ETV Bharat / entertainment

ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಸೂಪರ್​ಸ್ಟಾರ್ ರಜಿನಿಕಾಂತ್, ಮಗಳು ಐಶ್ವರ್ಯಾ - ತಿರುಪತಿಯಲ್ಲಿ ರಜನಿಕಾಂತ್

ದಕ್ಷಿಣ ಚಿತ್ರರಂಗದ ಹಿರಿಯ ನಟ ರಜಿನಿಕಾಂತ್ ಗುರುವಾರ ತಮ್ಮ ಮಗಳೊಂದಿಗೆ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

Rajinikanth offers prayers at Tirupati
ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಸೂಪರ್​ಸ್ಟಾರ್ ರಜನಿಕಾಂತ್
author img

By

Published : Dec 15, 2022, 12:39 PM IST

ತಿರುಪತಿ (ಆಂಧ್ರಪ್ರದೇಶ): ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಗುರುವಾರ ಪೂಜೆ ಸಲ್ಲಿಸಿದರು. ಮಗಳು ಐಶ್ವರ್ಯಾ ಜೊತೆಯಲ್ಲಿ ನಟ ಬೆಳಗಿನ ಪೂಜಾ ಸೇವೆಯಲ್ಲಿ ಪಾಲ್ಗೊಂಡರು. ಪುರೋಹಿತರ ಮಾರ್ಗದರ್ಶನದಲ್ಲಿ ವಿವಿಧ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ರಂಗನಾಯಕುಲ ಮಂಟಪದಲ್ಲಿ ಅರ್ಚಕರು ರಜಿನಿಕಾಂತ್​ಗೆ ವೇದಾಶೀರ್ವಚನ ನೀಡಲಾಯಿತು.

ಇದಕ್ಕೂ ಮುನ್ನ, ದೇವಾಲಯದ ಮುಖ್ಯ ದ್ವಾರದಲ್ಲಿ ರಜಿನಿಕಾಂತ್ ಮತ್ತು ಐಶ್ವರ್ಯಾ ಅವರನ್ನು ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ತಂದೆ - ಮಗಳಿಬ್ಬರು ಬುಧವಾರ ತಿರುಮಲಕ್ಕೆ ಆಗಮಿಸಿದ್ದು, ರಾತ್ರಿ ವಿರಾಮದ ನಂತರ ಮುಂಜಾನೆ ದರ್ಶನ ಪಡೆದರು.

ರಜನಿಕಾಂತ್ ಅವರು 72 ನೇ ವರ್ಷಕ್ಕೆ ಕಾಲಿಟ್ಟ ಮೂರು ದಿನಗಳ ನಂತರ ದೇವಾಲಯಕ್ಕೆ ಭೇಟಿ ನೀಡಿದರು. ಮಗಳ ಜೊತೆಗೆ ಅವರು ದೇವಾಲಯಕ್ಕೆ ಭೇಟಿ ನೀಡಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇನ್ನೂ ಸೂಪರ್‌ಸ್ಟಾರ್ ಕಡಪದಲ್ಲಿರುವ ಪೆದ್ದಾ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಅವರು ತಮ್ಮ ಪುತ್ರಿಯೊಂದಿಗೆ ಪೆದ್ದಾ ದರ್ಗಾ ಎಂದು ಕರೆಯಲ್ಪಡುವ ಅಮೀನ್ ಪೀರ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಶಾಕ್​ ಮೇಲೆ ಶಾಕ್​.. ಉತ್ತರ ಪ್ರದೇಶದಲ್ಲೂ ಪಠಾಣ್​​ ಸಿನಿಮಾಗೆ ಬಾಯ್ಕಾಟ್​ ಬಿಸಿ!!

ರಜನಿಕಾಂತ್ ಪ್ರಸ್ತುತ ನೆಲ್ಸನ್ ದಿಲೀಪ್‌ ಕುಮಾರ್ ಅವರ 'ಜೈಲರ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರವು 2023ರ ಮೊದಲಾರ್ಧದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. ಇನ್ನು ತಮ್ಮ ಮಗಳು ಐಶ್ವರ್ಯಾ ಅವರ ನಿರ್ದೇಶನದ ಮುಂಬರುವ ಚಿತ್ರ ಲಾಲ್ ಸಲಾಮ್‌ನಲ್ಲಿ ಅತಿಥಿ ಪಾತ್ರವನ್ನೂ ರಜಿನಿ ನಿರ್ವಹಿಸುತ್ತಿದ್ದಾರೆ.

ಅಣ್ಣಾತ್ತೆ (2021) ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಜಿನಿಕಾಂತ್ ಇತ್ತೀಚೆಗೆ ಲೈಕಾ ಪ್ರೊಡಕ್ಷನ್ಸ್‌ನೊಂದಿಗೆ ಎರಡು ಚಿತ್ರಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ಸಿಬಿ ಚಕ್ರಾವತಿ ಅಥವಾ ದೇಸಿಂಗ್ ಪೆರಿಯಸಾಮಿ ಎಂದು ಹೆಸರಿಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.