ETV Bharat / entertainment

ತಮನ್ನಾ ಭಾಟಿಯಾಗೆ ಆಧ್ಯಾತ್ಮಿಕ ಪುಸ್ತಕ ಉಡುಗೊರೆ ನೀಡಿದ ರಜನಿಕಾಂತ್

author img

By

Published : Jun 8, 2023, 3:29 PM IST

'ಜೈಲರ್'​ ಸಿನಿಮಾದಲ್ಲಿ ನಟಿಸಿರುವ ತಮನ್ನಾಗೆ ಸೂಪರ್​ ಸ್ಟಾರ್​ ರಜನಿಕಾಂತ್​ ಆಧ್ಯಾತ್ಮಿಕ ಪ್ರಯಾಣದ ಪುಸ್ತಕ ಉಡುಗೊರೆ ನೀಡಿದ್ದಾರೆ.

Tamannaah Bhatia
ನಟಿ ತಮನ್ನಾಗೆ ಆಧ್ಯಾತ್ಮಿಕ ಪುಸ್ತಕ ಉಡುಗೊರೆ ನೀಡಿದ ರಜನಿ:

ನೆಲ್ಸನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜೈಲರ್' ಸಿನಿಮಾದ ಚಿತ್ರೀಕರಣ ಮುಗಿದಿದೆ. ಮುಂದಿನ ತಿಂಗಳು ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ತಮಿಳು ಸೂಪರ್​ ಸ್ಟಾರ್​ ರಜನಿಕಾಂತ್​ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾಗೆ ನಟಿ ತಮನ್ನಾ ಭಾಟಿಯಾ ನಾಯಕಿ. ಮೆಗಾಸ್ಟಾರ್​ ಜೊತೆ ತೆರೆ ಹಂಚಿಕೊಂಡಿರುವ ಬಗ್ಗೆ ತಮನ್ನಾ ಸಂತಸ ವ್ಯಕ್ತಪಡಿಸಿದ್ದಾರೆ. "ಹಿರಿಯ ನಟರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದಿರುವುದು ಅದೃಷ್ಟ ಮತ್ತು ಆಶೀರ್ವಾದ" ಎಂದಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, "ರಜನಿಕಾಂತ್ ಅವರ ಜೊತೆ ಕೆಲಸ ಮಾಡುವುದು ಒಂದು ಕನಸಾಗಿತ್ತು, ಅದು ಈಗ ನನಸಾಗಿದೆ. ನಾನು ಜೈಲರ್ ಸೆಟ್‌ನಲ್ಲಿ ಕಳೆದ ದಿನಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಅವರು ನನಗೆ ಆಧ್ಯಾತ್ಮಿಕ ಪ್ರಯಾಣದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಅದು ತುಂಬಾ ಚಿಂತನಶೀಲ ಗಿಫ್ಟ್. ಅವರು ಆ ಪುಸ್ತಕದಲ್ಲಿ ತಮ್ಮ ಹಸ್ತಾಕ್ಷರ ಕೂಡ ಹಾಕಿದ್ದರು" ಎಂದು ಸಂತಸ ವ್ಯಕ್ತಪಡಿಸಿದರು.

ಜೈಲರ್​ ಸಿನಿಮಾ ಆಗಸ್ಟ್​ 10ರಂದು ತೆರೆ ಕಾಣಲಿದೆ. ತಮನ್ನಾ ತನ್ನ ವೆಬ್ ಸರಣಿ 'ಜೀ ಕರ್ದಾ' ಬಿಡುಗಡೆಗೆ ಸಜ್ಜಾಗಿದ್ದಾರೆ. ಈ ಸರಣಿಯನ್ನು ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿದೆ. ಅರುಣಿಮಾ ಶರ್ಮಾ ನಿರ್ದೇಶಿಸಿದ್ದಾರೆ. ಹುಸೇನ್ ದಲಾಲ್ ಮತ್ತು ಅಬ್ಬಾಸ್ ದಲಾಲ್ ಕಥೆ ಬರೆದಿದ್ದಾರೆ. ಆಶಿಮ್ ಗುಲಾಟಿ, ಸುಹೇಲ್ ನಯ್ಯರ್, ಅನ್ಯಾ ಸಿಂಗ್, ಹುಸೇನ್ ದಲಾಲ್, ಸಯಾನ್ ಬ್ಯಾನರ್ಜಿ ಮತ್ತು ಸಂವೇದನಾ ಸುವಾಲ್ಕಾ ಕೂಡ ವೆಬ್​ ಸರಣಿಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್​ ದಂತಕಥೆ ಧೋನಿ ಚೊಚ್ಚಲ ನಿರ್ಮಾಣದ 'ಎಲ್​ಜಿಎಂ' ಚಿತ್ರದ ಟೀಸರ್​ ಔಟ್​

ತಮನ್ನಾ ಮಾತನಾಡಿ, "ಶೋ ತುಂಬಾ ನೈಜವಾಗಿದೆ. ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಏಳು ಬಾಲ್ಯದ ಸ್ನೇಹಿತರ ಕಥೆಯನ್ನು ಇದು ಹೇಳುತ್ತದೆ. ಈ ಸ್ನೇಹವು ಒಂದು ರೀತಿಯಲ್ಲಿ ಭಿನ್ನ. ಅಂತಹ ಬಂಧಗಳನ್ನು ಎಂದಿಗೂ ಬಿಡಿಸಲು ಅಸಾಧ್ಯ ಎಂದು ನಾನು ನಂಬುತ್ತೇನೆ. ಪ್ರದರ್ಶನವು ನಿಜವಾಗಿಯೂ ಎಲ್ಲರ ಹೃದಯವನ್ನು ಹಿಡಿದಿಡುತ್ತದೆ" ಎಂದು ಹೇಳಿದ್ದಾರೆ. ವೆಬ್​ಸೀರಿಸ್​ ಜೂನ್ 15 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

'ಜೈಲರ್'​ನಲ್ಲಿ ಶಿವಣ್ಣ: ಜೈಲರ್​ ಸಿನಿಮಾವನ್ನು ಕಲಾನಿಧಿ ಮಾರನ್ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ.​ ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವರಾಜ್​ ​ಕುಮಾರ್​, ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ ಲಾಲ್​, ಜಾಕಿ ಶ್ರಾಫ್​, ರಮ್ಯಾ ಕೃಷ್ಣ, ಹಾಸ್ಯನಟ ಸುನೀಲ್​ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಆರ್.ನಿರ್ಮಲ್​ ಸಂಕಲನ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಚಿತ್ರಕ್ಕಿದೆ.

ಅದ್ಧೂರಿ ವೆಚ್ಚದಲ್ಲಿ ತಯಾರಾದ ಜೈಲರ್ ಚಿತ್ರವನ್ನು ಚೆನ್ನೈ, ನೈವೇಲಿ, ಹೈದರಾಬಾದ್, ಕೊಚ್ಚಿ ಸೇರಿದಂತೆ ದೇಶದ ಹಲವೆಡೆ ದೊಡ್ಡ ವೆಚ್ಚದಲ್ಲಿ ಚಿತ್ರೀಕರಿಸಲಾಗಿದೆ. ಆ್ಯಕ್ಷನ್ ಆಧಾರಿತ ಜೈಲರ್ ಚಿತ್ರದಲ್ಲಿ ರಜನಿಕಾಂತ್ ಜೈಲರ್ ಆಗಿ 'ಮುತ್ತುವೇಲ್ ಪಾಂಡಿಯನ್' ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ನಾಳೆ ಅದ್ದೂರಿಯಾಗಿ ನಡೆಯಲಿದೆ ನಟ ವರುಣ್​ ತೇಜ್​ - ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.