ಪ್ರತಿಷ್ಟಿತ ಆಸ್ಕರ್ 2023 ಸಮಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅಕಾಡೆಮಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್ಆರ್ಆರ್ ಚಿತ್ರದ ಸೂಪರ್ಹಿಟ್ ನಾಟು ನಾಟು ಹಾಡು ನಾಮನಿರ್ದೇಶನಗೊಂಡಿದೆ. ಆದರೆ ಆಸ್ಕರ್ ನಾಮನಿರ್ದೇಶನದ ನಂತರ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಆರ್ಆರ್ಆರ್ ಚಿತ್ರದ ಪ್ರಚಾರಕ್ಕಾಗಿ ಭಾರಿ ಮೊತ್ತ ವ್ಯಯಿಸಿರುವುದಾಗಿ ವರದಿಯಾಗಿದೆ. ಜೊತೆಗೆ ಈ ಬಗ್ಗೆ ಟಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ತಮ್ಮಾ ರೆಡ್ಡಿ ಭಾರದ್ವಾಜ್ ಕಮೆಂಟ್ ಮಾಡಿರುವುದು ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ.
ತಮ್ಮಾ ರೆಡ್ಡಿ ಭಾರದ್ವಾಜ್ ಕಮೆಂಟ್ ತೆಲುಗು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. "ಆರ್ಆರ್ಆರ್ ಚಿತ್ರದ ಆಸ್ಕರ್ ಪ್ರಚಾರಕ್ಕಾಗಿ ನಿರ್ದೇಶಕ ರಾಜಮೌಳಿ 80 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಹಣದಲ್ಲಿ 8 ಸಿನಿಮಾ ಮಾಡಬಹುದು" ಎಂದಿದ್ದಾರೆ. "ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ?" ಎಂದು ಲೇವಡಿ ಮಾಡಿದ್ದಾರೆ. ಭಾರದ್ವಾಜ್ ಕಮೆಂಟ್ಗಳಿಗೆ ಸಿನಿಮಾ ಕ್ಷೇತ್ರದ ಗಣ್ಯರು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ.
ರಾಮ್ಚರಣ್, ಜೂನಿಯರ್ ಎನ್ಟಿಆರ್ ಮತ್ತು ನಿರ್ದೇಶಕ ರಾಜಮೌಳಿ ಅವರು ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಚಾರಕ್ಕಾಗಿ 83 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸೂಪರ್ ಹಿಟ್ ಸಿನಿಮಾ ಆರ್ಆರ್ಆರ್ ಆಸ್ಕರ್ ಪಟ್ಟಿಗೆ ಸೇರಲು ಎಸ್ಎಸ್ ರಾಜಮೌಳಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಊಹಾಪೋಹಗಳಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಟಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ತಮ್ಮಾ ರೆಡ್ಡಿ ಭಾರದ್ವಾಜ್ ಕಮೆಂಟ್ ತೆಲುಗು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಆರ್ಆರ್ಆರ್ ಚಿತ್ರವು ಆಸ್ಕರ್ ಪ್ರಚಾರಕ್ಕಾಗಿ ನಿರ್ದೇಶಕ ಎಸ್ಎಸ್ ರಾಜಮೌಳಿಯವರು 80 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಹಣದಲ್ಲಿ 8 ಸಿನಿಮಾ ಮಾಡಬಹುದು ಎಂದಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ? ಎಂದು ಲೇವಡಿ ಮಾಡಿದ್ದಾರೆ. ಭಾರದ್ವಾಜ್ ಅವರ ಕಮೆಂಟ್ಗಳಿಗೆ ಸಿನಿ ಗಣ್ಯರು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ.
ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್ಆರ್ಆರ್ ಚಿತ್ರತಂಡದ ಮೇಲೆ ಭಾರತೀಯ ಸಿನಿಮಾ ರಂಗದ ಗಮನ ಕೇಂದ್ರಿಕೃತವಾಗಿದೆ. ರಾಮ್ಚರಣ್ ಅಮೆರಿಕದಲ್ಲಿ ಎರಡು ಅಂತಾರಾಷ್ಟ್ರೀಯ ಶೋಗಳಲ್ಲಿ ಭಾಗಿಯಾಗಿ ಚಿತ್ರದ ಪ್ರಚಾರ ಮಾಡಿದ್ದಾರೆ. ಎಂಟರ್ಟೈನ್ಮೆಂಟ್ ಟುನೈಡ್, ಕಲ್ಚರ್ ಪಾಪ್ ಹೆಸರಿನ ಶೋಗಳಲ್ಲಿ ಭಾಗಿಯಾದ ರಾಮ್ಚರಣ್ ಜಾಗತಿಕ ಮಟ್ಟದಲ್ಲಿ ಆರ್ಆರ್ಆರ್ ಜನಪ್ರಿಯತೆ ಬಗ್ಗೆ ಮಾತನಾಡಿದ್ದಾರೆ. ಈ ಮಧ್ಯೆ ಸಿನಿಮಾ ಪ್ರಚಾರಕ್ಕಾಗಿ ಕೋಟಿ ಕೋಟಿ ಹಣವನ್ನು ರಾಜಮೌಳಿ ವ್ಯಯಿಸಿದ್ದಾರೆ ಎಂಬುದು ಎಲ್ಲೆಡೆ ಸುದ್ದಿಯಾಗುತ್ತಿದೆ.
ಇದನ್ನೂ ಓದಿ: ಬಿಡುಗಡೆಗೂ ಮುನ್ನ ದಾಖಲೆ ಬರೆಯುತ್ತಿರುವ ಕಬ್ಜ: ಮತ್ತೊಂದು ಗೆಲುವು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು
ಇದೇ ಮಾರ್ಚ್ 12 ರಂದು ಅಮೆರಿಕದಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದು ನಾಟು ನಾಟು ಹಾಡಿನ ಪ್ರದರ್ಶನ ಇರಲಿದೆ. ನಾಟು ನಾಟು ಹಾಡನ್ನು ಮೂಲ ಬೀಟ್‌ನೊಂದಿಗೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಈ ಹಾಡಿನ ಇಬ್ಬರು ಗಾಯಕರಾದ ಕಾಲಭೈರವ ಮತ್ತು ರಾಹುಲ್ ಸಿಪ್ಲಿಗಂಜ್ ಸ್ವತಃ ಹಾಡಲಿದ್ದಾರೆ. ಈ ಕ್ಷಣಕ್ಕಾಗಿ ಚಿತ್ರತಂಡ ಮಾತ್ರವಲ್ಲದೇ ಇಡೀ ದೇಶ ಕಾಯುತ್ತಿದೆ. ಆಸ್ಕರ್ನಲ್ಲಿ ಲೇಡಿ ಗಾಗಾ ಮತ್ತು ರಿಹನ್ನಾ ಅವರ ಹಾಡುಗಳ ವಿರುದ್ಧ ನಾಟು ನಾಟು ಹಾಡು ಸ್ಪರ್ಧಿಸುತ್ತಿದೆ.
ನಾಟು ನಾಟು ರಚಿಸಲು ಚಂದ್ರಬೋಸ್ ಅವರು 1 ವರ್ಷ 7 ತಿಂಗಳು ವ್ಯಯಿಸಿದ್ದಾರೆ. ಶೇ 90 ರಷ್ಟು ಹಾಡನ್ನು ಅರ್ಧ ದಿನದಲ್ಲಿ ಬರೆದು ಮುಗಿಸಿದ ಅವರು ಶೇ.10 ರಷ್ಟು ಹಾಡನ್ನು ಬರೆಯಲು 19 ತಿಂಗಳು ತೆಗೆದುಕೊಂಡಿದ್ದಾರೆ. ಕೊನೆಗೂ ಅವರ ಸತತ ಪ್ರಯತ್ನಕ್ಕೆ ಫಲವೆಂಬಂತೆ ಅನೇಕ ಪ್ರಶಸ್ತಿಗಳನ್ನು ನಾಟು ನಾಟು ಪಡೆದುಕೊಂಡಿದೆ.
ಇದನ್ನೂ ಓದಿ: ಖಳನಟ ವಜ್ರಮುನಿಯ ‘‘ಯಲಾ ಕುನ್ನಿ’’ ಡೈಲಾಗ್ ಈಗ ಕೋಮಲ್ ಅಭಿನಯದ ಹೊಸ ಚಿತ್ರದ ಟೈಟಲ್