ದಿವಂಗತ ಬಾಲಿವುಡ್ ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಅವರ ಪತ್ನಿ, ಗಾಯಕಿ ಪಮೇಲಾ ಚೋಪ್ರಾ ಅವರು ಏಪ್ರಿಲ್ 20 ರಂದು ನಿಧನರಾಗಿದ್ದಾರೆ. ಈ ಹಿನ್ನೆಲೆ ಸಂತಾಪ ಸೂಚಿಸಲು ಬಾಲಿವುಡ್ ತಾರಾ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಆದಿತ್ಯ ಚೋಪ್ರಾ ನಿವಾಸದಲ್ಲಿ ಕಾಣಿಸಿಕೊಂಡರು. ಈ ಭೇಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಏಕೆಂದರೆ, ನೆಟ್ಟಿಗರು ನಟ ರಣಬೀರ್ ತಮ್ಮ ಹೆಂಡತಿ ಮೇಲಿಟ್ಟಿರುವ ಪ್ರೀತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಡಿಯೋದಲ್ಲಿ, ರಣಬೀರ್ ಅವರು ಆಲಿಯಾ ಹಿಂದೆ ನಡೆದುಕೊಂಡು ಹೋಗುತ್ತಿರುತ್ತಾರೆ. ಆದಿತ್ಯ ಚೋಪ್ರಾ ಮನೆಯ ಒಳಗೆ ಪ್ರವೇಶಿಸುವಾಗ ನಟಿ ತಮ್ಮ ಚಪ್ಪಲಿಯನ್ನು ಕಳಚಿಟ್ಟು ಹೋಗುತ್ತಾರೆ. ಹಿಂದೆ ಇದ್ದ ರಣಬೀರ್ ಅದನ್ನು ತಮ್ಮ ಕೈಯಲ್ಲಿ ಎತ್ತಿ ಒಂದು ಮೂಲೆಯಲ್ಲಿ ಇಟ್ಟಿರುವುದು ಕಂಡು ಬಂದಿದೆ. ಇದು ಅಭಿಮಾನಿಗಳ ಪ್ರೀತಿಯ ಲೈಕ್ಸ್ ಮತ್ತು ಕಮೆಂಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಫ್ಯಾನ್ಸ್ ಬಗೆ ಬಗೆಯ ಬರಹಗಳು ಮತ್ತು ಕೆಂಪು ಹೃದಯದ ಎಮೋಜಿಗಳಿಂದ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ.
- " class="align-text-top noRightClick twitterSection" data="
">
ಅಭಿಮಾನಿಯೊಬ್ಬರು, 'ರಣಬೀರ್ ಈ ಗೆಸ್ಟರ್ಗಾಗಿ ನಿಮ್ಮನ್ನು ಪ್ರೀತಿಸುತ್ತೇನೆ' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ಈ ದಂಪತಿಗೆ ವಿಶೇಷವಾದ ಗೌರವ. ಅವರು ಸಾಧ್ಯವಾದಷ್ಟು ಹಿರಿಯರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಾರೆ' ಎಂದು ಹೇಳಿದ್ದಾರೆ. ಮತ್ತೊಬ್ಬ ಫ್ಯಾನ್, 'ಭಾರತದ ಅತ್ಯುತ್ತಮ ಜೋಡಿ. ನಾಟಕ, ಓವರ್ ಆ್ಯಕ್ಟಿಂಗ್ ಯಾವುದೂ ಇಲ್ಲ' ಎಂದು ಕಮೆಂಟ್ ಮಾಡಿದ್ದಾರೆ. ರಣಬೀರ್ ಮತ್ತು ಆಲಿಯಾ ಅಲ್ಲದೇ ಸೈಫ್ ಅಲಿ ಖಾನ್, ಕರೀನಾ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಆದಿತ್ಯ ಚೋಪ್ರಾ ನಿವಾಸಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: 'ಸೂತ್ರಧಾರಿ' ಜಪ ಮಾಡುತ್ತಿರುವ ಚಂದನ್ ಶೆಟ್ಟಿ: ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ
ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪಮೇಲಾ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ತಮ್ಮ 74 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಪ್ರಸಿದ್ಧ ಹಿನ್ನೆಲೆ ಗಾಯಕಿ ಪಮೇಲಾ ಅವರು ಯಶ್ ಚೋಪ್ರಾ ಅವರ ಬೆಂಬಲಕ್ಕೆ ಸದಾ ಒಂದು ಹೆಜ್ಜೆ ಮುಂದಿದ್ದರು. ಇವರು ನಿರ್ಮಾಪಕಿ, ಕಥೆಗಾರ್ತಿ, ಹಿನ್ನೆಲೆ ಗಾಯಕಿಯಾಗಿಯೂ ಕೆಲಸ ಮಾಡಿದ್ದಾರೆ. 1970 ರಲ್ಲಿ ಯಶ್ ಮತ್ತು ಪಮೇಲಾ ಅವರು ದಾಂಪತ್ಯ ಜೀವನ ಆರಂಭಿಸಿದ್ದರು. ಅವರಿಗೆ ಆದಿತ್ಯ ಚೋಪ್ರಾ ಮತ್ತು ಉದಯ್ ಚೋಪ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಆದಿತ್ಯ ಚೋಪ್ರಾ ಅವರು ನಿರ್ಮಾಪಕ ಮತ್ತು ನಿರ್ದೇಶಕ ಆಗಿದ್ದು, ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರನ್ನು ಮದುವೆಯಾಗಿದ್ದಾರೆ. ಇನ್ನು ಉದಯ್ ಚೋಪ್ರಾ ನಟ, ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯ ಹಿನ್ನೆಲೆ 15 ದಿನಗಳ ಕಾಲ ಪಮೇಲಾ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರನ್ನು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ, ಅವರ ಸ್ಥಿತಿ ಹದೆಗೆಡುತ್ತಲೇ ಇತ್ತು. ಹೀಗಾಗಿ ಚಿಕಿತ್ಸೆ ಫಲಿಸದೇ ಏಪ್ರಿಲ್ 20 ರಂದು ಕೊನೆಯುಸಿರೆಳೆದರು.
ಇದನ್ನೂ ಓದಿ: ಟೀಕೆ, ಟ್ರೋಲ್ಗಳನ್ನು ಎದುರಿಸಿ ಮಾದರಿ ದಂಪತಿಯಾದ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್