಂದ ರದ್ದುಗೊಳಿಸಲಾಗಿದೆ. ಈವೆಂಟ್ ಅನ್ನು ಲಿಯೋ ಸಿನಿಮಾ ನಿರ್ಮಾಣ ಮಾಡುತ್ತಿರುವ ಸವೆನ್ ಸ್ಕ್ರೀನ್​​ ಸ್ಟುಡಿಯೋ ರದ್ಧುಗೊಳಿಸಿದ್ದು, ಈ ನಿರ್ಧಾರ ರಾಜಕೀಯ ಒತ್ತಡ ಅಥವಾ ಇತರೆ ಯಾವುದೇ ಅಂಶಗಳಿಂದ ಪ್ರಭಾವಿತವಾಗಿಲ್ಲ ಎಂದು ನಿರ್ಮಾಪಕರು ಸ್ಪಷ್ಟನೆ ಕೊಟ್ಟಿದ್ದಾರೆ.

  • Considering overflowing passes requests & safety constraints, we have decided not to conduct the Leo Audio Launch.

    In respect of the fans' wishes, we will keep you engaged with frequent updates.

    P.S. As many would imagine, this is not due to political pressure or any other…

    — Seven Screen Studio (@7screenstudio) September 26, 2023 " class="align-text-top noRightClick twitterSection" data=" ">

ಇತ್ತೀಚೆಗೆ ಪಣಿಯೂರಿನಲ್ಲಿ ನಡೆದ ಎಆರ್ ರೆಹಮಾನ್ ಅವರ ಮ್ಯೂಸಿಕ್​ ಈವೆಂಟ್​ನಲ್ಲಿ ಜನಸಂದಣಿ ಹೆಚ್ಚಾಗಿ ನೂಕುನುಗ್ಗಲಿನ ಪರಿಸ್ಥಿತಿಗೆ ಕಾರಣವಾದ ಘಟನೆಯನ್ನು ಗಮನದಲ್ಲಿಟ್ಟುಕೊಂಡ ಚಿತ್ರತಂಡ ಲಿಯೋ ಆಡಿಯೋ ರಿಲೀಸ್ ಈವೆಂಟ್​ ಅನ್ನು ರದ್ದುಗೊಳಿಸಿದೆ. ಅಭಿಮಾನಿಗಳ ಸುರಕ್ಷತೆಯ ನಿಟ್ಟಿನಲ್ಲಿ ಹಾಗೂ ಇಂತಹ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಲಿಯೋ ನಿರ್ಮಾಪಕರು ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಡೆಸದಿರಲು ನಿರ್ಧರಿಸಿದ್ದಾರೆ. ಈ ಮೊದಲು ಸೆ. 30ಕ್ಕೆ ಕಾರ್ಯಕ್ರಮ ನಡೆಸಲು ನಿರ್ಧಾರ ಕೈಗೊಳ್ಳಲಾಗಿತ್ತು.

  • " class="align-text-top noRightClick twitterSection" data="">

ಸಾಮಾಜಿಕ ಮಾಧ್ಯಮದಲ್ಲಿ ಈ ನಿರ್ಧಾರಕ್ಕೆ ಕಾರಣ ಬಹಿರಂಗಪಡಿಸಿರುವ ಸವೆನ್ ಸ್ಕ್ರೀನ್ ಸ್ಟುಡಿಯೋ ಸಂಸ್ಥೆ, "ಈವೆಂಟ್​ನ ಪಾಸ್‌ಗಳಿಗಾಗಿ ಬೇಡಿಕೆ ಹೆಚ್ಚುತ್ತಿದೆ ಮತ್ತು ಜನರ ಸುರಕ್ಷತೆಯನ್ನು ಪರಿಗಣಿಸಿ, ನಾವು ಲಿಯೋ ಆಡಿಯೋ ಲಾಂಚ್ ಈವೆಂಟ್​ ಅನ್ನು ನಡೆಸದಿರಲು ನಿರ್ಧರಿಸಿದ್ದೇವೆ. ಅಭಿಮಾನಿಗಳ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಆಗಾಗ್ಗೆ ಸಿನಿಮಾದ ಅಪ್​​ಡೇಟ್ಸ್ ಕೊಡಲಿದ್ದೇವೆ. ಹಲವರು ಊಹಿಸಿದಂತೆ ರಾಜಕೀಯ ಒತ್ತಡ ಅಥವಾ ಇನ್ಯಾವುದೋ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಎಜಿಎಸ್ ಸಿನಿಮಾಸ್​ನ ಸಿಇಒ ಅರ್ಚನಾ ಕಲಪತಿ ಅವರು ಚಿತ್ರತಂಡದ ಈ ನಿರ್ಧಾರವನ್ನು ಶ್ಲಾಘಿಸಿ, ತಮ್ಮ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಸುರಕ್ಷತೆಗೆ ಆದ್ಯತೆ ನೀಡುವುದರ ಪ್ರಾಮುಖ್ಯತೆಯನ್ನೂ ಒತ್ತಿಹೇಳಿದರು. ಈವೆಂಟ್​ ಕ್ಯಾನ್ಸಲ್​​ ಮಾಡಿದ್ದರೂ, ಲಿಯೋ ಸಿನಿಮಾ ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಆರಂಭ (ಕಲೆಕ್ಷನ್​) ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಒತ್ತಡವು ರದ್ಧತಿಗೆ ಒಂದು ಕಾರಣ ಆಗಿರಬಹುದು ಎಂದು ವಿಜಯ್ ಅಭಿಮಾನಿಗಳು ಊಹಿಸುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಹೀಗೊಂದು ಗುಸುಗುಸು. ಆದಾಗ್ಯೂ ಚಿತ್ರ ನಿರ್ಮಾಪಕರು ಈ ಊಹಾಪೋಹಗಳನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಹಾಲಿವುಡ್​ ಡೈರೆಕ್ಟರ್​ ಜೊತೆ ರಾಕಿಂಗ್​ ಸ್ಟಾರ್ ಯಶ್​​; ಡಿಸೆಂಬರ್​​ನಲ್ಲಿ ಶೂಟಿಂಗ್​ ಶುರು: ಸಿನಿಮಾ ವಿಶ್ಲೇಷಕರು ಹೇಳಿದ್ದಿಷ್ಟು

ಕೆಲ ಅಭಿಮಾನಿಗಳು, ಯೂಟ್ಯೂಬ್ ವಿಡಿಯೋ ಅಥವಾ ಇಂಟರ್​ವ್ಯೂವ್​ ಮೂಲಕ ನಾಯಕನಟ ವಿಜಯ್ ಅವರಿಂದ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ಕೇಳುವ ಬಯಕೆಯನ್ನು ವ್ಯಕ್ತಪಡಿದ್ದಾರೆ. ಮೆಚ್ಚಿನ ನಟನಿಂದ ಪಾಸಿಟಿವ್​ ರೆಸ್ಪಾನ್ಸ್​ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಲಿಯೋ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸಂಜಯ್ ದತ್, ತ್ರಿಶಾ ಮತ್ತು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ದತ್ ಅವರ ಚೊಚ್ಚಲ ತಮಿಳು ಚಿತ್ರ. ಕೀರ್ತಿ ಸುರೇಶ್, ಮಿಶಾ ಘೋಷಾಲ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಸೇರಿದಂತೆ ಚಿತ್ರದಲ್ಲಿ ಸ್ಟಾರ್ ನಟರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕ್ಯಾರೆಕ್ಟರ್​ ಸರ್ಟಿಫಿಕೆಟ್​​ ಕೇಳಿದ ಸಲ್ಮಾನ್ ಖಾನ್​​.. 'ಟೈಗರ್ ಕಾ ಮೆಸೇಜ್​' ಏನು?

ಕಾಶ್ಮೀರ್​, ಚೆನ್ನೈ, ಯುಎಸ್​​ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೂಟಿಂಗ್​ ನಡೆಸಲಾಗಿದೆ. ಅನಿರುಧ್ ರವಿಚಂದರ್ ಅವರ ಸಂಗೀತ ಈ ಬಹುನಿರೀಕ್ಷಿತ ಚಿತ್ರಕ್ಕಿದೆ. ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನ ಚಿತ್ರಕ್ಕಿದೆ. ಅಕ್ಟೋಬರ್ 19 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.