ಬಾಲಿವುಡ್ ನಟರಾದ ಟೈಗರ್ ಶ್ರಾಫ್ ಹಾಗೂ ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಸಿನಿಮಾ 'ಗಣಪತ್: ಎ ಹೀರೋ ಈಸ್ ಬಾರ್ನ್'. ಈ ಸಿನಿಮಾ ಇಂದು ತೆರೆ ಕಂಡಿದ್ದು, ಚಿತ್ರತಂಡಕ್ಕೆ ಅದರಲ್ಲೂ ವಿಶೇಷವಾಗಿ ಟೈಗರ್ ಶ್ರಾಫ್ ಅವರಿಗೆ 'ಕಾಲಿವುಡ್ ತಲೈವಾ' ರಜಿನಿಕಾಂತ್ ಮನದುಂಬಿ ಹರಸಿದ್ದಾರೆ.
-
My hearty wishes to @iTIGERSHROFF and the entire cast and crew of #Ganapath. All the very best to you and wishing the film a grand success.#tigershroff #ganapath #jackieshroff @bindasbhidu
— Rajinikanth (@rajinikanth) October 20, 2023 " class="align-text-top noRightClick twitterSection" data="
">My hearty wishes to @iTIGERSHROFF and the entire cast and crew of #Ganapath. All the very best to you and wishing the film a grand success.#tigershroff #ganapath #jackieshroff @bindasbhidu
— Rajinikanth (@rajinikanth) October 20, 2023My hearty wishes to @iTIGERSHROFF and the entire cast and crew of #Ganapath. All the very best to you and wishing the film a grand success.#tigershroff #ganapath #jackieshroff @bindasbhidu
— Rajinikanth (@rajinikanth) October 20, 2023
'ಗಣಪತ್' ಬಿಡುಗಡೆಗೊಂಡ ಕೆಲವೇ ಹೊತ್ತಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಹಿರಿಯ ನಟ ರಜಿನಿಕಾಂತ್, "ಟೈಗರ್ ಶ್ರಾಫ್ ಮತ್ತು ಗಣಪತ್‌ನ ಇಡೀ ತಂಡ ಮತ್ತು ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಚಿತ್ರ ದೊಡ್ಡ ಯಶಸ್ಸು ಕಾಣಲಿ" ಎಂದು ಬರೆದಿದ್ದಾರೆ.
-
Highest respect and loads of love Sir, Thank you so much for your generous words it means the world to us especially me. Thank you so much sir once again lots of love and respect ♥️🙏🏻 https://t.co/ymPmcmOf44
— Tiger Shroff (@iTIGERSHROFF) October 20, 2023 " class="align-text-top noRightClick twitterSection" data="
">Highest respect and loads of love Sir, Thank you so much for your generous words it means the world to us especially me. Thank you so much sir once again lots of love and respect ♥️🙏🏻 https://t.co/ymPmcmOf44
— Tiger Shroff (@iTIGERSHROFF) October 20, 2023Highest respect and loads of love Sir, Thank you so much for your generous words it means the world to us especially me. Thank you so much sir once again lots of love and respect ♥️🙏🏻 https://t.co/ymPmcmOf44
— Tiger Shroff (@iTIGERSHROFF) October 20, 2023
ಟೈಗರ್ ಶ್ರಾಫ್ ತಮಿಳು ಸೂಪರ್ಸ್ಟಾರ್ ಪೋಸ್ಟ್ಗೆ ಧನ್ಯವಾದ ಹೇಳಿದ್ದಾರೆ. "ಇದು ಅತೀವ ಗೌರವ ಹಾಗೂ ಅಗಾಧವಾದ ಪ್ರೀತಿ ಸರ್. ನಿಮ್ಮ ಉದಾರ ಮಾತುಗಳಿಗೆ ತುಂಬಾ ಧನ್ಯವಾದಗಳು. ನಿಮ್ಮ ಹಾರೈಕೆ ಎಂದರೆ ವಿಶೇಷವಾಗಿ ನನಗೆ ಇಡೀ ಜಗತ್ತೇ ಎಂದರ್ಥ" ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.
ವಿಕಾಸ್ ಬಹ್ಲ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾಗೆ ವಶು ಭಗ್ನಾನಿ, ಜಾಕಿ ಭಗ್ನಾನಿ, ದೀಪಶಿಖಾ ದೇಶಮುಖ್ ಮತ್ತು ವಿಕಾಸ್ ಬಹ್ಲ್ ಬಂಡವಾಳ ಹೂಡಿದ್ದಾರೆ. ಗುಡ್ ಕೋ ಸಹಯೋಗದಲ್ಲಿ ಪೂಜಾ ಎಂಟರ್ಟೈನ್ಮೆಂಟ್ ಚಿತ್ರವನ್ನು ಪ್ರಸ್ತುತಪಡಿಸಿದೆ.
ಇತ್ತೀಚೆಗೆ ತೆರೆಕಂಡಿದ್ದ 'ಜೈಲರ್' ಚಿತ್ರದಲ್ಲಿ ರಜಿನಿಕಾಂತ್ ಜತೆ ತೆರೆ ಹಂಚಿಕೊಂಡಿದ್ದ ಟೈಗರ್ ಶ್ರಾಫ್ ಅವರ ತಂದೆ ಜಾಕಿ ಶ್ರಾಫ್ ಕೂಡ ಗಣಪತ್ ಯಶಸ್ಸಿಗೆ ಹಾರೈಸಿದ್ದಕ್ಕಾಗಿ ರಜಿನಿಕಾಂತ್‌ಗೆ ಧನ್ಯವಾದ ತಿಳಿಸಿದ್ದಾರೆ. "ತಲೈವಾ ರಜನಿ ಸರ್, ನನ್ನ ಕುಟುಂಬವನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯಾವಾಗಲೂ ನನ್ನ ಪ್ರೀತಿ ಮತ್ತು ಗೌರವಗಳು" ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಶುಕ್ರವಾರದ ಮೊದಲ ಪ್ರದರ್ಶನಗಳ ನಂತರ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಎಕ್ಸ್ನಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಫ್ಯೂಚರಿಸ್ಟಿಕ್ ಎಂದು ಹೊಗಳಿದರೆ, ಇನ್ನು ಕೆಲವರು ಚಿತ್ರದಲ್ಲಿ ಅಸಾಧಾರಣ ಆ್ಯಕ್ಷನ್ ಸೀನ್ಗಳಿವೆ ಎಂದು ಮೆಚ್ಚಿದ್ದಾರೆ.
ಇದನ್ನೂ ಓದಿ: 'ಗಣಪತ್' ಸಿನಿಮಾದ ಜೈ ಗಣೇಶ ಹಾಡು ಬಿಡುಗಡೆ: ಅಕ್ಟೋಬರ್ 20ಕ್ಕೆ ಸಿನಿಮಾ ತೆರೆಗೆ