ETV Bharat / entertainment

ಬಾಲಿವುಡ್​ ನಟಿ ರವೀನಾ ಟಂಡನ್​ಗೆ ಆಪತ್ತು ತಂದ ವೈರಲ್​ ವಿಡಿಯೋ: ತನಿಖೆಗೆ ಆದೇಶ - ವೀನಾ ಟಂಡನ್​ ವೈರಲ್​ ವಿಡಿಯೋ

ಬಾಲಿವುಡ್​ ನಟಿ ರವೀನ್ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ಕಾನೂನಿನ ಕುಣಿಕೆಯಲ್ಲಿ ಸಿಲುಕಿದ್ದಾರೆ. ಆ ವಿಡಿಯೋದಲ್ಲಿ ಅವರು ಹುಲಿಯ ಸಮೀಪಕ್ಕೆ ತೆರಳಿ ಫೋಟೋ ಮತ್ತು ವಿಡಿಯೋವನ್ನು ತೆಗೆಯುತ್ತಿರುವುದನ್ನು ಕಾಣಬಹುದು. ಇದು ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಇದೀಗ ತನಿಖೆಗೆ ಆದೇಶಿಸಲಾಗಿದೆ.

Raveena Tandon reacts after probe launched over her viral tiger video
ಬಾಲಿವುಡ್​ ನಟಿ ರವೀನ್ ಟಂಡನ್
author img

By

Published : Nov 30, 2022, 3:01 PM IST

ಮುಂಬೈ: ಇತ್ತೀಚೆಗೆ ಹುಲಿ ನೋಡಲು ಸಫಾರಿಗೆ ತೆರಳಿದ್ದ ಬಾಲಿವುಡ್​ ನಟಿ ರವೀನಾ ಟಂಡನ್ ಅರಣ್ಯ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆ ಕಾನೂನಿನ ಕುಣಿಯಲ್ಲಿ ಸಿಲುಕಿಕೊಂಡಿದ್ದಾರೆ. ಹುಲಿಯ ಸಮೀಪಕ್ಕೆ ಹೋಗಿ ಫೋಟೋ ತೆಗೆಯಲು ಯತ್ನಿಸುತ್ತಿರುವ ವಿಡಿಯೋವನ್ನು ಅವರು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು ಅದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಇದೀಗ ತನಿಖೆಗೆ ಆದೇಶಿಸಿದ್ದಾರೆ.

Raveena Tandon reacts after probe launched over her viral tiger video
ಬಾಲಿವುಡ್​ ನಟಿ ರವೀನ್ ಟಂಡನ್

ಆದರೆ, ಇದನ್ನು ತಳ್ಳಿ ಹಾಕಿರುವ ಅವರ ಆಪ್ತ ಮೂಲಗಳು ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದ ಬಳಿಕವೇ ತಾನು ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದೆವು. ಸಫಾರಿ ವೇಳೆ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಸಫಾರಿಗೆ ನಿಗದಿ ಪಡಿಸಿದ ಜಾಗದಲ್ಲೇ ವಾಹನ ಇತ್ತು. ಆದರೆ ಹುಲಿಯೇ ಸಮೀಪ ಬಂದಿದೆ ಎಂದಿದ್ದಾರೆ.

  • Got beautiful shots of sharmilee and her cubs in Tadoba. Wildlife shots are unpredictable due to the unreadable nature of our https://t.co/JQSB9ylxlO tries to be as silent and capture the best moments. Video Shot on Sony Zoom lense 200/400. pic.twitter.com/LsUOn2XtYs

    — Raveena Tandon (@TandonRaveena) November 29, 2022 " class="align-text-top noRightClick twitterSection" data=" ">

ನವೆಂಬರ್ 22 ರಂದು ಇಲಾಖೆಯಿಂದ ಒದಗಿಸಲಾದ ತರಬೇತಿ ಪಡೆದ ಮಾರ್ಗದರ್ಶಿ ಮತ್ತು ಚಾಲಕರೊಂದಿಗೆ ಅವರು ಸಫಾರಿಗೆ ತೆರಳಿದ್ದರು. ಈ ಬಗ್ಗೆ ಅಂದು ಹಂಚಿಕೊಂಡ ಟ್ವೀಟ್​ನಲ್ಲಿಯೂ ಬರೆದುಕೊಂಡಿದ್ದಾರೆ. ಆದರೆ, ತೀರಾ ಸೂಕ್ಷ್ಮ ಪ್ರದೇಶದಲ್ಲಿ ಹೇಗೆ ಇರಬೇಕೆಂದು ಮರೆತ ಅವರು ಹುಲಿಯ ಸಮೀಪಕ್ಕೆ ತೆರಳಿ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಳ್ಳಲು ಯತ್ನಿಸಿದ್ದರು.

ಅವರ ವರ್ತನೆಯಿಂದ ಹುಲಿಗೂ ಕಿರಿಕಿರಿ ಆಗಿದ್ದು, ಅದು ಘರ್ಜಿಸಿ ಮುಂದೆ ಸಾಗಿತ್ತು. ಹುಲಿಗಳು ಯಾವಾಗ ಮತ್ತು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಈ ವಿಡಿಯೋ ಆಧಾರವಾಗಿಟ್ಟುಕೊಂಡು ಅರಣ್ಯಾಧಿಕಾರಿಗಳು ನಟಿ ವಿರುದ್ಧ ಇದೀಗ ತನಿಖೆಗೆ ಆದೇಶಿಸಿದ್ದಾರೆ.

ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಅವರು ಸಫಾರಿ ತೆರಳಿದ್ದರು. ಅಂದು ಸಿಬ್ಬಂದಿ ಜೊತೆ ವಾಹನದಲ್ಲಿ ತೆರಳುತ್ತಾ ಕರ್ಕಶ ಶಬ್ಧದೊಂದಿಗೆ ಹುಲಿಯ ಹತ್ತಿರ ಹೋಗುತ್ತಿರುವುದನ್ನು ಆ ವಿಡಿಯೋವನ್ನು ಗಮನಿಸಬಹುದು. ಈ ವಿಡಿಯೋ ವೈರಲ್​ ಆದ ಬಳಿಕ ಮೇಲಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.

ಅರಣ್ಯದ ಉಪ ವಿಭಾಗಾಧಿಕಾರಿ (ಎಸ್‌ಡಿಒ) ಧೀರಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ಹಿರಿಯ ಅಧಿಕಾರಿಗಳ ನಿರ್ದೇಶನದ ನಂತರ, ಘಟನೆಯ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ಸಫಾರಿ ವೇಳೆ ಅವರ ಜೀಪ್​ ಹುಲಿಯ ಬಳಿ ತಲುಪಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವಾಹನ ಚಾಲಕ ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಈ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ.. ಅನುಮಾನಪಟ್ಟು ಪ್ರೀತಿಸಿದವಳನ್ನೇ ಕೊಂದ ಲವರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.