ETV Bharat / entertainment

ಪುತ್ರಿ ಕ್ಲಿನ್ ಕಾರಾ ಜೊತೆಗೆ ಮೊದಲ ವರಲಕ್ಷ್ಮಿ ವೃತ ಆಚರಿಸಿದ ರಾಮ್ ಚರಣ್ ಪತ್ನಿ ಉಪಾಸನಾ... - ನಟ ರಾಮ್ ಚರಣ್

ತೆಲುಗು ಚಿತ್ರರಂಗದ ಸೂಪರ್ ಸ್ಟಾರ್, ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೆಲಾ ಅವರು ತಮ್ಮ ಮಗಳು ಕ್ಲಿನ್ ಕಾರಾ ಜೊತೆಗೆ ಮೊದಲ ವರಲಕ್ಷ್ಮಿ ವೃತ ಆಚರಣೆ ಮಾಡಿರುವ ಸುಂದರವಾದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

Ram Charan's wife Upasana Konidela celebrates first Varalakshmi Vratham with daughter Klin Kaara
ಪುತ್ರಿ ಕ್ಲಿನ್ ಕಾರಾ ಜೊತೆಗೆ ಮೊದಲ ವರಲಕ್ಷ್ಮಿ ವೃತ ಆಚರಿಸಿದ ರಾಮ್ ಚರಣ್ ಪತ್ನಿ ಉಪಾಸನಾ...
author img

By ETV Bharat Karnataka Team

Published : Sep 2, 2023, 10:40 AM IST

ಹೈದರಾಬಾದ್: ಸೂಪರ್ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಅವರು ತಮ್ಮ ಪುಟ್ಟ ಮಗಳು ಕ್ಲಿನ್ ಕಾರ ಹುಟ್ಟಿದ ನಂತರ ತಮ್ಮ ಮೊದಲ ವರಲಕ್ಷ್ಮಿ ಪೂಜೆಯನ್ನು ಸಂಭ್ರಮದಿಂದ ನೆರವೇರಿಸಿದರು. ಶುಕ್ರವಾರ, ಉಪಾಸನಾ ಅವರು ಮಗಳು ಕ್ಲಿನ್ ಕಾರಾ ತನ್ನ ಮಡಿಲಲ್ಲಿ ಕೂರಿಸಿಕೊಂಡು ಪೂಜೆಯಲ್ಲಿ ನೇರವೇಸಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉಪಾಸನಾ ತನ್ನ ಎರಡು ತಿಂಗಳ ಮಗುವಿನ ಮುಖಕ್ಕೆ ನಗುತ್ತಿರುವ ಎಮೋಜಿ ಮಾಸ್ಕ್‌ ಹಾಕಲಾಗಿದೆ. ಇದರಿಂದ ಮಗುವಿನ ಮುಖ ಕಾಣಿಸಲಿಲ್ಲ.

ಉಪಾಸನಾ ವರಲಕ್ಷ್ಮಿ ಉಪವಾಸ: ಶ್ರಾವಣ ಶುಕ್ರವಾರದ ನಿಮಿತ್ತ ರಾಮ್ ಚರಣ್ ಪತ್ನಿ ಉಪಾಸನಾ ವರಲಕ್ಷ್ಮಿ ಉಪವಾಸ ಮಾಡಿದರು. ಪೂಜೆಯ ನಂತರ, ಅವರು ತಮ್ಮ ಮಗಳು ಕ್ಲಿನ್​ ಕಾರಾ ಜೊತೆಗಿನ ಫೋಟೋವನ್ನು ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ. "ನನಗೆ ಇದಕ್ಕಿಂತ ಹೆಚ್ಚೇನೂ ಬೇಡ. ಕ್ಲೀನ್​ ಕಾರಾ ಜೊತೆಗಿನ ನನ್ನ ಮೊದಲ ವರಲಕ್ಷ್ಮಿ ವೃತ'' ಎಂದು ಪೋಸ್ಟ್ ಮಾಡಿದ್ದಾರೆ. ಆದರೆ, ಕ್ಲೀನ್​ ಕಾರಾ ಮುಖ ಮಾತ್ರ ತೋರಿಸಲಿಲ್ಲ.

ಇನ್‌ಸ್ಟಾಗ್ರಾಮ್​ನಲ್ಲಿ ಸದ್ದು ಮಾಡಿದ ಕ್ಲಿನ್ ಕಾರಾ ಫೋಟೋ: ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿರುವ ಉಪಾಸನಾ ಅವರು, "ಹೆಚ್ಚು ಕೇಳಲು ಸಾಧ್ಯವಾಗಲಿಲ್ಲ (ಮಡಿಸಿದ ಕೈ ಎಮೋಜಿಯನ್ನು ಲಗತ್ತಿಸಲಾಗಿದೆ). ನನ್ನ ಕ್ಲಿನ್ ಕಾರಾ ಜೊತೆಗೆ (ಹೃದಯದ ಎಮೋಜಿಯನ್ನು ಲಗತ್ತಿಸಲಾಗಿದೆ) ನನ್ನ ಮೊದಲ ವರಲಕ್ಷ್ಮಿ ವೃತ" ಎಂದು ಬರೆದಿದ್ದಾರೆ.

ಬಿಳಿ ಉಡುಪಿನಲ್ಲಿ ಮಿಂಚಿದ ಪುತ್ರಿ ಕ್ಲಿನ್ ಕಾರಾ: ಉಪಾಸನಾ ತನ್ನ ಶೀರ್ಷಿಕೆಯಲ್ಲಿ ಆಶೀರ್ವಾದ, ಕೃತಜ್ಞತೆ ಹ್ಯಾಶ್‌ಟ್ಯಾಗ್‌ಗಳನ್ನು ಶೇರ್​ ಮಾಡಿದ್ದಾರೆ. ಕ್ಲಿನ್ ಕಾರಾ ಮೇಲೆ ಹಿಡಿದುಕೊಂಡು ಕ್ಯಾಮೆರಾಗಾಗಿ ನಗುತ್ತಿರುವಾಗ ಉಪಾಸನಾ ತನ್ನ ಕಾಲುಗಳನ್ನು ಮಡಚಿಕೊಂಡು ಕುಳಿತಿರುವುದನ್ನು ಚಿತ್ರ ತೋರಿಸುತ್ತದೆ. ಫೋಟೋದಲ್ಲಿ ಅರ್ಚಕರೊಬ್ಬರು ಬಲಭಾಗದಲ್ಲಿ ಕುಳಿತು ವಿಗ್ರಹದ ಪಕ್ಕದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ವಿಶೇಷ ಸಂದರ್ಭಕ್ಕಾಗಿ, ಉಪಾಸನಾ ಸಾಂಪ್ರದಾಯಿಕ ಕೆಂಪು ಉಡುಪು ಧರಿಸಲು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಪುತ್ರಿ ಕ್ಲಿನ್ ಕಾರಾ ಬಿಳಿ ಉಡುಪು ಧರಿಸಿದ್ದಾಳೆ.

ಒಂದೆರಡು ವಾರಗಳ ಹಿಂದೆ, ಕ್ಲಿನ್ ಕಾರಾ ತನ್ನ ಮೊದಲ ಸ್ವಾತಂತ್ರ್ಯ ದಿನವನ್ನು ಹೇಗೆ ಆಚರಿಸಿದರು ಎಂಬುದನ್ನು ಉಪಾಸನಾ ಹಂಚಿಕೊಂಡಿದ್ದರು. ಅವರು ಪೋಸ್ಟ್ ಮಾಡಿದ ಕೆಲವು ಚಿತ್ರಗಳಲ್ಲಿ ಅವರ ಮಗಳು, ಅಜ್ಜಿ ಶೋಬನಾ ಕಾಮಿನೇನಿ ಅವರ ತೋಳುಗಳಲ್ಲಿ ಕುಳಿತಿದ್ದ ದೃಶ್ಯ ಕಂಡ ಬಂದಿತ್ತು. ಫೋಟೋಗಳಲ್ಲಿ ಕ್ಲಿನ್ ಕಾರಾ ಮೇಲಿನ ಧ್ವಜವನ್ನು ಎಳೆದ ಹಗ್ಗವನ್ನು ಹಿಡಿದಿರುವುದನ್ನು ಕಾಣಬಹುದು. ಹಳದಿ ಬಣ್ಣದ ಉಡುಪನ್ನು ಧರಿಸಿದ್ದ ಕ್ಲಿನ್ ಕಾರಾ ತನ್ನ ಅಜ್ಜಿಯ ತೋಳುಗಳಲ್ಲಿ ತನ್ನ ಮುಖವನ್ನು ಇರಿಸಿದ್ದರು.

ರಾಮ್ ಚರಣ್ ಮತ್ತು ಉಪಾಸನಾ 2012ರಲ್ಲಿ ಮದುವೆಯಾಗುವ ಮೊದಲು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಡಿಸೆಂಬರ್ 2022 ರಲ್ಲಿ ಉಪಾಸನಾ ಗರ್ಭಧಾರಣೆ ವಿಷಯವನ್ನು ಸಾರ್ವಜನಿಕರಿಗೆ ತಿಳಿದಿತ್ತು. ಈ ವರ್ಷದ ಜೂನ್ 20ರಂದು ಉಪಾಸನಾ ತಮ್ಮ ಮಗಳನ್ನು ಸ್ವಾಗತಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ಮಗನಿಗೆ ಮಲೈಕಾ ಪ್ರೀತಿಯ ಅಪ್ಪುಗೆ; ಪಾಪ್​ಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.