ETV Bharat / entertainment

ಸಾಮಿ ಸಾಮಿ ಹಾಡಿಗೆ ಬಾಲಿವುಡ್​ ಬ್ಯಾಚುಲರ್ ಸಲ್ಲು ಜೊತೆ ನ್ಯಾಷನಲ್​ ಕ್ರಶ್ ಮಸ್ತ್ ಡ್ಯಾನ್ಸ್ - rashmika salman dance

ನಟ ಸಲ್ಮಾನ್ ಖಾನ್ ಮತ್ತು ನಟಿ ರಶ್ಮಿಕಾ ಮಂದಣ್ಣ 'ಪುಷ್ಪಾ-ದಿ ರೈಸ್' ಚಿತ್ರದ ಸೂಪರ್ ಹಿಟ್ ಸಾಮಿ ಸಾಮಿ ಸಾಂಗ್​ಗೆ ಡ್ಯಾನ್ಸ್​ ಮಾಡಿದ್ದಾರೆ.

rashmika mandanna dance with Bollywood super star salman khan
ಬಾಲಿವುಡ್​ ಬ್ಯಾಚುಲರ್ ಸಲ್ಲು ಜೊತೆ ನ್ಯಾಶನಲ್​ ಕ್ರಶ್ ಮಸ್ತ್ ಡ್ಯಾನ್ಸ್
author img

By

Published : Sep 29, 2022, 7:55 PM IST

ಮುಂಬೈನಲ್ಲಿ ನಿನ್ನೆ ರಾತ್ರಿ ನಡೆದ ಸಮಾರಂಭವೊಂದರಲ್ಲಿ ಸಲ್ಮಾನ್ ಖಾನ್ ಮತ್ತು ನ್ಯಾಷನಲ್​ ಕ್ರಷ್ 'ಪುಷ್ಪಾ-ದಿ ರೈಸ್' ಚಿತ್ರದ ಸೂಪರ್ ಹಿಟ್ ಸಾಮಿ ಸಾಮಿ ಸಾಂಗ್​ಗೆ ಡ್ಯಾನ್ಸ್​ ಮಾಡಿದ್ದಾರೆ. ಸಲ್ಮಾನ್ ಮತ್ತು ರಶ್ಮಿಕಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಮಾರಂಭದ ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ ಜೊತೆ ಸಲ್ಮಾನ್ ಖಾನ್ ಡ್ಯಾನ್ಸ್ ಮಾಡಿದ್ದಾರೆ. ಇವರಿಗೆ ವೇದಿಕೆಯಲ್ಲಿದ್ದ ನಿರೂಪಕರೂ ಸೇರಿದಂತೆ ಇತರರೂ ಸಾಥ್ ನೀಡಿದ್ದಾರೆ. ಅಭಿಮಾನಿಗಳು ಕೂಡ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಶೇರ್ ಮಾಡುತ್ತಿದ್ದಾರೆ. ವಿಡಿಯೋದಲ್ಲಿ, ಸಲ್ಮಾನ್ ಖಾನ್ ಜೀನ್ಸ್, ಟೀ-ಶರ್ಟ್ ಜಾಕೆಟ್, ಧರಿಸಿದ್ದು ರಶ್ಮಿಕಾ ಸೀರೆಯಲ್ಲಿ ಶೈನ್​ ಆಗಿರೋದನ್ನು ಕಾಣಬಹುದು.

ಟಾಲಿವುಡ್​ನ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್​ ಕ್ರಷ್ ರಶ್ಮಿಕಾ ಮಂದಣ್ಣ ಒಟ್ಟಿಗೆ ಹೆಜ್ಜೆ ಹಾಕಿರುವ 'ಪುಷ್ಪಾ-ದಿ ರೈಸ್' ಸಿನಿಮಾದ ಸಾಮಿ ಸಾಮಿ ಸಾಂಗ್​ ಸೂಪರ್​ ಹಿಟ್ ಆಗಿದೆ. ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. ಈಗಲೂ ಸಭೆ ಸಮಾರಂಭಗಳಲ್ಲಿ ಈ ಹಾಡು ಸದ್ದು ಮಾಡುತ್ತದೆ. ಇತ್ತೀಚೆಗೆ ಶಾಲಾ ಬಾಲಕಿಯೊಬ್ಬಳು ಇದೇ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸ್ವತಃ ರಶ್ಮಿಕಾ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬಾಲಕಿಯನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡಿಗೆ ಡ್ಯಾನ್ಸ್​​.. ಈ ಬಾಲಕಿಯನ್ನು ಭೇಟಿಯಾಗಬೇಕೆಂದ ನಟಿ ರಶ್ಮಿಕಾ ಮಂದಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.