ETV Bharat / entertainment

ರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಗೆ ಭಾಜನರಾದ ರಕ್ಷಿತ್ ಶೆಟ್ಟಿ, ಅನಿರುದ್ಧ ಜತ್ಕರ್

ರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಗೆ ರಕ್ಷಿತ್ ಶೆಟ್ಟಿ, ಅನಿರುದ್ಧ ಜತ್ಕರ್ ಅವರು ಭಾಜನರಾಗಿದ್ದಾರೆ.

ರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಗೆ ಭಾಜನರಾದ ರಕ್ಷಿತ್ ಶೆಟ್ಟಿ, ಅನಿರುದ್ಧ ಜತ್ಕರ್
ರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಗೆ ಭಾಜನರಾದ ರಕ್ಷಿತ್ ಶೆಟ್ಟಿ, ಅನಿರುದ್ಧ ಜತ್ಕರ್
author img

By ETV Bharat Karnataka Team

Published : Jan 11, 2024, 10:58 PM IST

ಕನ್ನಡ ಚಿತ್ರರಂಗದಲ್ಲಿ ಕಳೆದ 48 ವರ್ಷಗಳಿಂದ ಕನ್ನಡ ಸಿನಿಮಾ ರಂಗದ ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿರುವುದು ರಾಘವೇಂದ್ರ ಚಿತ್ರವಾಣಿ ಸಂಸ್ಥೆ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ. ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ 25 ವರ್ಷ ತುಂಬಿದೆ. ಈ ಸುಧೀರ್ಘ ಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿ ಪಾಠವನ್ನು ಆರಂಭಿಸಿದ್ದರು.

ವಿಶೇಷ ಪ್ರಶಸ್ತಿ  ರಾಘವೇಂದ್ರ ಚಿತ್ರವಾಣಿ  Raghavendra Chitravani
ರಕ್ಷಿತ್ ಶೆಟ್ಟಿ

ಅನಿರುದ್ಧ ಜತ್ಕರ್

ಕೇವಲ ಎರಡು ಪ್ರಶಸ್ತಿಗಳಿಂದ ಪ್ರಾರಂಭವಾದ ಈ ಸಮಾರಂಭಕ್ಕೆ ಆಗಮಿಸಿದ ಗಣ್ಯರು, ತಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ಪ್ರದಾನ ಮಾಡಲು ಮುಂದಾಗಿದ್ದರು. ಹೀಗೆ ಆರಂಭವಾದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೀಗ 11 ಹಾಗೂ ಮೂರು ವಿಶೇಷ ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ. ನಿರ್ಮಾಪಕರು ಮತ್ತು ಪತ್ರಕರ್ತರಿಗೆ ಮಾತ್ರವಲ್ಲದೇ ಕನ್ನಡ ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುವ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ವಿಶೇಷ ಪ್ರಶಸ್ತಿ  ರಾಘವೇಂದ್ರ ಚಿತ್ರವಾಣಿ   Raghavendra Chitravani Special Award
ರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಗೆ ಭಾಜನರಾದ ಗಣ್ಯರು

ಈ ಬಾರಿಯ ಪ್ರಶಸ್ತಿಗಳ ವಿವರ:

  1. ದಿವಗತ ರಾಮು, ರಾಮು ಎಂಟರ್ ಪ್ರೈಸಸ್ ಹಿರಿಯ ಚಲನಚಿತ್ರ ನಿರ್ಮಾಪಕರು
    ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ
  2. ಮುರಳಿಧರ ಖಜಾನೆ, ಹಿರಿಯ ಚಲನಚಿತ್ರ ಪತ್ರಕರ್ತರು
    ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ
  3. ಹೇಮಂತ್ ಕುಮಾರ್, ಖ್ಯಾತ ಹಿನ್ನಲೆ ಗಾಯಕರು
    ಡಾ. ರಾಜ್‌ಕುಮಾರ್ ಪ್ರಶಸ್ತಿ- ಡಾ.ರಾಜ್‌ಕುಮಾರ್ ಕುಟುಂಬದವರಿಂದ
  4. ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕರು
    ಯಜಮಾನ ಚಿತ್ರದ ಖ್ಯಾತಿ ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ - ಭಾರತಿ ವಿಷ್ಣುವರ್ಧನ ಅವರಿಂದ
  5. ಜಯಲಕ್ಷ್ಮಿ ಪಿ (ದುಬೈ), ಕಲಾವಿದರು
    ಖ್ಯಾತ ಅಭಿನೇತ್ರಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ
  6. ಜೋ ಕೋಸ್ಟ, ಅತ್ಯತ್ತಮ ಸಂಗೀತ ನಿರ್ದೇಶನ ಹೊಂದಿಸಿ ಬರೆಯಿರಿ ಚಿತ್ರಕ್ಕಾಗಿ ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಪ್ರಶಸ್ತಿ
  7. ಹೇಮಂತ್ ರಾವ್, ಅತ್ಯುತ್ತಮ ಕಥಾಲೇಖಕರು ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕಾಗಿ
    ಖ್ಯಾತ ನಿರ್ದೇಶಕ-ನಿರ್ಮಾಪಕ ಕೆ.ವಿ. ಜಯರಾಂ ಪ್ರಶಸ್ತಿ - ಮೀನಾಕ್ಷಿ ಜಯರಾಂ ಅವರಿಂದ
  8. ಬಿ.ಎಸ್. ಲಿಂಗದೇವರು ಹಾಗೂ ಶ್ರೀ ಶರಣು ಹುಲ್ಲೂರು, ಅತ್ಯುತ್ತಮ ಸಂಭಾಷಣೆ ವಿರಾಟಪುರದ ವಿರಾಗಿ ಚಿತ್ರಕ್ಕಾಗಿ
    ಖ್ಯಾತ ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ - ಡಾ. ಎಚ್.ಕೆ. ನರಹರಿ ಅವರಿಂದ
  9. ಕುಮಾರಿ ಸಿಂಧು ಶ್ರೀನಿವಾಸಮೂರ್ತಿ,`ಆಚಾರ್ & ಕೋ ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
    ರಂಗ ತಜ್ಞ, ಹಿರಿತೆರೆ, ಕಿರುತೆರೆ ನಿರ್ದೇಶಕ ಬಿ.ಸುರೇಶ್ ಪ್ರಶಸ್ತಿ
  10. ಡಾಲಿ ಧನಂಜಯ, ಟಗರು ಪಲ್ಯ ಚಿತ್ರದ ಸಂಬಂಜ ಅನ್ನೋದು ದೊಡ್ಡದು ಕನಾ ಗೀತರಚನೆಗಾಗಿ
    ಹಿರಿಯ ಪತ್ರಕರ್ತರಾದ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ’ - ಪತ್ರಕರ್ತ ವಿನಾಯಕರಾಮ್ ಕಲಗಾರು ಅವರಿಂದ
  11. ಸುಂದರರಾಜ್, ಹಿರಿಯ ಪೋಷಕ ಕಲಾವಿದರು
    ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ

ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರಾದ ಬಿ.ಎನ್. ಸುಬ್ರಹ್ಮಣ್ಯ, ರಕ್ಷಿತ್ ಶೆಟ್ಟಿ ಹಾಗೂ ಅನಿರುದ್ಧ್ ಜತಕರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 27ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ.

ಇದನ್ನೂ ಓದಿ: ಪರಭಾಷೆಯ ಸಿನಿಮಾಗಳ ದರ್ಬಾರ್: ಈ ವಾರ ಒಂದೂ ಕನ್ನಡ ಸಿನಿಮಾ ಬಿಡುಗಡೆ ಇಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.