ETV Bharat / entertainment

'ಈ ಸಿನಿಮಾ ಚಿತ್ರೀಕರಣದ ವೇಳೆ ನನಗೆ 22 ವರ್ಷ': ನಟ ಸೂರ್ಯ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ರಮ್ಯಾ - Ramya Surya movie

ಸನ್​​ ಆಫ್​ ಕೃಷ್ಣಮೂರ್ತಿ ಚಿತ್ರದ ಫೋಟೋ ಹಂಚಿಕೊಂಡು ನಟಿ ರಮ್ಯಾ ತಮ್ಮ ಪಾತ್ರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Ramya with Surya
ಸೂರ್ಯ ಜೊತೆಗಿನ ರಮ್ಯಾ ಫೋಟೋ
author img

By

Published : Jul 16, 2023, 1:00 PM IST

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು ರಮ್ಯಾ. ಮೋಹಕತಾರೆ ಎಂದೇ ಜನಪ್ರಿಯರಾಗಿರುವ ಇವರ ಬಗ್ಗೆ ಅಭಿಮಾನಿಗಳಿಗೆ ಕ್ರೇಜ್ ಇಂದಿಗೂ​ ಕಿಂಚಿತ್ತೂ ಕಡಿಮೆ ಆಗಿಲ್ಲ. ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟಿ ಇವರು. ಸ್ಯಾಂಡಲ್​ವುಡ್​ ಕ್ವೀನ್​ ಕೆಲ ಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಇದೀಗ ಸಿನಿಮಾ ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗಕ್ಕೆ ರಿಎಂಟ್ರಿ ಕೊಟ್ಟಿದ್ದಾರೆ. ಸಿನಿಮಾವೊಂದರಲ್ಲಿ ಅತಿಥಿ ಪಾತ್ರ ಕೂಡ ನಿರ್ವಹಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲೂ ಸಕ್ರಿಯರು. ಹೀಗೆ ನಾನಾ ಕಾರಣಗಳಿಂದ ಸುದ್ದಿಯಲ್ಲಿರುವ ರಮ್ಯಾ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಪೋಸ್ಟ್ ಹಾಕಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸೂರ್ಯ ಜೊತೆ ಸ್ಯಾಂಡಲ್​ವುಡ್​ ಕ್ವೀನ್​​: ಸನ್​​ ಆಫ್​ ಕೃಷ್ಣಮೂರ್ತಿ ಹಿಟ್​ ಚಿತ್ರಗಳಲ್ಲೊಂದು. ಈ ಸಿನಿಮಾದಲ್ಲಿ ನಟ ಸೂರ್ಯ ಜೊತೆ ಸ್ಯಾಂಡಲ್​ವುಡ್​ ಕ್ವೀನ್​​ ರಮ್ಯಾ ತೆರೆಹಂಚಿಕೊಂಡಿದ್ದರು. ಸಿನಿಮಾ ಸೂಪ್​ ಹಿಟ್​ ಆಗಿ, ಬಹುಭಾಷೆಯಲ್ಲಿ ನಟಿ ಜನಪ್ರಿಯತೆ ಸಂಪಾದಿಸಿದರು. ರಮ್ಯಾ ಅವರು ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಪಾತ್ರವನ್ನು ಜನರು ಇನ್ನೂ ಮರೆತಿಲ್ಲ. ಇದೀಗ ನಟಿ ರಮ್ಯಾ, ನಟ ಸೂರ್ಯ ಜೊತೆಗಿನ ಫೋಟೋ ಹಂಚಿಕೊಂಡು ಪಾತ್ರದ ಬಗ್ಗೆ, ಹಳೇ ದಿನಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಟಿ ರಮ್ಯಾ ಪೋಸ್ಟ್: ಸನ್​​ ಆಫ್​ ಕೃಷ್ಣಮೂರ್ತಿ ಸಿನಿಮಾ ಪೋಸ್ಟರ್ ಶೇರ್ ಮಾಡಿರುವ ರಮ್ಯಾ, ''ಈ ಚಿತ್ರದಲ್ಲಿ ಕೆಲಸ ಮಾಡಿದ್ದು, ಬಹಳ ಖುಷಿ ಕೊಟ್ಟಿದೆ. ನಾವು ಈ ಸಿನಿಮಾ ಚಿತ್ರೀಕರಿಸಿದ ವೇಳೆ ನನಗೆ 22 ವರ್ಷ. ನಾನು ಹಿಂದೆಂದೂ ಅನುಭವಿಸದಂತಹ ತೀವ್ರವಾದ ಭಾವನೆಗಳನ್ನು ಈ ಚಿತ್ರದಲ್ಲಿ ತೆರೆದಿಡಬೇಕಾಯಿತು. ಜೀವನ, ಕಳೆದುಕೊಳ್ಳುವಿಕೆ, ಸಂಬಂಧಗಳ ಬಗ್ಗೆ ಬಹಳಾನೇ ಕಲಿತುಕೊಂಡೆ. ನನಗೆ ಪ್ರಿಯಾ (ಚಿತ್ರದಲ್ಲಿ ರಮ್ಯಾ ಅವರ ಪಾತ್ರ) ಯಾವಾಗಲೂ ತಾಳ್ಮೆ ಮತ್ತು ಪ್ರೀತಿಯ ಅಂಶವಾಗಿ ಕಾಣುತ್ತಾಳೆ. ನಾನು ಹಾಗೆ ಪ್ರೀತಿಸಬಹುದೆಂದು ಈಗ ಬಯಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜೂ. ಎನ್​ಟಿಆರ್ 'ದೇವರ' ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪುತ್ರಿ: 6ರ ಹರೆಯದ ಅಲ್ಲು ಅರ್ಹಾ ಸಂಭಾವನೆ ಕೇಳಿದ್ರೆ ತಲೆತಿರುಗುತ್ತೆ!

'ಆ್ಯಪಲ್ ಬಾಕ್ಸ್ ಸ್ಟುಡಿಯೋಸ್' ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆ ಮೂಲಕ ರಮ್ಯಾ ಚಿತ್ರರಂಗಕ್ಕೆ ಕಮ್​ ಬ್ಯಾಕ್​ ಮಾಡಿದ್ದಾರೆ. ಸಿನಿಮಾಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಸದ್ಯ ಆ್ಯಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಮತ್ತು ರಾಜ್‌ ಬಿ.ಶೆಟ್ಟಿ ಕಾಂಬಿನೇಶನ್​ನಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಇತ್ತ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲೂ ರಮ್ಯಾ ಸ್ಪೆಷಲ್​ ರೋಲ್​​ನಲ್ಲಿ ಅಭಿನಯಿಸಿದ್ದಾರೆ. ಮತ್ತೆ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಅಭಿಷೇಕ್ ಬಚ್ಚನ್ ಸ್ಪರ್ಧೆ ಸಾಧ್ಯತೆ: ಯಾವ ಪಕ್ಷ, ಕ್ಷೇತ್ರ ಯಾವುದು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.