ETV Bharat / entertainment

'ಪುಷ್ಪ 2' ಚಿತ್ರಕ್ಕೆ ರಾಮ್ ​ಚರಣ್​ ಎಂಟ್ರಿ? - ಪುಷ್ಪ 2 ರಾಮ್ ​ಚರಣ್

ಸೂಪರ್​ ಸ್ಟಾರ್ ರಾಮ್ ಚರಣ್ ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದ ಭಾಗವಾಗಲಿದ್ದಾರೆ ಎನ್ನಲಾಗುತ್ತಿದೆ.

Ram Charan entry to Pushpa 2 movie
'ಪುಷ್ಪ 2' ಚಿತ್ರಕ್ಕೆ ರಾಮ್ ​ಚರಣ್​ ಎಂಟ್ರಿ
author img

By

Published : Dec 11, 2022, 5:58 PM IST

ಸೌತ್​ ಸೂಪರ್​ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ: ದಿ ರೈಸ್ ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್ ಆಯಿತು. ಅದರ ಮುಂದುವರಿದ ಭಾಗ 'ಪುಷ್ಪ 2' ಚಿತ್ರೀಕರಣ ಭರದಿಂದ ಸಾಗುತ್ತಿದೆ. ದಕ್ಷಿಣದ ಮತ್ತೋರ್ವ ಸೂಪರ್​ ಸ್ಟಾರ್ ರಾಮ್ ಚರಣ್ ಅಲ್ಲು ಅರ್ಜುನ್ ಅವರ ಪುಷ್ಪ 2 ಸಿನಿಮಾದ ಭಾಗವಾಗಲಿದ್ದಾರೆ ಎನ್ನಲಾಗುತ್ತಿದೆ. ಸೋದರ ಸಂಬಂಧಿಯಾಗಿರುವ ಈ ನಟರು ಪುಷ್ಪ: ದಿ ರೂಲ್​ 2ನಲ್ಲಿ ಸ್ಕ್ರೀನ್​ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಕಳೆದ ಡಿಸೆಂಬರ್​​ನಲ್ಲಿ ತೆರೆ ಕಂಡ ಈ ಚಿತ್ರ 2021ರ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತು. ಈ ಚಿತ್ರದಿಂದ ಅಲ್ಲು ಅರ್ಜುನ್ ಗಳಿಸಿರುವ ಖ್ಯಾತಿ ಮತ್ತಷ್ಟು ಹೆಚ್ಚಿತು. ಇದು ಬಾಕ್ಸ್ ಆಫೀಸ್‌ನಲ್ಲಿ 350 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ.

ಚಿತ್ರಕಥೆ, ಅಲ್ಲು ಅರ್ಜುನ್​ - ರಶ್ಮಿಕಾ ಮಂದಣ್ಣ ಅಭಿನಯದ ಜೊತೆಗೆ ಸಾಮಿ ಸಾಮಿ ಸಾಂಗ್ ಕೂಡ ಪ್ರೇಕ್ಷಕರನ್ನು ಹೆಚ್ಚಾಗಿ ತಲುಪಿತು.​​ ದೇಶದ ಮೂಲೆ ಮೂಲೆಯಲ್ಲಿರುವವರನ್ನೂ ಕುಣಿಯುವಂತೆ ಮಾಡಿತು. ಅಲ್ಲು ಅರ್ಜುನ್ ಅಭಿನಯವನ್ನು ಜಾಗತಿಕವಾಗಿ ಪ್ರಶಂಸಿಸಲಾಯಿತು. ಪುಷ್ಪ 2 ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವಾಗ, ರಾಮ್ ಚರಣ್ ಅತಿಥಿ ಪಾತ್ರಕ್ಕೆ ಬರುತ್ತಾರೆ ಎಂಬ ಮಾಹಿತಿ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸಿವೆ.

ಇದನ್ನೂ ಓದಿ: ಕ್ರಿಕೆಟಿಗ ನಟರಾಜನ್ ಬಯೋಪಿಕ್​ನಲ್ಲಿ ಶಿವ ಕಾರ್ತಿಕೇಯನ್

ಮುಂದಿನ ಭಾಗಕ್ಕೆ ಪಾತ್ರವರ್ಗದಲ್ಲಿ ರಶ್ಮಿಕಾ ಮಂದಣ್ಣ ಜೊತೆಗೆ ಫಹಾದ್ ಫಾಜಿಲ್, ಧನುಂಜಯ, ಸುನೀಲ್, ಅನಸೂಯ ಭಾರದ್ವಾಜ್ ಸೇರಿದಂತೆ ಅನೇಕರು ಇದ್ದಾರೆ. ಸುಕುಮಾರ್ ಬಂಡ್ರೆಡ್ಡಿ ನಿರ್ದೇಶನದ ಈ ಚಿತ್ರವನ್ನು ನವೀನ್ ಯೆರ್ನೇನಿ ಮತ್ತು ರವಿಶಂಕರ್ ಯಲಮಂಚಿಲಿ ನಿರ್ಮಿಸುತ್ತಿದ್ದಾರೆ. ಮಿರೆಸ್ಲೋ ಕುಬಾ ಬ್ರೋಝೆಕ್ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ದೇವಿ ಶ್ರೀ ಪ್ರಸಾದ್ ಅವರು ಚಂದ್ರ ಬೋಸ್ ಅವರ ಸಾಹಿತ್ಯಕ್ಕೆ ಸಂಗೀತ ಸಂಯೋಜಿಸಲು ಮರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.