ಬಾಲಿವುಡ್ನ ಬ್ಯೂಟಿಫುಲ್ ದಂಪತಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ನಟ ರಣ್ವೀರ್ ಅವರು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ವೀಕ್ಷಿಸಲು ಹೆಂಡತಿಯನ್ನು ನಿನ್ನೆ ರಾತ್ರಿ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ರಣ್ವೀರ್ ಸಿಂಗ್ ಭಾವಚಿತ್ರವಿರುವ ಡ್ರೆಸ್ ಧರಿಸಿ ದೀಪಿಕಾ ಗಮನ ಸೆಳೆದಿದ್ದರು. ಇದೀಗ ಈ ಜೋಡಿ ಕಾರಿನಲ್ಲಿ ಕುಳಿತು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದ ಪ್ರಸಿದ್ಧ ಹಾಡು 'ವಾಟ್ ಜುಮ್ಕಾ'ಗೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚಿತ್ರದ ಸ್ಪೆಷಲ್ ಸೆಲೆಬ್ರಿಟಿ ಶೋ ಅನ್ನು ಮಿಸ್ ಮಾಡಿಕೊಂಡಿದ್ದ ದೀಪಿಕಾ ಅಂತಿಮವಾಗಿ ರಣ್ವೀರ್ ಅವರೊಂದಿಗೆ ನಿನ್ನೆ ತಡರಾತ್ರಿ ಸಿನಿಮಾ ನೋಡಿದ್ದಾರೆ. ಮುಂಬೈನಲ್ಲಿ ಪಿವಿಆರ್ನಿಂದ ಹೊರಬಂದ ದೀಪ್ವೀರ್ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದರು. ಫೋಟೋಗಳು ಮತ್ತು ವಿಡಿಯೋಗಳು ಇಂಟರ್ನೆಟ್ನಲ್ಲಿ ಸದ್ದು ಮಾಡಿದ್ದವು. ಇದೀಗ ಮತ್ತೆ ಇವರಿಬ್ಬರ ವಿಡಿಯೋವೊಂದು ನೋಡುಗರ ಮನ ಗೆದ್ದಿದೆ. ಈ ವೀಡಿಯೊವನ್ನು ಹಂಚಿಕೊಂಡ ರಣ್ವೀರ್ ಕೆಲವು ಮುದ್ದಾದ ಎಮೋಜಿಗಳೊಂದಿಗೆ, 'ದೀಪಿಕಾ ಇದನ್ನು ತುಂಬಾ ಇಷ್ಟಪಟ್ಟಿದ್ದಾರೆ' ಎಂದು ಶೀರ್ಷಿಕೆ ಬರೆದಿದ್ದಾರೆ.
ಸಿನಿಮಾ ಬಿಡುಗಡೆಗೂ ಮುನ್ನ ಸೆಲೆಬ್ರಿಟಿಗಳಿಗಾಗಿ ಹಮ್ಮಿಕೊಂಡಿದ್ದ ಸ್ಪೆಷಲ್ ಶೋಗೆ ದೀಪಿಕಾ ಗೈರಾಗಿದ್ದರು. ಈ ಕಾರಣಕ್ಕೆ ಈ ಜೋಡಿ ನಡುವೆ ಭಿನ್ನಭಿಪ್ರಾಯವಿದೆ ಎಂಬ ಊಹಾಪೋಹಗಳು ಹಬ್ಬಿತ್ತು. ವರದಿಗಳ ಪ್ರಕಾರ ಆ ಸಮಯದಲ್ಲಿ ದೀಪಿಕಾ ತಮ್ಮ ಕೆಲಸದ ಸಲುವಾಗಿ ಹೈದರಾಬಾದ್ನಲ್ಲಿದ್ದರು. ಬಳಿಕ ಸಿನಿಮಾ ತೆರೆಕಂಡ ಮೊದಲ ದಿನ ನಿರ್ದೇಶಕ ಕರಣ್ ಜೋಹರ್ ಮನೆಯಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಗೆ ಆಗಮಿಸಿ ಊಹಾಪೋಹಗಳಿಗೆ ತೆರೆ ಎಳೆದಿದ್ದರು.
ಇದನ್ನೂ ಓದಿ: 'ಸೈಫ್ ಅಲಿ ಖಾನ್ ಅವರಲ್ಲಿ ರಾಜಮನೆತನದ ವರ್ಚಸ್ಸಿದೆ': ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಗುಣಗಾನ
RARKPK ಕಲೆಕ್ಷನ್: 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಜುಲೈ 28, ಶುಕ್ರವಾರದಂದು ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ಮೊದಲ ಎರಡು ದಿನಗಳಲ್ಲಿ 27 ಕೋಟಿ ರೂ. ಕಲೆಕ್ಷನ್ ಮಾಡಿದೆ. ರಣ್ವೀರ್ - ಆಲಿಯಾ ಮುಖ್ಯಭೂಮಿಕೆಯಲ್ಲಿದ್ದರೆ, ಧರ್ಮೇಂದ್ರ, ಜಯಾ ಬಚ್ಚನ್, ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಕಥೆ ಸಂಪೂರ್ಣವಾಗಿ ವಿಭಿನ್ನ ಹಿನ್ನೆಲೆ ಮತ್ತು ಸಂಸ್ಕೃತಿಯಿಂದ ಬಂದ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿ ಸುತ್ತ ಸುತ್ತುತ್ತದೆ. ಈ ಜೋಡಿಯ ಪ್ರೇಮಕಥೆಯೇ ಚಿತ್ರದ ಕೇಂದ್ರಬಿಂದು. ಅವರ ವಿಭಿನ್ನ ಆಚರಣೆಗಳು, ಜೀವನ ಶೈಲಿಯಿಂದಾಗಿ ಉದ್ಭವಿಸುವ ಸವಾಲುಗಳು ಮತ್ತು ಸಂತೋಷಕರ ಕ್ಷಣಗಳನ್ನು ಈ ಸಿನಿಮಾ ಹೇಳುತ್ತದೆ.
ಇದನ್ನೂ ಓದಿ: Kiara Advani: ನಾಳೆ ಕಿಯಾರಾ ಬರ್ತ್ಡೇ - ಅನಾವರಣಗೊಳ್ಳಲಿದೆ 'ಗೇಮ್ ಚೇಂಜರ್' ಫಸ್ಟ್ ಲುಕ್