ETV Bharat / entertainment

Animal: ಅನಿಮಲ್‌ ಚಿತ್ರದಲ್ಲಿ ರಣ್​ಬೀರ್ ಕಪೂರ್​-​ ರಶ್ಮಿಕಾ ಮಂದಣ್ಣ: ಸಿನಿಮಾ ಸೆಟ್‌ ಫೋಟೋ ವೈರಲ್​​ - Rashmika Ranbir movie

ರಶ್ಮಿಕಾ ಮಂದಣ್ಣ ಮತ್ತು ರಣ್​ಬೀರ್ ಕಪೂರ್ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Rashmika Mandanna Ranbir Kapoor
ರಶ್ಮಿಕಾ ಮಂದಣ್ಣ ರಣ್​ಬೀರ್ ಕಪೂರ್
author img

By

Published : Jun 18, 2023, 10:53 AM IST

ಸ್ಯಾಂಡಲ್​ವುಡ್​ನಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಅವರ ಮುಂದಿನ ಬಹುನಿರೀಕ್ಷಿತ ಬಾಲಿವುಡ್​​ ಸಿನಿಮಾ 'ಅನಿಮಲ್'. ರಣ್​ಬೀರ್ ಕಪೂರ್ ಜೊತೆ ಇವರು ತೆರೆ ಹಂಚಿಕೊಂಡಿದ್ದು, ಇತ್ತೀಚೆಗೆ ಪ್ರಿ-ಟೀಸರ್ ಮೂಲಕ ಅನಿಮಲ್​​ ಸುದ್ದಿ ಮಾಡಿದೆ. 'ಕಬೀರ್ ಸಿಂಗ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್​​ ಚಿತ್ರವು ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. 2023ರ ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದ್ದು, ಯಶಸ್ವಿಯಾಗುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಟ್ರೇಲರ್ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿರುವ ಈ ಹೊತ್ತಿನಲ್ಲಿ 'ಅನಿಮಲ್' ಸೆಟ್‌ನ ಕೆಲವು ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಫೋಟೋಗಳಲ್ಲಿ, ಬಾಲಿವುಡ್​ ನಟ ರಣ್​​ಬೀರ್ ಕಪೂರ್ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮುದ್ದಾದ ನಗು ಬೀರಿದ್ದಾರೆ. ವೈರಲ್​ ಫೋಟೋಗಳಿಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, "ಅವನು ಮ್ಯಾಚೋ ಮ್ಯಾನ್, ಅವಳು ಸನ್ಶೈನ್ ಗರ್ಲ್" ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, "ಕ್ಯೂಟ್​ ಜೋಡಿ" ಎಂದು ಬರೆದಿದ್ದಾರೆ. ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು, "ರಾವಣನು ದುಷ್ಟನಾಗಿದ್ದನು. ಆದರೆ ಅವನು (ರಣಬೀರ್) 'ಆದಿಪುರುಷ'ನಲ್ಲಿನ ಸೈಫ್‌ನಂತೆ ಮೂರ್ಖನಾಗಿರಲಿಲ್ಲ" ಎಂದು ಬರೆದಿದ್ದಾರೆ.

'ಅನಿಮಲ್' ಸಿನಿಮಾದಲ್ಲಿ ರಣ್​ಬೀರ್​, ರಶ್ಮಿಕಾ ಮಾತ್ರವಲ್ಲದೇ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2023ರ ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧವಾಗಿದೆ. ಈ ಚಿತ್ರವು ಸನ್ನಿ ಡಿಯೋಲ್ ಅವರ ಮುಂಬರುವ ಚಿತ್ರ 'ಗದರ್ 2' ಮತ್ತು ಅಕ್ಷಯ್ ಕುಮಾರ್ ಅವರ OMG 2 ಸಿನಿಮಾದೊಂದಿಗೆ ಪೈಪೋಟಿ ಸಡೆಸಲಿದೆ. ಈ ಮೂರು ಚಿತ್ರಗಳು ಆಗಸ್ಟ್​ನಲ್ಲಿ ತೆರೆಕಾಣಲಿದೆ.

ಇದಕ್ಕೂ ಮೊದಲು, 'ಅನಿಮಲ್​​' ನಿರ್ಮಾಪಕರು ರಣ್​ಬೀರ್​​ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ಇದರಲ್ಲಿ ನಟ ತಮ್ಮ ತೋಳಿನ ಕೆಳಗೆ ಕೊಡಲಿ ಹಿಡಿದಿದ್ದಾರೆ, ಭುಜದ ಮೇಲೆ ರಕ್ತದ ಕಲೆಗಳನ್ನು ಹೊಂದಿದ್ದಾರೆ ಮತ್ತು ಸಿಗರೇಟ್ ಹಚ್ಚುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಬಳಿಕ ಚಿತ್ರದ ಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: Divya Uruduga: 'ನಮ್ಮ ಆಯ್ಕೆಯಂತೆ ನಾವು...'- ಬಿಗ್‌ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಹೀಗಂದಿದ್ದೇಕೆ?

ರಣ್​​​ಬೀರ್​ ಇತ್ತೀಚೆಗೆ ನಟಿ ಶ್ರದ್ಧಾ ಕಪೂರ್ ಜೊತೆಗೆ 'ತು ಜೂಟಿ ಮೆ ಮಕ್ಕರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಲವ್ ರಂಜನ್ ನಿರ್ದೇಶನದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸದ್ದು ಮಾಡಿದೆ. 'ತು ಜೂಟಿ ಮೆ ಮಕ್ಕರ್'ಗೂ ಮುನ್ನ ಬಂದ ಬ್ರಹ್ಮಾಸ್ತ್ರ ಕೂಡ ಯಶಸ್ವಿ ಆಗಿತ್ತು. ರಶ್ಮಿಕಾ ಮಂದಣ್ಣ 'ಪುಷ್ಪ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Adipurush: ಶೂರ್ಪನಖಿ ಪಾತ್ರಧಾರಿ ತೇಜಸ್ವಿನಿ ಪಂಡಿತ್ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.