ETV Bharat / entertainment

ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವಂತೆ ಸಿಎಂಗೆ ಮನವಿ ನೀಡಿದ ರಾಜೇಂದ್ರ ಸಿಂಗ್ ಬಾಬು ತಂಡ - ಫಿಲ್ಮ್ ಸಿಟಿ ನಿರ್ಮಾಣ

ಫಿಲ್ಮ್ ಸಿಟಿ ನಿರ್ಮಾಣ ಒತ್ತಾಯಕ್ಕಾಗಿ ಪ್ರಮುಖ ನಿರ್ದೇಶಕ ನೇತೃತ್ವದಲ್ಲಿ 654 ಜನರ ಗಂಧದ ಗುಡಿ ಗೃಹ ನಿರ್ಮಾಣ ವೇದಿಕೆ ನಿರ್ಮಾಣವಾಗಿದೆ.

Rajendra Singh Babu team requested CM to build film city in Mysore
ಸಿಎಂಗೆ ಮನವಿ ನೀಡಿದ ರಾಜೇಂದ್ರ ಸಿಂಗ್ ಬಾಬು ತಂಡ
author img

By

Published : Jun 13, 2023, 7:34 PM IST

90 ವರ್ಷಗಳ ಇತಿಹಾಸ ಇರುವ ಕನ್ನಡ ಚಿತ್ರರಂಗಕ್ಕೆ ದಶಕಗಳು ಕಳೆದರು ಕರ್ನಾಟಕದಲ್ಲಿ ಬೃಹತ್ ಮಟ್ಟದ ಫಿಲ್ಮ್ ಸಿಟಿ ನಿರ್ಮಾಣ ಆಗಿಲ್ಲ ಎಂಬ ಕೂಗು ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದಿಂದಲೂ ಕೇಳಿ ಬರುತ್ತಿದೆ. ಆದರೆ ಕನ್ನಡ ಚಿತ್ರರಂಗಕ್ಕೆ ಫಿಲ್ಮ್ ಸಿಟಿ ಎಂಬುದು ಮರೀಚಿಕೆಯಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಕನ್ನಡದ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ ನಿರ್ಮಾಪಕ ಕೃಷ್ಣೇಗೌಡ, ನಿರ್ಮಾಪಕರು, ತಂತ್ರಜ್ಞಾನರು, ಕಥೆಗಾರರು ಸೇರಿದಂತೆ 654 ಜನ ಗಂಧದಗುಡಿ ಗೃಹ ನಿರ್ಮಾಣ ವೇದಿಕೆ ಎಂದು ತಂಡ ಮಾಡಿಕೊಂಡಿದ್ದಾರೆ.

ಈ ಗಂಧದಗುಡಿ ಗೃಹ ನಿರ್ಮಾಣ ವೇದಿಕೆಯಿಂದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡಬೇಕು ಎಂಬ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಇಂದು ನಿರ್ದೇಶಕ ಹಾಗೂ ನಿರ್ಮಾಪಕ ಎಸ್. ವಿ. ರಾಜೇಂದ್ರಸಿಂಗ್ ಬಾಬು ಅವರ ನೇತೃತ್ವದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಕಲಾವಿದರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿತು.

ಚಿತ್ರರಂಗದ ಪ್ರಮುಖರ ಜೊತೆ ಸುದೀರ್ಘ ಸಮಯದ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಈ ಬಾರಿಯ ಬಜೆಟ್ ಮುಗಿದ ನಂತರ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಚಂದನವನಕ್ಕೆ ಚಿತ್ರನಗರಿ ನಿರ್ಮಾಣಕ್ಕಾಗಿ ಮತ್ತೊಂದು ಸುತ್ತಿನ‌ ಸುದೀರ್ಘ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.

Rajendra Singh Babu team requested CM to build film city in Mysore
ಸಿಎಂಗೆ ಮನವಿ ನೀಡಿದ ರಾಜೇಂದ್ರ ಸಿಂಗ್ ಬಾಬು ತಂಡ

ನಿಯೋಗವು ಸಲ್ಲಿಸಿದ ಇತರೆ ಮನವಿಗಳ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು. ಈ ಸಂಧರ್ಭದಲ್ಲಿ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ ಎನ್.ಸೀತಾರಾಮ್, ಲಿಂಗದೇವರು, ನಂಜುಂಡೇಗೌಡ, ಹಿರಿಯ ನಟ ಶ್ರೀನಿವಾಸ ಮೂರ್ತಿ, ನಟಿ ವಿಜಯಲಕ್ಷ್ಮಿ ಸಿಂಗ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಉಪಸ್ಥಿತರಿದ್ದರು.

ಚಂದನವನಕ್ಕೆ ಫಿಲ್ಮ್​ ಸಿಟಿ ನಿರ್ಮಾಣ ಮಾಡಬೇಕು ಎನ್ನುವ ಕೂಗು ಹಳೇಯದು. ಅದರಲ್ಲೂ ಚಿತ್ರರಂಗದ ಕೆಲವರು ಫಿಲ್ಮ್​ ಸಿಟಿಯನ್ನು ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ನಿರ್ಮಾಣ ಮಾಡಬೇಕು ಎಂದು ಹೇಳಿದರೆ ಇನ್ನೂ ಕೆಲವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪಿಲ್ಮ್​ ಸಿಟಿ ನಿರ್ಮಾಣ ಮಾಡಬೇಕು ಎಂದು ಎನ್ನುವ ಒತ್ತಾಯವನ್ನೂ ಮಾಡಿದ್ದರು. ಈಗಲೂ ಈ ಎರಡು ಬಗೆಯ ಮಾತುಗಳು ಕೇಲಿ ಬರುತ್ತಿವೆ.

ಇತ್ತೀಚೆಗೆ ಈ ಫಿಲ್​ ಸಿಟಿ ನಿರ್ಮಾಣದ ವಿಷಯದಲ್ಲಿ ನಟ ರಿಷಬ್​ ಶೆಟ್ಟಿ ಅವರು ಕೂಡ ಸುದ್ದಿಯಾಗಿದ್ದರು. ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಆಯೋಜನೆ ಮಾಡಿದ್ದ ಸೇವಾ ಸುಶಾಸನ್​ ಗರೀಬ್​ ಕಲ್ಯಾಣ್​ ರಾಷ್ಟ್ರೀಯ ಸಮಾವೇಶ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಮೈಸೂರಿನಲ್ಲೇ ಫಿಲ್ಮ್​ ಸಿಟಿ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ನಟ ರಿಷಬ್ ಶೆಟ್ಟಿ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.