ಹೈದರಾಬಾದ್: ಉಪೆನ್ನಾ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ಟಾಲಿವುಡ್ ನಟ ರಾಮ್ ಚರಣ್ಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರಲಿದ್ದು ಇನ್ನೂ ಹೆಸರು ಫೈನಲೈಸ್ ಮಾಡಿಲ್ಲ. ಪುಷ್ಪ ಖ್ಯಾತಿಯ ಸುಕುಮಾರ್ ಮಾಲೀಕತ್ವದ ವೃದ್ಧಿ ಸಿನಿಮಾಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ಸುಕುಮಾರ್ ಪ್ರೊಡಕ್ಷನ್ನ ಮೊದಲ ಸಿನಿಮಾವಾಗಿ ಮೂಡಿಬರಲಿದೆ.
ದಕ್ಷಿಣ ಸಿನಿಮಾ ರಂಗದ ಮೈತ್ರಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಕಾಸ್ಟಿಂಗ್ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಸದ್ಯಕ್ಕಂತೂ ರಾಮ್ ಚರಣ್ ಕೈಯಲ್ಲಿ ಆರ್ಸಿ 15 ಸಿನಿಮಾ ಇದೆ.
ಬುಚ್ಚಿ ಬಾಬು ಸನಾ ಸೋಮವಾರ ಟ್ವೀಟ್ ಮಾಡಿದ್ದು, ಕೆಲವೊಮ್ಮೆ ದಂಗೆ ಅನಿವಾರ್ಯವಾಗುತ್ತದೆ. ರಾಮ್ ಚರಣ್ ಜೊತೆಗೆ ಕೆಲಸ ಮಾಡುವುದು ಯಾವಾಗಲೂ ಸಂತಸ ಕೊಡುತ್ತದೆ. ಪ್ಯಾನ್ ಇಂಡಿಯಾ ಸಿನಿಮಾಕ್ಕಾಗಿ ತಯಾರಿ ಮಾಡಲಾಗುತ್ತಿದ್ದು, ಸುಕುಮಾರನ್ ಪ್ರಸ್ತುತ ಪಡಿಸುತ್ತಿದ್ದಾರೆ. ಮೈತ್ರಿ ಸಿನಿಮಾ ಹೌಸ್ ನಿರ್ಮಾಣ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ರಾಮ್ ಚರಣ್ ಕೂಡ ಇನ್ಸ್ಟಾ ಪೋಸ್ಟ್ ಹಾಕಿದ್ದಾರೆ. ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದು ನಟಿಸಲು ಉತ್ಸುಕನಾಗಿದ್ದೇನೆ. ಬುಚ್ಚಿ ಬಾಬು ಸನಾ ಮತ್ತು ಚಿತ್ರತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪಾಂಡವಪುರದಲ್ಲಿ ವೇದ ಚಿತ್ರದ ಆಡಿಯೋ ಬಿಡುಗಡೆ: ಭರ್ಜರಿ ಸ್ಟೆಪ್ ಹಾಕಿದ ಹ್ಯಾಟ್ರಿಕ್ ಹೀರೋ