ETV Bharat / entertainment

ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರು.. ಅಭಿಮಾನಿಗಳಿಗೆ ಉಪ್ಪಿ ಹೇಳಿದ್ದೇನು? - Upendra allergy problem

ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದ ಹಿನ್ನೆಲೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

real star Upendra health updates
ಉಪೇಂದ್ರ ಆರೋಗ್ಯದಲ್ಲಿ ಏರುಪೇರು
author img

By

Published : Nov 24, 2022, 3:17 PM IST

Updated : Nov 24, 2022, 3:49 PM IST

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿದ್ದು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ ನಟ ಆರೋಗ್ಯವಾಗಿದ್ದು, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ.

ನೆಲಮಂಗಲದ ಮೋಹನ್​ ಬಿಕೆರೆ ಸ್ಟುಡಿಯೋದಲ್ಲಿ ಯು ಅಂಡ್​​​ ಐ ಸಿನಿಮಾ ಶೂಟಿಂಗ್​ನಲ್ಲಿ ಚಿತ್ರತಂಡ ಬ್ಯುಸಿಯಾಗಿತ್ತು. ಶೂಟಿಂಗ್​​ ಸೆಟ್​​ನಲ್ಲಿ ಉಪೇಂದ್ರ ಅವರಿಗೆ ಡಸ್ಟ್ ಅಲರ್ಜಿ ಆಗಿದ್ದು, ಚಿಕಿತ್ಸೆಗಾಗಿ ನೆಲಮಂಗಲದ ಹರ್ಷ ಆಸ್ಪತ್ರೆಗೆ ತೆರಳಿದ್ದರು. ಪ್ರಥಮ ಚಿಕಿತ್ಸೆ ನಂತರ ಉಪೇಂದ್ರ ಚೇತರಿಸಿಕೊಂಡಿದ್ದಾರೆ. ಒಂದು ತಾಸಿನ ಬಳಿಕ ಆಸ್ಪತ್ರೆಯಿಂದ ವಾಪಸ್​ ಆಗಿದ್ದಾರೆ.

ಅನಾರೋಗ್ಯ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಸ್ಪಷ್ಟನೆ

ಅಭಿಮಾನಿಗಳು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ನೆಲಮಂಗಲ ಹರ್ಷ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಚಿಕಿತ್ಸೆ ಪಡೆದ ಬಳಿಕ ಮತ್ತೆ ಉಪೇಂದ್ರ ಯು ಐ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ನಟ ವಿಕ್ರಮ್​ ಗೋಖಲೆ ನಿಧನದ ವದಂತಿ ತಳ್ಳಿಹಾಕಿದ ಕುಟುಂಬ: ತಂದೆ ಜೀವಂತವಾಗಿದ್ದಾರೆ ಎಂದ ಮಗಳು

ಉಪೇಂದ್ರ ಅನಾರೋಗ್ಯ ಕುರಿತು ಸುದ್ದಿಯಾಗುತ್ತಿದ್ದಂತೆ ಅಭಿಮಾನಿಗಳು ಚಿಂತೆಗೀಡಾಗಿದ್ದರು. ಬಳಿಕ ಸೋಶಿಯಲ್​ ಮೀಡಿಯಾ ಮೂಲಕ ಸ್ವತಃ ನಟ ಉಪೇಂದ್ರ ಅವರೇ ತಾನು ಸುರಕ್ಷಿತನಾಗಿದ್ದೇನೆ, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Last Updated : Nov 24, 2022, 3:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.