ETV Bharat / entertainment

IPL 2023: ನಾಳೆಯಿಂದ ಐಪಿಎಲ್‌ ಹಬ್ಬ; ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ, ತಮನ್ನಾ ನೃತ್ಯ ಝಲಕ್! - ಐಪಿಎಲ್​​ 2023

ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ನೃತ್ಯ ಮಾಡಲಿದ್ದಾರೆ.

IPL 2023 Opening Ceremony
IPL 2023 ಉದ್ಘಾಟನಾ ಸಮಾರಂಭ
author img

By

Published : Mar 30, 2023, 1:45 PM IST

ಇಂಡಿಯನ್ ಪ್ರೀಮಿಯರ್ ಲೀಗ್ (IPL). ವಿಶ್ವಾದ್ಯಂತ ಸಖತ್​ ಕ್ರೇಜ್ ಹೊಂದಿರುವ ಟಿ-20 ಲೀಗ್‌. ಇದು ಮನರಂಜನಾತ್ಮಕ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್ ಕೂಡ ಹೌದು. ಮೆಗಾ ಟೂರ್ನಿಗಾಗಿ ಕ್ರಿಕೆಟಿಗರು, ಕ್ರಿಕೆಟ್ ಪ್ರೇಮಿಗಳು ಕಾತರರಾಗಿದ್ದಾರೆ. ನಾಳೆ ಸಂಜೆ 6ಕ್ಕೆ ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಅದ್ಧೂರಿಯಾಗಿ ಆರಂಭವಾಲಿದ್ದು, ಕ್ಷಣಗಣನೆ ಶುರುವಾಗಿದೆ. ಮೇ 28ರವರೆಗೂ ಕ್ರಿಕೆಟ್​ ಹಬ್ಬ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಬಹುಭಾಷಾ ತಾರೆಯರಾದ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ನೃತ್ಯ ಮಾಡಲಿದ್ದಾರೆ. ಕೋವಿಡ್​ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಉದ್ಘಾಟನಾ ಕಾರ್ಯಕ್ರಮ ನಡೆದಿರಲಿಲ್ಲ. ಈ ವರ್ಷದ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ IPL 2023 ಪೋಸ್ಟರ್ ಹಾಕಿಕೊಂಡು, ಈ ಬಗ್ಗೆ ಖಚಿತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಸಮಾರಂಭದಲ್ಲಿ ಈ ನಟಿಮಣಿಯರು ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿತ್ತು.

ಮೊದಲ ಪಂದ್ಯ: ನಾಳೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಕ್ರಿಕೆಟ್​ ಹಬ್ಬದ ಆರಂಭಕ್ಕೂ ಅರ್ಧ ಗಂಟೆ ಮೊದಲು ಉದ್ಘಾಟನಾ ಸಮಾರಂಭ ನಡೆಯುತ್ತದೆ.

ಇದನ್ನೂ ಓದಿ: ಡಾಲಿ ಅಭಿನಯದ 'ಗುರುದೇವ್​ ಹೊಯ್ಸಳ' ಬಿಡುಗಡೆ: ಶುಭ ಕೋರಿದ ರಶ್ಮಿಕಾ ಮಂದಣ್ಣ ​

ಬಾಲಿವುಡ್​ನಲ್ಲಿ ಕೆಲ ಸಮಯ ಕಳೆದ ರಶ್ಮಿಕಾ ಮಂದಣ್ಣ ಇದೀಗ ದಕ್ಷಿಣದತ್ತ ಮುಖ ಮಾಡಿದ್ದಾರೆ. VNRTrio - ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ನಟಿಯ ಮುಂದಿನ ಚಿತ್ರ. ನ್ಯಾಶನಲ್​ ಕ್ರಶ್​ ಖ್ಯಾತಿಯ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್​ ನಟ ನಿತಿನ್ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿ VNRTrio ಮುಹೂರ್ತ ಸಮಾರಂಭ ನೆರವೇರಿದ್ದು, ಮೆಗಾಸ್ಟಾರ್ ಚಿರಂಜೀವಿ ಚಿತ್ರಕ್ಕೆ ಮೊದಲ ಕ್ಲ್ಯಾಪ್​ ಮಾಡಿದ್ದಾರೆ. ನಿತಿನ್ ಮತ್ತು ನಿರ್ದೇಶಕ ವೆಂಕಿ ಕುಡುಮುಲ ಅವರೊಂದಿಗೆ ನಟಿ ರಶ್ಮಿಕಾ ಮಂದಣ್ಣ ಕೆಲಸ ಮಾಡುತ್ತಿರುವ ಎರಡನೇ ಚಿತ್ರವಿದು. 2020ರಲ್ಲಿ ತೆರೆ ಕಂಡ ಭೀಷ್ಮಾ ಚಿತ್ರದಲ್ಲಿ ನಿತಿನ್​ ಮತ್ತು ರಶ್ಮಿಕಾ ಸ್ಕ್ರೀನ್​ ಶೇರ್ ಮಾಡಿದ್ದರು.

ಇದನ್ನೂ ಓದಿ: RRR ನಾಟು ನಾಟು ಹಾಡಿಗೆ 'G-20' ಪ್ರತಿನಿಧಿಗಳೂ ಫಿದಾ: ವಿಡಿಯೋ

ಸಿನಿ ಜಗತ್ತಿನಲ್ಲಿ 18 ವರ್ಷಗಳನ್ನು ಪೂರೈಸಿರುವ ತಮನ್ನಾ ಭಾಟಿಯಾ ಅವರು ರಜನಿಕಾಂತ್ ಅವರ ಮುಂದಿನ ಜೈಲರ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ವಿಜಯ್​ ವರ್ಮಾ ಜೊತೆಗೆ ಕೆಲಸ ಮಾಡುತ್ತಿದ್ದು, ಇವರಿಬ್ಬರ ಡೇಟಿಂಗ್​​ ವದಂತಿಯೂ ಜೋರಾಗಿಯೇ ಹರಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.