ETV Bharat / entertainment

100 ವಿಕೆಟ್​ ಪಡೆದ ದೀಪ್ತಿ ಶರ್ಮಾ ಸಾಧನೆಗೆ ನಟಿ ರಾಕುಲ್ ಪ್ರೀತ್ ಸಿಂಗ್ ಮೆಚ್ಚುಗೆ - ನಟಿ ರಾಕುಲ್ ಪ್ರೀತ್ ಸಿಂಗ್

ಆಲ್‌ರೌಂಡರ್ ದೀಪ್ತಿ ಶರ್ಮಾ ಬಗ್ಗೆ ನಟಿ ರಾಕುಲ್ ಪ್ರೀತ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Rakul Preet Singh praises Deepti Sharma
ದೀಪ್ತಿ ಶರ್ಮಾ ಸಾಧನೆಗೆ ನಟಿ ರಾಕುಲ್ ಪ್ರೀತ್ ಸಿಂಗ್ ಮೆಚ್ಚುಗೆ
author img

By

Published : Feb 17, 2023, 2:10 PM IST

ಕ್ರಿಕೆಟ್​​ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ನಟಿ ರಾಕುಲ್ ಪ್ರೀತ್ ಸಿಂಗ್ ಶ್ಲಾಘಿಸಿದ್ದಾರೆ. ದೀಪ್ತಿ ಶರ್ಮಾ 100 ಟಿ20 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಕ್ರಿಕೆಟಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದ ಎದುರು ಗೆಲುವು ಕಂಡ ಭಾರತೀಯ ವನಿತೆಯರು ವೆಸ್ಟ್​ ಇಂಡೀಸ್​ ಎದುರು ಕಣಕ್ಕಿಳಿದು ವಿಜೇತರಾಗಿದ್ದಾರೆ. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿದ ವೆಸ್ಟ್​ ಇಂಡೀಸ್​​​​​ ಮಹಿಳೆಯರನ್ನು 118 ರನ್​ಗೆ ಭಾರತೀಯ ಮಹಿಳಾ ಕ್ರಿಕೆಟಿಗರು ಸೋಲಿಸಿದ್ದಾರೆ. ಈ ಪಂದ್ಯದಲ್ಲಿ ಮೂರು ವಿಕೆಟ್​ ಪಡೆದ ದೀಪ್ತಿ ಶರ್ಮಾ ಅವರು ಟಿ20 ವಿಭಾಗದಲ್ಲಿ 100 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

ಈ ಸಾಧನೆ ಮೆಚ್ಚಿದ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರ ಫೋಟೋ ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದಾರೆ. ಈ ಸ್ಟೋರಿಗೆ ಈ ಇಬ್ಬರು ಸಾಧಕರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ವನಿತೆಯರ ಟಿ20 ವಿಶ್ವಕಪ್​ನ ಎರಡನೇ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡವನ್ನು ಭಾರತ ಮಣಿಸಿದೆ. ಭಾರತದ ವನಿತೆಯರು ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದರು.

ವೆಸ್ಟ್​ ಇಂಡೀಸ್​ ತಂಡ 6 ವಿಕೆಟ್​ ನಷ್ಟಕ್ಕೆ 118 ರನ್​ ಗಳಿಸಿ ಕನಿಷ್ಠ ಮೊತ್ತಕ್ಕೆ ಕುಸಿತಗೊಂಡಿತು. ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ್ದ ಭಾರತೀಯ ವನಿತೆಯರ ತಂಡ ಮತ್ತೊಮ್ಮ 6 ವಿಕೆಟ್​ಗಳ ಮೂಲಕ ಗೆಲುವು ಸಾಧಿಸಿದರು. ರಿಚಾ ಘೋಷ್​​ 44ರನ್​ ಗಳಿಸಿದರು. ಪಂದ್ಯದಲ್ಲಿ ಮೂರು ವಿಕೆಟ್​ ಪಡೆದು ಅಂತಾರಾಷ್ಟ್ರೀಯ ಟಿ-20 ಯಲ್ಲಿ ಶತಕ ಔಟ್​ಗಳನ್ನು ಮಾಡಿದ ದೀಪ್ತಿ ಶರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದ್ದ ಭಾರತದ ಮಹಿಳಾ ತಂಡ ಅದೇ ಕ್ರೀಡಾಂಗಣದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ಮತ್ತೊಂದು ಜಯ ಸಾಧಿಸಿತು.

ಇದನ್ನೂ ಓದಿ: 'ನಮಾಮಿ' ಹಾಡಿನಲ್ಲಿ ಶ್ರೀಯಾ ಶರಣ್ ಮಿಂಚು: ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಗೆಲುವಿನ ಮುನ್ನುಡಿ

ಭಾರತ ಮಹಿಳೆಯರ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್​ ಕೀಪರ್​), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ದೇವಿಕಾ ವೈದ್ಯ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕೂರ್ ಸಿಂಗ್ ಕಣಕ್ಕಿಳಿದಿದ್ದರು.

ಇದನ್ನೂ ಓದಿ: ಶೆಹಜಾದಾ ಸಿನಿಮಾ ಬಿಡುಗಡೆ: ಬಾಲಿವುಡ್​ ಸಕ್ಸಸ್ ಮುಂದುವರಿಯುತ್ತಾ?!

ವೆಸ್ಟ್ ಇಂಡೀಸ್ ಮಹಿಳೆಯರ ತಂಡ: ಹೇಲಿ ಮ್ಯಾಥ್ಯೂಸ್ (ನಾಯಕಿ), ಸ್ಟಾಫಾನಿ ಟೇಲರ್, ಶೆಮೈನ್ ಕ್ಯಾಂಪ್ಬೆಲ್ಲೆ, ಶಬಿಕಾ ಗಜ್ನಾಬಿ, ಚಿನೆಲ್ಲೆ ಹೆನ್ರಿ, ಚೆಡಿಯನ್ ನೇಷನ್, ಅಫಿ ಫ್ಲೆಚರ್, ಶಾಮಿಲಿಯಾ ಕಾನ್ನೆಲ್, ರಶಾದಾ ವಿಲಿಯಮ್ಸ್ (ವಿಕೆಟ್​ ಕೀಪರ್​), ಕರಿಷ್ಮಾ ರಾಮ್ಹರಾಕ್, ಶಕೆರಾ ಸೆಲ್ಮನ್ ಆಟ ಆಡಿದ್ದರು.

ಇದನ್ನೂ ಓದಿ: 7 ಲಕ್ಷ ರುದ್ರಾಕ್ಷಿ ಮಣಿಗಳಿಂದ ನಿರ್ಮಾಣಗೊಂಡ ಶಿವಲಿಂಗ! ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.