ETV Bharat / entertainment

Jailer collections: ದಾಖಲೆಯ ಯಶಸ್ಸು ಪಡೆದ 'ಜೈಲರ್​'... ವಿಶ್ವದಾದ್ಯಂತ ₹500 ಕೋಟಿಗೂ ಹೆಚ್ಚು ಕಲೆಕ್ಷನ್​ - ಈಟಿವಿ ಭಾರತ ಕನ್ನಡ

Rajinikanth Jailer collections: ರಜನಿಕಾಂತ್​ ನಟನೆಯ 'ಜೈಲರ್​' ಸಿನಿಮಾ ವಿಶ್ವದಾದ್ಯಂತ 500 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.

rajinikanth jailer movie
ಜೈಲರ್​'
author img

By

Published : Aug 20, 2023, 3:23 PM IST

ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯ 'ಜೈಲರ್​' ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾಗಿ ಹತ್ತು ದಿನ ಕಳೆದರೂ ಉತ್ತಮ ಕಲೆಕ್ಷನ್​ ಮಾಡುತ್ತಿದೆ. ಎರಡು ವಾರ ಕಳೆದರೂ ಚಿತ್ರದ ಕ್ರೇಜ್​ ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನ ಕಳೆದಂತೆ ಹೊಸ ಹೊಸ ದಾಖಲೆಯನ್ನು ಬರೆಯುತ್ತಿದೆ. ಈ ಚಿತ್ರ ಈವರೆಗೆ ವಿಶ್ವದಾದ್ಯಂತ 500 ಕೋಟಿ ರೂಪಾಯಿಗೂ ಹೆಚ್ಚು ಗಳಿಸುವ ಮೂಲಕ ಸಂಚಲನ ಮೂಡಿಸಿದೆ. ಸೂಪರ್​ ಹಿಟ್​ ಚಿತ್ರಗಳ ಸಾಲಿಗೆ ಈ ಸಿನಿಮಾ ಸೇರಿಕೊಂಡಿದೆ.

'ಜೈಲರ್​' ಕಲೆಕ್ಷನ್​: 'ಜೈಲರ್'​ ಸಿನಿಮಾ ಮೊದಲ ವಾರದಲ್ಲಿ ವಿಶ್ವದಾದ್ಯಂತ 450.80 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಎರಡನೇ ವಾರದ ಮೊದಲ ದಿನ 19.37 ಕೋಟಿ ರೂ. ಮತ್ತು ಎರಡನೇ ದಿನ 17.22 ಕೋಟಿ ರೂ. ಹಾಗೂ ಮೂರನೇ ದಿನ 23.86 ಕೋಟಿ ರೂ. ಗಳಿಸಿತ್ತು. ಈ ಮೂಲಕ ಚಿತ್ರವು ಒಟ್ಟು 514.25 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇದು ಕಾಲಿವುಡ್​ನಲ್ಲಿ 500 ಕೋಟಿ ರೂಪಾಯಿ ದಾಟಿದ ಎರಡನೇ ಚಿತ್ರವಾಗಿದೆ. ಈ ಹಿಂದೆ ರಜನಿಕಾಂತ್​ ಅಭಿನಯದ 'ರೋಜೋ 2.0' ಈ ವಿಶೇಷ ದಾಖಲೆಯನ್ನು ಮಾಡಿತ್ತು.

ಇದನ್ನೂ ಓದಿ: Jailer Collection: ವಿಶ್ವಾದ್ಯಂತ ಜೈಲರ್​ ಅಬ್ಬರ - 400 ಕೋಟಿ ಗಳಿಕೆಯತ್ತ ರಜಿನಿ ಸಿನಿಮಾ!

ದೇಶೀಯ ಬಾಕ್ಸ್​ ಆಫೀಸ್​ನಲ್ಲಿ 250 ಕೋಟಿ ರೂ. ಗಡಿ ದಾಟಿದೆ. ಮೊದಲ ದಿನ 48.35 ಕೋಟಿ ರೂಪಾಯಿ ಗಳಿಸುವುದರೊಂದಿಗೆ ಜೈಲರ್ ಭರ್ಜರಿ ಓಪನಿಂಗ್​ ಪಡೆಯಿತು. ಎರಡನೇ ದಿನದಂದು ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ನಟನೆಯ ಭೋಲಾ ಶಂಕರ್​, ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ನಟನೆಯ ಓಎಂಜಿ 2 ಮತ್ತು ಸನ್ನಿ ಡಿಯೋಲ್​ ಅಭಿನಯದ ಗದರ್​ 2 ಚಿತ್ರಗಳು ಬಿಡುಗಡೆಯಾದವು. ಸದ್ಯ ಈ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಜೈಲರ್​ಗೆ ಪೈಪೋಟಿ ನೀಡುತ್ತಿವೆ. ಅದರಲ್ಲಿ ದಕ್ಷಿಣದಲ್ಲಿ ಜೈಲರ್​ ಉತ್ತಮ ಪ್ರದರ್ಶನ ಕಂಡರೆ, ಉತ್ತರದಲ್ಲಿ ಗದರ್​ 2 ಮೇಲುಗೈ ಸಾಧಿಸಿದೆ.

ಚಿತ್ರತಂಡ ಹೀಗಿದೆ.. ನೆಲ್ಸನ್​​ ದಿಲೀಪ್​ ಕುಮಾರ್ ಆ್ಯಕ್ಷನ್​ ಕಟ್​ ಹೇಳಿರುವ 'ಜೈಲರ್'​ನಲ್ಲಿ ನಾಯಕಿಯಾಗಿ ಬಹುಭಾಷಾ ತಾರೆ ತಮನ್ನಾ ಭಾಟಿಯಾ ನಟಿಸಿದ್ದಾರೆ. ಜೊತೆಗೆ ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​, ಮಾಲಿವುಡ್​ ಸೂಪರ್​ಸ್ಟಾರ್​ ಮೋಹನ್​ಲಾಲ್​, ರಮ್ಯಾ ಕೃಷ್ಣನ್​, ಯೋಗಿ ಬಾಬು, ವಸಂತ್​ ರವಿ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಚಿತ್ರತಂಡ ಯಶಸ್ಸಿನ ಖುಷಿಯಲ್ಲಿದೆ.

ಇದನ್ನೂ ಓದಿ: ಜೈಲರ್​ ಹವಾ.. ರಜನಿಕಾಂತ್ ಅಭಿಮಾನಿ ಜಪಾನ್ ರಾಯಭಾರಿಯಿಂದ ಕಾವಾಲಾ ಹಾಡಿಗೆ ಭರ್ಜರಿ ಡ್ಯಾನ್ಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.