ETV Bharat / entertainment

'ರವಿ ಬೋಪಣ್ಣ' ಪ್ರೀ ರಿಲೀಸ್ ಈವೆಂಟ್: ಸಿನಿಮಾ‌ ಇಂಡಸ್ಟ್ರಿಯಲ್ಲಿ ಜೇಬು ತುಂಬಿಲ್ಲ, ಪ್ರೀತಿ ತುಂಬಿದೆ ಎಂದ ಕ್ರೇಜಿಸ್ಟಾರ್​​ - ರವಿ ಬೋಪಣ್ಣ ಸಿನಿಮಾದ ಪ್ರೀ ರಿಲೀಸ್ ಈವೆಂಟ್

ಬೆಂಗಳೂರಿನ ಜಿಟಿ ಮಾಲ್​ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶಿಸಿರುವ ರವಿ ಬೋಪಣ್ಣ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು.

Ravi Bopanna Movie pre release event
ರವಿ ಬೋಪಣ್ಣ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮEtv Bharat
author img

By

Published : Aug 9, 2022, 7:34 AM IST

'ರವಿ ಬೋಪಣ್ಣ' ಕ್ರೇಜಿಸ್ಟಾರ್ ರವಿಚಂದ್ರನ್ ಕಥೆ, ಚಿತ್ರಕತೆ ಬರೆದು ನಿರ್ದೇಶನದ‌ ಜೊತೆಗೆ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ. 'ದೃಶ್ಯಂ 2' ಸಿನಿಮಾ ಬಳಿಕ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಸಿನಿಮಾ ಆ.12 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ರವಿ ಬೋಪಣ್ಣ ಹಾಡಿನ ಜೊತೆಗೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಜಿಟಿ ಮಾಲ್​​ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್, ಜಗ್ಗೇಶ್, ಡಾಲಿ ಧನಂಜಯ್ ಹಾಗೂ ಶರಣ್ ಆಗಮಿಸಿ ಕ್ರೇಜಿಸ್ಟಾರ್ ರವಿ ಬೋಪಣ್ಣ ಸಿನಿಮಾಗೆ ಶುಭ ಹಾರೈಸಿದರು.

Ravi Bopanna Movie pre release event
ರವಿ ಬೋಪಣ್ಣ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ

ನಟ ಜಗ್ಗೇಶ್ ಹೇಳಿದ್ದಿಷ್ಟು: "ರವಿಚಂದ್ರನ್ ಮನಸ್ಸು ನಿಶ್ಕಲ್ಮಷ. ನೇರ ನಡೆ. ಹೃದಯ ಶ್ರೀಮಂತಿಕೆ. ಈ ಸಿನಿಮಾ ಲೋಕದಲ್ಲಿ ಅದ್ಭುತವಾಗಿ ಬದುಕುತ್ತಿರುವ ಶೋ ಮ್ಯಾನ್‌. ಆ ಕಾಲದಲ್ಲಿ ನಮ್ಮಗೆಲ್ಲ 15,000 ಸಂಬಳ ಕೊಡ್ತಿದ್ರು. ನಮ್ಮಗೆಲ್ಲ ಅನ್ನ ಹಾಕಿ ಕೆಲಸ ಕೊಟ್ಟ ಮನುಷ್ಯ. ಡಾ. ರಾಜ್ ಕುಮಾರ್ ಅವರನ್ನು ನೋಡಿದ್ವಿ, ಕೇಳಿದ್ವಿ.

ಆದರೆ ರವಿಚಂದ್ರನ್ ಶೂಟಿಂಗ್ ನೋಡೋಕೆ ಡಾ. ರಾಜ್ ಕುಮಾರ್ ಅವರು ಬರುತ್ತಿದ್ದರು. ರವಿ ಎಷ್ಟು ಚೆನ್ನಾಗಿ ಶೂಟಿಂಗ್ ಮಾಡ್ತಾರೆ ಅಂತಾ ಅಣ್ಣಾವ್ರು ಹೇಳುತ್ತಿದ್ದರು ಅಂದ್ರೆ ದೊಡ್ಡ ಕ್ರೆಡಿಟ್ ಅದು. ರವಿ ಬೋಪ್ಪಣ್ಣ ಗೆಟಪ್ ತುಂಬಾ ಚೆನ್ನಾಗಿದೆ. ಈ ಸಿನಿಮಾ ಯಶಸ್ವಿಯಾಗಲಿ" ಎಂದು ನಟ ಜಗ್ಗೇಶ್​​ ಹಾರೈಸಿದರು.

Ravi Bopanna Movie pre release event
ರವಿ ಬೋಪಣ್ಣ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ

"ನಾನು ಅವರ ಜೊತೆ ನಟಿಸಿದ್ದೇ ದೊಡ್ಡ ಗಿಫ್ಟ್. ಸಿನಿಮಾ ಅಂದ್ರೆ ಸೆಲಬ್ರೆಷನ್ ಅಂತಾ ಚಿಕ್ಕ ವಯಸ್ಸಿನಲ್ಲಿ ಕೇಳಿದ್ದೆವು. ಆದರೆ, ಈಗ ನಿಜವಾಗಲೂ ಸೆಲಬ್ರೆಷನ್ ನೋಡಿ ಖುಷಿ ಆಗುತ್ತಿದೆ. ಅಹಂ ಪ್ರೇಮಾಸ್ಮಿ ಸಿನಿಮಾದಲ್ಲಿ ರವಿಚಂದ್ರನ್ ಅವರ ತಮ್ಮನ ಜೊತೆ ನಟಿಸಿದ್ದೆ. ಮೊದಲ ಬಾರಿಗೆ ಆ ಸಿನಿಮಾವನ್ನು ರವಿಚಂದ್ರನ್ ನಿರ್ದೇಶನ ಮಾಡಿದರು. ನಾವು ಹಾಗೂ ಮುಂದಿನ ಜನರೇಷನ್​​ ಸಿನಿಮಾ ಬಗ್ಗೆ ಕಲಿಯುತ್ತೇವೆ ಎಂದರೆ ಅದು ರವಿಚಂದ್ರನ್ ಅವರಿಂದ" ಎನ್ನುತ್ತಾರೆ ನಟ ಶರಣ್.

"ರವಿಚಂದ್ರನ್ ಅವರ ಕಾರ್ಯಕ್ರಮಕ್ಕೆ ಭಾಗಿಯಾಗಿರುವುದು ನಮ್ಮ ಅದೃಷ್ಟ. ನಾನು ರವಿಚಂದ್ರನ್ ಸರ್ ಅವರ ಸಿನಿಮಾ ನೋಡಿಕೊಂಡು ಬೆಳದಿರುವೆ. ಜೀವನದಲ್ಲಿ ಸೋತಾಗ ಅವರ ಸಿನಿಮಾ ಸ್ಪೂರ್ತಿ- ಡಾಲಿ ಧನಂಜಯ್.

ಪ್ರೀ ರಿಲೀಸ್‌ನಲ್ಲಿ ಸುದೀಪ್ ಮಾತು: ರವಿ ಬೋಪಣ್ಣ ಸಿನಿಮಾದಲ್ಲಿ ವಕೀಲನ ಪಾತ್ರ ಮಾಡಿದ ಕಿಚ್ಚ ಸುದೀಪ್​​ ಮಾತನಾಡಿ, "ರವಿಚಂದ್ರನ್​​ ಕನ್ನಡ ಚಿತ್ರರಂಗದ ಗೌರವ, ಆಸ್ತಿ, ಗತ್ತು". ಇಡೀ ಭಾರತೀಯ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದವರು. ಪ್ಯಾನ್ ಇಂಡಿಯಾ ಸಿನಿಮಾ ಹುಟ್ಟು ಹಾಕಿದವರು ಅವರು. 50 ವರ್ಷದಿಂದ ಈಶ್ವರಿ ಸಂಸ್ಥೆಯಿಂದ ಒಳ್ಳೆ ಒಳ್ಳೆ ಸಿನಿಮಾ ಬಂದಿದೆ. ಈ ಸಂಸ್ಥೆಯಿಂದ ನನಗೆ ಎರಡು ಸಿನಿಮಾ ಮಾಡಲು ಅವಕಾಶ ಸಿಕ್ಕಿದೆ ಎಂದರು.

Sudeep
ಕಿಚ್ಚ ಸುದೀಪ್​​

ಇನ್ನು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್, "ನನ್ನದು ತುಂಬಾ ಎಮೋಷನಲ್ ಜರ್ನಿ. ನಮ್ಮ ಅಪ್ಪ ನೆನಪಾಗ್ತಿದ್ದಾರೆ. ಮಾತು ಬರ್ತಿಲ್ಲ. ಈಶ್ವರಿ ಅಂತಾ ನೆನಪಿಸಿಕೊಂಡರೆ ರೋಮಾಂಚನ ಆಗುತ್ತದೆ. 60 ವರ್ಷದಿಂದ ಸಿನಿಮಾ‌ ಇಂಡಸ್ಟ್ರಿಯಲ್ಲಿ ಇದ್ದೇನೆ. ಆದರೆ ಜೇಬು ತುಂಬಿಲ್ಲ ಪ್ರೀತಿ ತುಂಬಿದೆ" ಎಂದರು.

ನಿಮ್ಮಂತಹ ಗೆಳೆಯರನ್ನು ಸಂಪಾದನೆ ಮಾಡಿರುವ ಖುಷಿ ನನಗಿದೆ. ಪ್ರೇಮಲೋಕದಿಂದ ಹಿಡಿದು ಇಲ್ಲಿಯವರೆಗೆ ಮಾಡಿರುವ ಸಿನಿಮಾದ ಎಲ್ಲಾ ಗೆಟಪ್​​ಗಳು ಈ ಸಿನಿಮಾದಲ್ಲಿದೆ. ಫ್ಯಾಮಿಲಿ, ಆ್ಯಕ್ಷನ್, ಕಾಮಿಡಿ ಎಲ್ಲವೂ ಇದೆ. ಸುದೀಪ್​​ ಹಾಗೂ ನನ್ನ ನಡುವಿನ ಬಾಂಧವ್ಯ ಹೇಳಲು ಆಗಲ್ಲ. ಜನ್ಮ ಜನ್ಮದ ಅನುಬಂಧ. ಅವರಿಗೆ ನಾನು ಕರೆ ಮಾಡಿ ಒಂದು ಪಾತ್ರ ಇದೆ ಅಂತ ಹೇಳಿದ್ ತಕ್ಷಣ ಬಂದು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಒಂದು ಪಾತ್ರ ತುಂಬಾ ಪವರ್ ಇದೆ ಅದೇ ಸುದೀಪ್ ಪಾತ್ರ ಎಂದರು.

Sudeep And Ravichandran
ಸುದೀಪ್​​ ಹಾಗೂ ರವಿಚಂದ್ರನ್​​

ಇನ್ನು ಹಿರಿಯ ಕ್ಯಾಮರಾಮ್ಯಾನ್ ಸೀತಾರಾಮ್ ನನ್ನ ಕಣ್ಣು. ಅದ್ಭುತವಾಗಿ ಚಿತ್ರೀಕರಣ ಮಾಡಿದ್ದಾರೆ. ಈ ಸಿನಿಮಾದಲ್ಲಿ 8 ಹಾಡುಗಳಿವೆ. ಮೋಹನ್ ಡೈಲಾಗ್ ಬರೆದಿದ್ದಾರೆ. ಕಾವ್ಯ ಶೆಟ್ಟಿ ಅದ್ಬುತ ನಟಿ. ಈ ಸಿನಿಮಾದಲ್ಲಿ ಚಾಲೆಂಜಿಂಗ್ ಪಾತ್ರ ಅವರದು ಎಂದರು‌.

ಇದನ್ನೂ ಓದಿ: ಬ್ಯಾಲೆನ್ಸ್‌ ಈಸ್ ಆರ್ಟ್‌ ಆಫ್‌ ಲಿವಿಂಗ್‌.. 'ರವಿ ಬೋಪಣ್ಣ'ನಾಗಿ ಹೊಸ ವರ್ಷಕ್ಕೆ ಕ್ರೇಜಿ ಶುಭಾಶಯ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.