ETV Bharat / entertainment

ಮಗಳ ಸಿನಿಮಾಗೆ ಮೊಯ್ದಿನ್​ ಭಾಯ್ ಆದ್ರು ರಜನಿ: 'ಲಾಲ್​ ಸಲಾಂ' ಫಸ್ಟ್​ ಲುಕ್​ ಔಟ್

author img

By

Published : May 8, 2023, 3:50 PM IST

ನಟ ರಜನಿಕಾಂತ್​ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಲಾಲ್​ ಸಲಾಂ' ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

Laal Salaam
ಲಾಲ್​ ಸಲಾಂ'

ಕಾಲಿವುಡ್​ ಸೂಪರ್​ ಸ್ಟಾರ್​ ರಜನಿಕಾಂತ್​ 'ಜೈಲರ್​' ಸಿನಿಮಾ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ಸದ್ಯ ಅವರು 'ಲಾಲ್​ ಸಲಾಂ' ಚಿತ್ರದ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ರಜನಿ ಪುತ್ರಿ ಐಶ್ವರ್ಯಾ ರಜನಿಕಾಂತ್​ ನಿರ್ದೇಶಿಸುತ್ತಿದ್ದು, ಸದ್ಯ ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ. 1993 ರಲ್ಲಿ ಬಾಂಬೆನಲ್ಲಿ (ಈಗ ಮುಂಬೈ) ನಡೆದ ಕೋಮುಗಲಭೆಗಳ ಮಧ್ಯೆ ತಲೈವಾ ನಡೆದುಕೊಂಡು ಹೋಗುತ್ತಿರುವುದು ಪೋಸ್ಟರ್​ನಲ್ಲಿ ತೋರಿಸಲಾಗಿದೆ. ಈ ಪೋಸ್ಟರ್​ ರಜನಿಕಾಂತ್​ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ.

"ಎಲ್ಲರ ನೆಚ್ಚಿನ ಭಾಯ್​ ಮುಂಬೈಗೆ ಮರಳಿದ್ದಾರೆ. ರಜನಿ ಮೊಯ್ದಿನ್​ ಭಾಯ್​ ಆಗಿ ಬರುತ್ತಿದ್ದಾರೆ" ಎಂಬ ಕ್ಯಾಪ್ಶನ್​ ಜೊತೆ ಚಿತ್ರತಂಡ ಪೋಸ್ಟರ್​ ಹಂಚಿಕೊಂಡಿದೆ. ರಜನಿಕಾಂತ್​ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ತಲೈವಾ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಸದ್ಯ ಈ ಪೋಸ್ಟರ್​ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಕ್ರಿಕೆಟ್​ ಕಥಾಧಾರಿತ ಹಿನ್ನೆಲೆಯನ್ನು ಸಿನಿಮಾ ನಿರ್ಮಾಣವಾಗುತ್ತಿದೆ. ಲೈಕಾ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಪೋಸ್ಟರ್​ ಅನ್ನು ಕೆಲವರು ಮೆಚ್ಚಿಕೊಂಡಿದ್ದು, ಇನ್ನು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು, "ಇದೇನು? ನೀವು ತಲೈವಾಗೆ ಏನು ಮಾಡಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, "ದಯವಿಟ್ಟು ತೆಗೆಯಿರಿ, ಇದು ತುಂಬಾ ಕೆಟ್ಟ ಪೋಸ್ಟರ್​" ಎಂದು ಹೇಳಿದ್ದಾರೆ. ಮತ್ತೊಬ್ಬರು, "ಕೆಟ್ಟ ಫೋಟೋಶಾಪ್" ಎಂದು ಬರೆದಿದ್ದಾರೆ. ಕೆಲವು ಅಭಿಮಾನಿಗಳು ತಲೈವಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಮತ್ತು ಯೋಜನೆಯು ಆಸಕ್ತಿದಾಯಕವಾಗಿದೆ ಎಂದು ಹೇಳಿದ್ದಾರೆ. "ಇದಕ್ಕಾಗಿ ಕಾಯಲು ಸಾಧ್ಯವಿಲ್ಲ. ಆಸಕ್ತಿದಾಯಕವಾಗಿದೆ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

'ಲಾಲ್​ ಸಲಾಂ' ಚಿತ್ರದಲ್ಲಿ ರಜನಿ ಜೊತೆ ಯುವ ನಟರಾದ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಟಾಲಿವುಡ್ ತಾರೆ ಜೀವತಾ ರಾಜಶೇಖರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಿರಿಯಾಡಿಕಲ್ ಡ್ರಾಮಾವಾಗಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಸದ್ಯ ಈ ಚಿತ್ರಕ್ಕಾಗಿ ರಜಿನಿ ಮುಂಬೈನಲ್ಲಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ವರ್ಷದ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.

ಇನ್ನೊಂದೆಡೆ ರಜನಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಜೈಲರ್​' ತೆರೆ ಕಾಣಲು ಸಜ್ಜಾಗಿದೆ. ಕಲಾನಿಧಿ ಮಾರನ್ ಈ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.​ ರಜಿನಿಗೆ ನಾಯಕಿಯಾಗಿ ಸೌತ್​ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟಿಸಿದ್ದಾರೆ. ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವ ರಾಜ್​​ಕುಮಾರ್​, ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ ಲಾಲ್​, ಜಾಕಿ ಶ್ರಾಫ್​, ರಮ್ಯಾ ಕೃಷ್ಣ, ಹಾಸ್ಯನಟ ಸುನೀಲ್​ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.

ಆರ್.ನಿರ್ಮಲ್​ ಸಂಕಲನ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ ಜೈಲರ್​ ರಜನಿಕಾಂತ್ ಅವರ 169ನೇ ಚಿತ್ರವಾಗಲಿದೆ. ಸಿನಿಮಾ ಆಗಸ್ಟ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ. ಇದಲ್ಲದೇ 'ಜೈ ಭೀಮ್' ಖ್ಯಾತಿಯ ಟಿ ಜೆ ಜ್ಞಾನವೇಲ್ ನಿರ್ದೇಶನದ ಚಿತ್ರವೊಂದಕ್ಕೆ ರಜನಿ ಸಹಿ ಹಾಕಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಕೂಡ ಶುರುವಾಗಲಿದೆ.

ಇದನ್ನೂ ಓದಿ: ರಾಮೋಜಿಗೆ NTR ಸೆಂಚೂರಿ ಅವಾರ್ಡ್​.. ಈಟಿವಿಗೆ ಅತ್ಯುತ್ತಮ ಚಾನಲ್ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.