ETV Bharat / entertainment

ಅತ್ಯಂತ ಜನಪ್ರಿಯ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ರಶ್ಮಿಕಾ ಮಂದಣ್ಣ - most popular celebrity

IMDB ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ರಶ್ಮಿಕಾ ಮಂದಣ್ಣ ಮೂರನೇ ಸ್ಥಾನದಲ್ಲಿದ್ದಾರೆ.

Rashmika Mandanna
ರಶ್ಮಿಕಾ ಮಂದಣ್ಣ
author img

By

Published : Apr 15, 2023, 8:44 PM IST

ಕನ್ನಡತಿ ರಶ್ಮಿಕಾ ಮಂದಣ್ಣ ಬಹು ಭಾಷೆ ತಾರೆಯಾಗಿ ಮಿಂಚುತ್ತಿದ್ದಾರೆ. ಸಾಕಷ್ಟು ಟೀಕೆ, ಟ್ರೋಲ್​ ಎದುರಿಸಿದರೂ ​ನ್ಯಾಷನಲ್ ಕ್ರಶ್ ಕ್ರೇಜ್​ ಕಿಂಚಿತ್ತೂ ಕಮ್ಮಿ ಆಗಿಲ್ಲ. ಬಹು ಭಾಷಾ ನಟಿಯ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಿರಿಕ್​ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಅವರು ಸದ್ಯ ತೆಲುಗು, ತಮಿಳು ಜೊತೆಗೆ ಹಿಂದಿಯಲ್ಲೂ ಜನಪ್ರಿಯ ನಾಯಕ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸೌಂದರ್ಯ ಮತ್ತು ನಟನೆಗೆ ಸಿನಿಪ್ರೇಮಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸದ್ಯ ಅಪರೂಪದ ಸಾಧನೆ ಮಾಡಿದ್ದಾರೆ. IMDb ಪ್ರಕಟಿಸಿದ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಮೂರನೇ ಸ್ಥಾನದಲ್ಲಿದ್ದಾರೆ.

IMDB ಪಟ್ಟಿಯಲ್ಲಿ ರಶ್ಮಿಕಾ ಮೂರನೇ ಸ್ಥಾನ ಪಡೆದಿದ್ದಾರೆ. ಈ ತಿಂಗಳ ಆರಂಭದಲ್ಲಿ ರಶ್ಮಿಕಾ ಅವರ ಹುಟ್ಟುಹಬ್ಬ ಮತ್ತು ಪುಷ್ಪ 2 ಟೀಸರ್ ಬಿಡುಗಡೆಯಾದ ಕಾರಣ ಇಂಟರ್ನೆಟ್‌ನಲ್ಲಿ ಹೆಚ್ಚು ಸದ್ದು ಮಾಡಿದ ಸೆಲೆಬ್ರಿಟಿಗಳಲ್ಲಿ ಒಬ್ಬರಾದರು. ಇದರೊಂದಿಗೆ, ಅವರು ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. IMDb ತನ್ನ ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮೂಲಕ ಇದನ್ನು ಪ್ರಕಟಿಸಿದೆ. ನ್ಯಾಷನಲ್ ಕ್ರಶ್ ಈ ಅಪರೂಪದ ಸಾಧನೆ ಮಾಡಿದ್ದು, ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ನಟಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ತಮಿಳು ನಿರ್ದೇಶಕ ವೆಟ್ರಿಮಾರನ್ 11ನೇ ಸ್ಥಾನದಲ್ಲಿದ್ದಾರೆ. ಪುಷ್ಪ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಾಯಕ ನಟ ಅಲ್ಲು ಅರ್ಜುನ್ 17ನೇ ಸ್ಥಾನದಲ್ಲಿರುವುದು ಗಮನಾರ್ಹ. ಆ ನಂತರ ಮೃಣಾಲ್ ಠಾಕೂರ್ (31), ತಮನ್ನಾ ಭಾಟಿಯಾ (33), ಕರೀನಾ (34), ನಾನಿ (49), ಅಲಯಾ ಎಫ್(26), ಸಾರಾ ಅಲಿ ಖಾನ್​(27) ಮತ್ತು ಕೀರ್ತಿ ಸುರೇಶ್ 50ನೇ ಸ್ಥಾನದಲ್ಲಿ ಇದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಪೌಟ್-ಫೇಸ್ ಸೆಲ್ಫಿ: ಚಂದ್ರನಿಗೆ ಹೋಲಿಸಿದ ಅಭಿಮಾನಿ

ಇನ್ನೂ ಸಿನಿಮಾಗಳ ವಿಚಾರಕ್ಕೆ ಬಂದರೆ, ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರ ಜುಲೈನಲ್ಲಿ ತೆರೆಗೆ ಬರಲಿದೆ. ನಟಿಯ ಜನ್ಮದಿನದಂದು 'ಪುಷ್ಪಾ: ದಿ ರೂಲ್' ಚಿತ್ರದಿಂದ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್​ ಬಿಡುಗಡೆ ಆಗಿತ್ತು. ಬಳಿಕ ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಟೀಸರ್​ ಬಿಡುಗಡೆ ಆಗಿದ್ದು, ಸಿನಿಮಾ ಮೇಲೆ ಪ್ರೇಕ್ಷಕರ ಕುತೂಹಲ ಹೆಚ್ಚಿದೆ. ಇದಲ್ಲದೇ ವೆಂಕಿ ಕುಡುಮುಲ ನಿರ್ದೇಶನದ 'VNRTrio' ಚಿತ್ರದಲ್ಲಿ ನಿತಿನ್ ಜೊತೆಗೆ ನಟಿಸುತ್ತಿದ್ದಾರೆ. ನಿತಿನ್ ಮತ್ತು ನಿರ್ದೇಶಕ ವೆಂಕಿ ಕುಡುಮುಲ ಅವರೊಂದಿಗೆ ರಶ್ಮಿಕಾರ ಎರಡನೇ ಚಿತ್ರವಿದು. ಇದಕ್ಕೂ ಮೊದಲು ಭೀಷ್ಮಾ ಚಿತ್ರದಲ್ಲಿ ಮೂವರು ಒಟ್ಟಿಗೆ ಕೆಲಸ ಮಾಡಿದ್ದರು.

ಇದನ್ನೂ ಓದಿ: 'ರಾಘವೇಂದ್ರ ಸ್ಟೋರ್ಸ್' ಟ್ರೇಲರ್​​ ಅನಾವರಣಗೊಳಿಸಲಿದ್ದಾರೆ ಕಾಂತಾರ ಸ್ಟಾರ್ ರಿಷಬ್​ ಶೆಟ್ಟಿ

ತೆಲುಗು ಮತ್ತು ತಮಿಳಿನಲ್ಲಿ ರೈನ್ ಬೋ ಚಿತ್ರ ರೆಡಿ ಆಗುತ್ತಿದ್ದು, ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನು ಶಂತರುಬನ್ ನಿರ್ದೇಶಿಸುತ್ತಿದ್ದು, ದೇವ್​ ಮೋಹನ್​ ನಾಯಕ ನಟಿ. ಬಾಲಿವುಡ್​ನಲ್ಲಿ ರಣ್​​ಬೀರ್ ಕಪೂರ್ ಜೊತೆ ಅನಿಮಲ್ ಚಿತ್ರದಲ್ಲೂ ನಟಿಸಿದ್ದಾರೆ. ಇದು ಬಿಡುಗಡೆಗೆ ಸಿದ್ಧವಾಗಿದೆ. ಆಗಸ್ಟ್ 11ರಂದು ರಶ್ಮಿಕಾರ ಈ ಬಾಲಿವುಡ್ ಚಿತ್ರ ತೆರೆ ಕಾಣಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.