ರಾಜಸ್ಥಾನದ ಪ್ರಿಯಾನ್ ಸೈನ್ ಅವರು ಮಿಸ್ ಅರ್ಥ್ ಇಂಡಿಯಾ 2023 (Miss Earth India 2023) ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಡಿಸೆಂಬರ್ನಲ್ಲಿ ವಿಯೆಟ್ನಾಂನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಅರ್ಥ್ ಆಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 'ಡಿವೈನ್ ಬ್ಯೂಟಿ' ಎಂಬ ಹೆಸರಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವು ಮಿಸ್ ಇಂಟರ್ನ್ಯಾಷನಲ್ ಇಂಡಿಯಾ ಮತ್ತು ಮಿಸ್ ಅರ್ಥ್ ಇಂಡಿಯಾ ಪ್ರಶಸ್ತಿಗಳನ್ನು ನೀಡುತ್ತದೆ.
ಪ್ರಿಯಾನ್ ಸೈನ್ ಮಿಸ್ ರಾಜಸ್ಥಾನ 2022ರ ಸೌಂದರ್ಯ ಸ್ಪರ್ಧೆಯ ಮೊದಲ ರನ್ನರ್ ಅಪ್ ಆಗಿದ್ದರು. ಮಿಸ್ ಅರ್ಥ್ ಇಂಡಿಯಾ ಕಾರ್ಯಕ್ರಮವು ದೆಹಲಿಯ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಿತು. ಡಿವೈನ್ ಬ್ಯೂಟಿ ಸೌಂದರ್ಯ ಸ್ಪರ್ಧೆಯನ್ನು ದೀಪಕ್ ಅಗರ್ವಾಲ್ ಆಯೋಜಿಸಿದ್ದರು. ಪ್ರಿಯಾನ್ ಸೈನ್ 16 ಫೈನಲಿಸ್ಟ್ಗಳಲ್ಲಿ ಒಬ್ಬರಾಗಿದ್ದರು. ಅನೇಕ ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಇದೀಗ ಮಿಸ್ ಅರ್ಥ್ ಇಂಡಿಯಾ 2023 ಆಗಿ ಹೊರಹೊಮ್ಮಿದ್ದಾರೆ.
ವಿಜೇತೆ ಎಂದು ಘೋಷಿಸಿದ ತಕ್ಷಣ ಪ್ರಿಯಾನ್ ಸೈನ್ ಭಾವುಕರಾದರು. ಮಿಸ್ ರಾಜಸ್ಥಾನ ಆಯೋಜಕಿ ಮತ್ತು ಪ್ರಿಯಾನ್ ಸೈನ್ ಅವರ ಮಾರ್ಗದರ್ಶಕರಾದ ಯೋಗೇಶ್ ಮಿಶ್ರಾ ಹಾಗೂ ನಿಮಿಷಾ ಮಿಶ್ರಾ ಅವರು ಪ್ರಿಯಾನ್ ಮಿಸ್ ರಾಜಸ್ಥಾನ 2022ರ ಮೊದಲ ರನ್ನರ್ ಅಪ್ ಆಗಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡ ತೃತೀಯಲಿಂಗಿ.. ಇತಿಹಾಸ ಸೃಷ್ಟಿಸಿದ ರಿಕ್ಕಿ
ಪ್ರಿಯಾನ್ ಸೈನ್ ವೈದ್ಯಕೀಯ ವ್ಯಾಸಂಗ ಮಾಡುತ್ತಲೇ ಮಿಸ್ ಇಂಡಿಯಾಗೂ ತಯಾರಿ ನಡೆಸುತ್ತಿದ್ದಾರೆ. ಪ್ರಿಯಾನ್ ತಾಯಿ ರಾಜಸ್ಥಾನದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಿಯಾನ್ ಅವರಿಗೆ ತಾಯಿ ಮಾತ್ರವೇ ಇದ್ದು, ಅವರೇ ಆಕೆಯನ್ನು ಮಗನಂತೆ ಬೆಳೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರಿಯಾನ್ ಸೈನ್, "ಈ ಪ್ರಶಸ್ತಿ ಗೆಲ್ಲಲು ಕಠಿಣ ಪರಿಶ್ರಮ ಪಡಬೇಕಾಯಿತು" ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು: ಉದ್ಯಮ ಕ್ಷೇತ್ರದ ಸಾಧಕರಿಗೆ 'ಪ್ರೈಡ್ ಇಂಡಿಯಾ ಅವಾರ್ಡ್'