ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮದುವೆಯ ದಿನಾಂಕಕ್ಕೆ ಸಂಬಂಧಿಸಿದ ಸುದ್ದಿಗಳು ಕೂಡ ಸಖತ್ ಸುದ್ದು ಮಾಡುತ್ತಿದ್ದು ನೆಟಿಜನ್ಸ್, ಫ್ಯಾನ್ಸ್, ಸಿನಿ ತಾರೆಯರು ಮುಂಚಿತವಾಗಿ ವಿಶ್ ಮಾಡಲಾಂಭಿಸಿದ್ದಾರೆ. ಬಹು ದಿನಗಳಿಂದ ಪ್ರೀತಿಸುತ್ತಿರುವ ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ರಾಕುಲ್ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದ್ದು, ಇವರ ಮದುವೆ ಫೆಬ್ರವರಿ 22 ರಂದು ಗೋವಾದ ಜನಪ್ರಿಯ ರೆಸಾರ್ಟ್‌ನಲ್ಲಿ ನಡೆಯಲಿದೆ ಎಂಬ ಮಾತು ಕೂಡ ಚಾಲ್ತಿಯಲ್ಲಿದೆ.
ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇವರ ಮದುವೆ ನಡೆಯಲಿದ್ದು, ಮದುವೆ ಬಳಿಕ ಸೆಲೆಬ್ರಿಟಿಗಳಿಗೆ ವಿಶೇಷ ಔತಣಕೂಟ ಕೂಡ ಏರ್ಪಡಿಸಿದ್ದಾರೆ ಎಂಬ ವದಂತಿ ಇದೆ. ಈ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ನಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಈ ಬಗ್ಗೆ ರಾಕುಲ್ ಆಗಲಿ ಅಥವಾ ಜಾಕಿ ಭಗ್ನಾನಿ ಆಗಲಿ ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಹಿಂದೆಯೂ ಇವರ ಮದುವೆಯ ಬಗ್ಗೆ ಹಲವು ಸುದ್ದಿಗಳು ಕೇಳಿ ಬಂದಿದ್ದವು. ಆದರೆ, ಸಮಯ ಬಂದಾಗ ಖಂಡಿತ ಮದುವೆಯಾಗುತ್ತೇವೆ ಎಂದು ರಾಕುಲ್ ಸ್ಪಷ್ಟಪಡಿಸುತ್ತ ಬಂದಿದ್ದರು. ಇದೀಗ ಮತ್ತೆ ನಟಿಯ ಮದುವೆ ಪ್ರಸ್ತಾಪ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜಾಕಿ ಭಗ್ನಾನಿ ಅವರೊಂದಿಗಿನ ಆಪ್ತ ಒಡನಾಟದ ಬಗ್ಗೆ ನಟಿ ರಾಕುಲ್ 2021 ರಲ್ಲಿಯೇ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಒಟ್ಟಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದರು. ಅಲ್ಲದೇ ಭಾವನಾತ್ಮಕ ಶೀರ್ಷಿಕೆ ಹಾಕಿ ತಮ್ಮ ತಮ್ಮ ಅನಿಸಿಕೆ ಹೇಳಿಕೊಂಡಿದ್ದರು.
ಕನ್ನಡದ 'ಗಿಲ್ಲಿ' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ರಾಕುಲ್ ಪ್ರೀತ್ ಸಿಂಗ್, ಬಳಿಕ ಟಾಲಿವುಡ್ಗೂ ಕಾಲಿಟ್ಟರು. 'ವೆಂಕಟಾದ್ರಿ ಎಕ್ಸ್‌ಪ್ರೆಸ್' ಇವರ ನಟನೆಯ ಮೊದಲ ತೆಲುಗು ಚಿತ್ರವಾಗಿದೆ. ನಟಿಸಿದ ಮೊದಲ ಚಿತ್ರವೇ ಯಶಸ್ಸು ಕಂಡಿದ್ದರಿಂದ ಅವರನ್ನು ಹುಡುಕಿಕೊಂಡು ದೊಡ್ಡ ದೊಡ್ಡ ನಿರ್ಮಾಪಕರೇ ಬರತೊಡಗಿದರು. ಹಾಗಾಗಿ ಟಾಲಿವುಡ್ನಲ್ಲಿಯೇ ನೆರೆಯೂರಿಸಿದ ರಾಕುಲ್, ‘ಲೌಕ್ಯಂ’, ‘ನನ್ನಕು ಪ್ರೇಮತೋ’, ‘ಧ್ರವ’, ‘ಕಿಕ್’ 2 ಸಿನಿಮಾಗಳ ಮೂಲಕ ಸೌತ್‌ನ ಟಾಪ್ ನಟಿಯರ ಪಟ್ಟಿಗೆ ಸೇರಿಕೊಂಡರು. ರಕುಲ್ ಸದ್ಯ ತೆಲುಗಿನ ಜೊತೆಗೆ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಅಭಿನಯದ 'ಅಯಲನ್' ಚಿತ್ರ ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಸಿಹಿಸುದ್ದಿ ಕೊಟ್ಟ ನಟಿ ಅದಿತಿ ಪ್ರಭುದೇವ!