ETV Bharat / entertainment

ಶಾರುಖ್​ ಬರ್ತ್​ಡೇ ಪಾರ್ಟಿಯಿಂದ 'ರಾಲಿಯಾ' ರೊಮ್ಯಾಂಟಿಕ್ ಫೋಟೋ ವೈರಲ್​​ - ಶಾರುಖ್​ ಖಾನ್

ಕಿಂಗ್​ ಖಾನ್​ ಶಾರುಖ್​​ ನಿನ್ನೆ ಸಂಜೆ ಬಾಲಿವುಡ್​ ತಾರೆಯರಿಗಾಗಿ ತಮ್ಮ ಬರ್ತ್​​ಡೇ ಪಾರ್ಟಿ ಹಮ್ಮಿಕೊಂಡಿದ್ದರು.

Ranbir Kapoor and Alia Bhatt
ರಣ್​​ಬೀರ್ ಕಪೂರ್ ಆಲಿಯಾ ಭಟ್
author img

By ETV Bharat Karnataka Team

Published : Nov 3, 2023, 4:38 PM IST

ಸದ್ಯ ಬಿ-ಟೌನ್‌ನಲ್ಲಿ 'ಬಾದ್‌ಶಾ'ನದ್ದೇ ಸದ್ದು. ಇಂಡಿಯನ್​ ಸೂಪರ್​ ಸ್ಟಾರ್ ಶಾರುಖ್ ಖಾನ್ ನಿನ್ನೆ ತಮ್ಮ 58ನೇ ಬರ್ತ್​ಡೇ ಸೆಲೆಬ್ರೇಟ್​ ಮಾಡಿಕೊಂಡರು. 2023ರಲ್ಲಿ ಪಠಾಣ್​, ಜವಾನ್​ನಂತಹ ಎರಡು ಬ್ಲಾಕ್​ಬಸ್ಟರ್ ಸಿನಿಮಾ ಕೊಟ್ಟಿದ್ದಲ್ಲದೇ, ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೂ ಸಜ್ಜಾಗಿದ್ದಾರೆ. ಈ ಹಿನ್ನೆಲೆ ನಟನಿಗೆ 2023 ಬಹಳಾನೇ ವಿಶೇಷ ಎನ್ನಬಹುದು. ಈ ಹಿನ್ನೆಲೆ ಮೊದಲು ಅಭಿಮಾನಿಗಳೊಂದಿಗೆ ಸಮಯ ಕಳೆದು ನಂತರ ಸಿನಿ ಸ್ನೇಹಿತರಿಗಾಗಿ ಸಮಯ ಮೀಸಲಿಟ್ಟರು.

ಬಾಲಿವುಡ್ ತಾರೆಯರಿಗಾಗಿ ಸ್ಪೆಷಲ್​​ ಪಾರ್ಟಿ: ಕಿಂಗ್​ ಖಾನ್​ ಜನ್ಮದಿನ ಹಿನ್ನೆಲೆ ಗುರುವಾರದಂದು 'ಡಂಕಿ' ಸಿನಿಮಾದ ಟೀಸರ್​ ಅನಾವರಣಗೊಂಡಿದೆ. ಶಾರುಖ್​​ ತಮ್ಮ ವಿಶೇಷ ದಿನದಂದು ಬಾಲಿವುಡ್ ತಾರೆಯರಿಗಾಗಿ ಸ್ಪೆಷಲ್​​ ಪಾರ್ಟಿ ಸಹ ಆಯೋಜಿಸಿದ್ದರು. ಬರ್ತ್​​ಡೇ ಸೆಲೆಬ್ರೇಶನ್​ನ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಸೆಲೆಬ್ರಿಟಿಗಳ ಫೋಟೋ ವೈರಲ್​: ಹೌದು, ಶಾರುಖ್ ಖಾನ್ ಅವರ ಹುಟ್ಟುಹಬ್ಬಾಚರಣೆಯಲ್ಲಿ ಇಡೀ ಬಾಲಿವುಡ್ ದಂಡೇ ನೆರೆದಿತ್ತು. ಚಿತ್ರರಂಗದ ಬಹುತೇಕ ಖ್ಯಾತನಾಮರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಆದರೆ ಸಲ್ಮಾನ್ ಖಾನ್, ಅಮೀರ್ ಖಾನ್ ಮತ್ತು ಅಮಿತಾಭ್​ ಬಚ್ಚನ್ ಫ್ಯಾಮಿಲಿ ಕಾಣಿಸಿಕೊಂಡಿಲ್ಲ. ಸದ್ಯ ಅರ್ಜುನ್ ಕಪೂರ್, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಎಂಎಸ್ ಧೋನಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಫೋಟೋ, ವಿಡಿಯೋಗಳು ಹೊರಬಿದ್ದಿವೆ. ಇದೀಗ ಬಾಲಿವುಡ್ ಸ್ಟಾರ್ ಜೋಡಿ ರಣ್​​ಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ರೊಮ್ಯಾಂಟಿಕ್​ ಫೋಟೋ ಹೊರಬಿದ್ದಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

'ರಾಲಿಯಾ' ರೊಮ್ಯಾಂಟಿಕ್ ಫೋಟೋ: 'ಕಿಂಗ್ ಖಾನ್​​​' ಬರ್ತ್​​​ಡೇ ಸೆಲೆಬ್ರೇಶನ್​ನಲ್ಲಿ ತಾರಾ ದಂಪತಿ ಸಖತ್​ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. 'ರಾಲಿಯಾ' ರೊಮ್ಯಾಂಟಿಕ್ ಫೋಟೋ ಆನ್​ಲೈನ್​ನಲ್ಲಿ ವೈರಲ್ ಆಗುತ್ತಿದೆ. ಪಾರ್ಟಿಯಿಂದ​​ ರಣ್​​ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆಗೆ ಶಾಹಿನ್ ಭಟ್, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್ ಮತ್ತು ನವ್ಯಾ ನವೇಲಿ ನಂದಾ ಅವರ ಫೋಟೋಗಳು ಸಹ ಹೊರಬಿದ್ದಿವೆ.

ಇದನ್ನೂ ಓದಿ: ಹೇಗಿತ್ತು ಗೊತ್ತಾ ಶಾರುಖ್ ​ಖಾನ್​ ಹುಟ್ಟು ಹಬ್ಬದ ಪಾರ್ಟಿ; ಇಲ್ಲಿದೆ ನೋಡಿ ಫೋಟೋಸ್​!

ನಟಿ ಕರಿಷ್ಮಾ ಕಪೂರ್ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆಲಿಯಾ ಭಟ್, ಪತಿ ರಣ್​​ಬೀರ್ ಕಪೂರ್ ಕುತ್ತಿಗೆಗೆ ಕೈ ಹಾಕಿ ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿದ್ದಾರೆ. ರಣ್​ಬೀರ್​ ಕಪೂರ್​​ ಬ್ಲ್ಯಾಕ್​​ ಪ್ಯಾಂಟ್​, ವೈಟ್​ ಶರ್ಟ್ ಧರಿಸಿದ್ದರೆ, ಆಲಿಯಾ ಭಟ್ ಬ್ಲ್ಯಾಕ್ ಒನ್ ಪೀಸ್ ಮಿನಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾರುಖ್ ಖಾನ್: 'ಡಂಕಿ' ಬಗ್ಗೆ ಮತ್ತಷ್ಟು ಡೀಟೆಲ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.