ETV Bharat / entertainment

ರಜನಿಕಾಂತ್‌ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿನಿಮಾ ನಟ: ಎಷ್ಟು ಕೋಟಿ ಗೊತ್ತೇ? - ಜೈಲರ್ ಲಾಭ

Rajinikanth Becomes Highest Paid Actor: 'ಜೈಲರ್'​ ಸಿನಿಮಾಗಾಗಿ ನಟ ರಜನಿಕಾಂತ್ ಪಡೆದ ಸಂಭಾವನೆಯ ಡಿಟೇಲ್ಸ್​ ಇಲ್ಲಿದೆ.

actor Rajinikanth Remuneration
ನಟ ರಜನಿಕಾಂತ್​ ಸಂಭಾವನೆ
author img

By ETV Bharat Karnataka Team

Published : Sep 1, 2023, 2:50 PM IST

Updated : Sep 1, 2023, 5:34 PM IST

ಸೂಪರ್​ ಸ್ಟಾರ್ ರಜನಿಕಾಂತ್​ ನಟನೆಯ 'ಜೈಲರ್'​ ಸಿನಿಮಾ ಆಗಸ್ಟ್ 10ರಂದು ತೆರೆಗಪ್ಪಳಿಸಿದೆ. ಸಿನಿಮಾ ಕೋಟಿಗಟ್ಟಲೆ ಹಣ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ತೆರೆಕಂಡು 20 ದಿನಗಳಾದರೂ ಹಲವೆಡೆ ಇನ್ನೂ ಉತ್ತಮ ಪ್ರದರ್ಶನ ಮುಂದುವರೆಸಿದೆ. ಹಿರಿಯ ನಟನ ಅಮೋಘ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್​ ಪ್ರಕಾರ, ಜೈಲರ್ ಬಿಡುಗಡೆಯಾದ 22 ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 328 ಕೋಟಿ ರೂ.ಗೂ ಅಧಿಕ ಹಣ ಗಳಿಸಿದೆ. ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಸುಮಾರು 650 ಕೋಟಿ ರೂ. ಬಾಚಿಕೊಂಡಿದೆ. ಇನ್ನೂ ಹಲವೆಡೆಯ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ, ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ರಜನಿಕಾಂತ್​ ಎಂದು ಸಿನಿಮಾ ವ್ಯವಹಾರ ನಡೆಸುವ ವಿಶ್ಲೇಷಕರು ಸೋಷಿಯಲ್​ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ​

  • Info coming in that, the envelope handed over by Kalanithi Maran to superstar #rajinikanth contains a single cheque amounting ₹1⃣0⃣0⃣ cr from City Union Bank, Mandaveli branch, Chennai.

    This is a #Jailer profit sharing cheque which is up & above the already paid… pic.twitter.com/I6TF6p4SvL

    — Manobala Vijayabalan (@ManobalaV) August 31, 2023 " class="align-text-top noRightClick twitterSection" data=" ">

ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ Xನಲ್ಲಿ (ಹಿಂದಿನ ಟ್ವಿಟರ್) ರಜನಿಕಾಂತ್​ ಅವರಿಗೆ ಸಂಬಂಧಪಟ್ಟ ಮಾಹಿತಿ ಶೇರ್ ಮಾಡಿದ್ದಾರೆ. ಸನ್​​ ಗ್ರೂಪ್​ನ ಕಲಾನಿಧಿ ಮಾರನ್​ ಮತ್ತು ರಜನಿಕಾಂತ್​ ಫೋಟೋ ಹಂಚಿಕೊಂಡ ಮನೋಬಾಲಾ, ''ಕಲಾನಿಧಿ ಮಾರನ್​ ಅವರು ರಜನಿಕಾಂತ್​ ಅವರಿಗೆ ಹಸ್ತಾಂತರಿಸಿದ ಲಕೋಟೆಯಲ್ಲಿ 100 ಕೋಟಿ ರೂ. ಮೊತ್ತದ ಒಂದು ಆದಾಯ ಹಂಚಿಕೆ (profit sharing) ಚೆಕ್​ ಇದೆ. ಸಿಟಿ ಯೂನಿಯನ್​ ಬ್ಯಾಂಕ್​, ಮಂಡವೇಲಿ ಬ್ರ್ಯಾಂಚ್​​, ಚೆನ್ನೈನಿಂದ ಈ ಹಣ ವರ್ಗಾವಣೆ ಆಗಲಿದೆ. ಜೈಲರ್​​ ಲಾಭ ಹಂಚಿಕೆಯ ಚೆಕ್​ ಇದು. ಈಗಾಗಲೇ ರಜನಿಗೆ ಈ ಸಿನಿಮಾಗಾಗಿ ಸುಮಾರು 110 ಕೋಟಿ ರೂ. ಸಂಭಾವನೆ ಕೊಡಲಾಗಿದೆ. ಹಿರಿಯ ನಟ ಒಟ್ಟು 210 ಕೋಟಿ ರೂ. ಪಡೆದಿದ್ದಾರೆ. ಸೂಪರ್​ ಸ್ಟಾರ್ ಇದೀಗ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟನಾಗಿ ಹೊರಹೊಮ್ಮಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kushi Review: ಸಮಂತಾ ವಿಜಯ್​ ದೇವರಕೊಂಡ ಸಿನಿಮಾಗೆ ಹೇಗಿದೆ ಪ್ರತಿಕ್ರಿಯೆ?!

ವಿಶ್ಲೇಷಕ ಮನೋಬಾಲಾ ವಿಜಯಬಾಲನ್​​ ಅವರು ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್ ಅವರ ಜೈಲರ್​ ಯಶಸ್ಸನ್ನು ವಿಜಯ್​ ಅವರ 'ಬೀಸ್ಟ್' ಜೊತೆ ಹೋಲಿಕೆ ಮಾಡಿದ್ದಾರೆ. ''ಬೀಸ್ಟ್​ ಹಿನ್ನೆಡೆಗೆ ಮತ್ತೊಂದು ಉದಾಹರಣೆ. ಬೀಸ್ಟ್ ಬಿಡುಗಡೆ ಆದ ಬಳಿಕ ವಿಜಯದದ ಅವರಿಗೆ ಯಾವುದೇ ಚೆಕ್​ ಕೊಟ್ಟಿಲ್ಲ. ಆದ್ರೆ ಸೂಪರ್​ಸ್ಟಾರ್ ರಜನಿಕಾಂತ್​​ ಜೈಲರ್​ ಲಾಭದಲ್ಲಿ 100 ಕೋಟಿ ರೂ. ಪಡೆದಿದ್ದಾರೆ. ನಿಜವಾದ ಯಶಸ್ಸು ಸ್ವತಃ ಸದ್ದು ಮಾಡುತ್ತದೆ. ನೆಲ್ಸನ್​ ಅದ್ಭುತ ಚಿತ್ರದೊಂದಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಅದೇ ಡೈರೆಕ್ಟರ್​, ಆದ್ರೆ ವಿಭಿನ್ನ ಫಲಿತಾಂಶ'' ಎಂದು ಬರೆದುಕೊಂಡಿದ್ದಾರೆ.

  • Yet another day,
    Yet another proof that #Beast is disaster.

    No cheque was given after Beast release to Joseph Vijay.

    But,
    Superstar #Rajinikanth received profit sharing cheque of ₹100 crores for #Jailer.

    The facts of real SUCESS speaks for itself.

    At the same time, Nelson… pic.twitter.com/p3Jn0Du6go

ಇದನ್ನೂ ಓದಿ: ದುಬೈನ​ ಬುರ್ಜ್​ ಖಲೀಫಾದಲ್ಲಿ ಜವಾನ್​ ಟ್ರೇಲರ್​ ಅನಾವರಣ: 'ನನ್ನ ಬೋಳುತಲೆ ನೋಟ ಇದೇ ಮೊದಲು ಮತ್ತು ಕೊನೆ' ಎಂದ ಶಾರುಖ್​​

ಸನ್​ ಪಿಕ್ಚರ್ಸ್ ನಿರ್ಮಾಣದ ಜೈಲರ್ ಸಿನಿಮಾದಲ್ಲಿ ರಜನಿ ಜೊತೆಗೆ ಶಿವ ರಾಜ್​ಕುಮಾರ್​, ಮೋಹನ್​ ಲಾಲ್​​, ಜಾಕಿ ಶ್ರಾಫ್​, ರಮ್ಯಾ ಕೃಷ್ಣನ್​​, ತಮನ್ನಾ ಭಾಟಿಯಾ ಸೇರಿದಂತೆ ಹಲವು ಸ್ಟಾರ್​ ನಟರು ಕಾಣಿಸಿಕೊಂಡಿದ್ದಾರೆ.

Last Updated : Sep 1, 2023, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.