ETV Bharat / entertainment

ರಜನಿಕಾಂತ್- ಶಿವರಾಜಕುಮಾರ್​ ಅಭಿನಯದ ಜೈಲರ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ - ಜೈಲರ್ ಚಿತ್ರದ ಫಸ್ಟ್​ ಲುಕ್​

ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಮುಖದಲ್ಲಿ ಗಂಭೀರತೆ ತುಂಬಿಕೊಂಡಿರುವ ​ರಜನಿಕಾಂತ್, ಜೈಲಿನಲ್ಲಿ ಸ್ಟೈಲಿಶ್​ ಆಗಿ ನಡೆದುಕೊಂಡು ಬರುತ್ತಿರುವ ಪೋಸ್ಟರ್​ ಇದಾಗಿದೆ.

Rajinikanth begins shoot for 169th film, makers unveil Jailer first look
ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ
author img

By

Published : Aug 22, 2022, 4:12 PM IST

ಚೆನ್ನೈ (ತಮಿಳುನಾಡು): ಸೂಪರ್‌ಸ್ಟಾರ್ ರಜನಿಕಾಂತ್ ನಾಯಕರಾಗಿ ನಟಿಸುತ್ತಿರುವ ಮತ್ತು ನೆಲ್ಸನ್ ದಿಲೀಪ್‌ಕುಮಾರ್ ಅವರು ಆ್ಯಕ್ಷನ್​ ಕಟ್​ ಹೇಳಿರುವ ಬಹುನಿರೀಕ್ಷಿತ ಜೈಲರ್‌ ಚಿತ್ರದ ಚಿತ್ರೀಕರಣವು ಇಂದು (ಸೋಮವಾರ) ಪ್ರಾರಂಭವಾಯಿತು. ಶೂಟಿಂಗ್​ ಸ್ಪಾಟ್​ನಿಂದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಅಭಿಮಾನಿಗಳು ಮತ್ತು ನೆಟಿಜನ್​ಗಳು ಬಹುಪರಾಕ್​ ಹೇಳುತ್ತಿದ್ದಾರೆ.

ಈ ಶುಭ ಘಳಿಗೆಯ ನಿಮಿತ್ತ ರಜನಿಕಾಂತ್ ಅವರ ಮೊದಲ ಪೋಸ್ಟರ್​ ಅನ್ನು ಸಹ ಬಿಡುಗಡೆ ಮಾಡಲಾಗಿದ್ದು ಚಿತ್ರದ ನಿರ್ಮಾಪಕರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ರಜನಿಕಾಂತ್​ ಅವರ 169ನೇ ಚಿತ್ರ ಇದಾಗಿದ್ದು, ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಸಂಸ್ಥೆಯು ಚಿತ್ರಕ್ಕೆ ಆರ್ಥಿಕ ಇಂದನ ತುಂಬಲು ಸಿದ್ಧಗೊಂಡಿದೆ.

Rajinikanth begins shoot for 169th film, makers unveil Jailer first look
ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ಮೊದಲ ಪೋಸ್ಟರ್

''ಜೈಲರ್ ಇಂದು ತನ್ನ ಕ್ರಿಯೆಯನ್ನು ಪ್ರಾರಂಭಿಸುತ್ತಾನೆ!'' ಎಂಬ ಶೀರ್ಷಿಕೆಯಡಿ ಸನ್ ಪಿಕ್ಚರ್ಸ್ ಸಂಸ್ಥೆಯು ಅವರ ಫಸ್ಟ್​ ಲುಕ್​ ಅನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದಕ್ಕೂ ಮುನ್ನ ಭಾನುವಾರ ತಡರಾತ್ರಿ ಸಂಗೀತ ನಿರ್ದೇಶಕ ಅನಿರುದ್ಧ್ ಅವರು ಈ ಬಗ್ಗೆ ಹಿಂಟ್​ ನೀಡಿದ್ದರು. ನಿರೀಕ್ಷೆಯಂತೆ ಇಂದು ಫಸ್ಟ್​ ಲುಕ್​ ಬಿಡುಗಡೆಯಾಗಿದ್ದು ''ಜೈಲರ್ ಬರುತ್ತಿದ್ದಾರೆ'' ಅಂತ ಬರೆದುಕೊಂಡಿದ್ದಾರೆ.

ನಗರದ ಜನಪ್ರಿಯ ಹೋಟೆಲ್ ಮತ್ತು ರೆಸ್ಟೊರೆಂಟ್ ಇದ್ದ ಸ್ಥಳದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ ಎಂದು ಮೂಲಗಳು ಹೇಳುತ್ತವೆ. ಈ ಸ್ಥಳದಲ್ಲೇ ಪೊಲೀಸ್​ ಠಾಣೆಯ ಸೆಟ್​ ಹಾಕಲಾಗಿದ್ದು, ರಜನಿಕಾಂತ್ ಅವರು ಚಿತ್ರೀಕರಣದ ವೇಳೆ ಹಾಜರಿದ್ದರು. ಇದಕ್ಕೂ ಮುನ್ನ ಭಾನುವಾರ ಸೆಟ್‌ನಲ್ಲಿ ಟೆಸ್ಟ್ ಶೂಟ್ ನಡೆಸಲಾಗಿದ್ದು, ವಿವಿಧ ಕಲಾವಿದರು ಕಠಾರಿ ಮತ್ತು ಚಾಕುಗಳನ್ನು ಒಯ್ಯುತ್ತಿರುವುದು ಕಂಡುಬಂದಿದೆ.

ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಜೊತೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಚಿತ್ರದ ಪ್ಲಸ್​ ಪಾಯಿಂಟ್​ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್​ ಶಿವರಾಜ್​ ಕುಮಾರ್​ ನಟಿಸಲಿದ್ದಾರೆ ಅನ್ನೋದು ಮತ್ತೊಂದು ವಿಶೇಷ. ಕಾರಣ ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ರಜನಿಕಾಂತ್‌ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ಸಿನಿಪ್ರಿಯರಿಗೆ ಸಖತ್ ಥ್ರಿಲ್ ನೀಡಿದೆ. ಚಿತ್ರಕ್ಕೆ ಪ್ರಸಿದ್ಧ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರ ವಿಶೇಷ ಕೈಚಳಕವಿದ್ದು, ಬರುವ ಸೆಪ್ಟೆಂಬರ್‌ನಲ್ಲಿ ರಜನಿಕಾಂತ್ ಮತ್ತು ಶಿವರಾಜ್‌ಕುಮಾರ್ ಅವರ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.