ETV Bharat / entertainment

ರಾಜಮೌಳಿ - ಮಹೇಶ್​ ಬಾಬು ಸಿನಿಮಾ: ಟಾಲಿವುಡ್​​ ಪ್ರಿನ್ಸ್​ ಬರ್ತ್​ಡೇಯಂದು ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್ - Mahesh Babu latest news

Rajamouli and Mahesh Babu movie: ಆಗಸ್ಟ್ 9 ರಂದು ನಟ ಮಹೇಶ್​ ಬಾಬು 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ನಟನ ಮುಂದಿನ ಸಿನಿಮಾ ಕುರಿತ ಮಾಹಿತಿ ಹೊರಬೀಳಲಿದೆ.

Rajamouli and Mahesh Babu
ರಾಜಮೌಳಿ ಮಹೇಶ್​ ಬಾಬು ಸಿನಿಮಾ
author img

By

Published : Aug 3, 2023, 9:53 PM IST

ಆರ್​ಆರ್​ಆರ್​, ಬಾಹುಬಲಿ ಖ್ಯಾತಿಯ ಸ್ಟಾರ್ ನಿರ್ದೇಶಕ ಎಸ್​ ಎಸ್​ ರಾಜಮೌಳಿ ಹಾಗೂ ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್​​ನಲ್ಲಿ ಸಿನಿಮಾವೊಂದು ಬರುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಅಪ್​ಡೇಟ್ಸ್ ಬಂದಿಲ್ಲ. ಈ ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿವೆ. ಊಹಾಪೋಹಗಳು ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಇದೀಗ ಚಿತ್ರದ ಆಪ್ತಮೂಲಗಳಿಂದ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ಟಾಲಿವುಡ್​​ ಪ್ರಿನ್ಸ್​ ಮಹೇಶ್ ಬಾಬು ಹುಟ್ಟುಹಬ್ಬದಂದು ಚಿತ್ರತಂಡ ಸಿನಿಮಾದಿಂದ ಅಪ್​ಡೇಟ್ಸ್ ಅನ್ನು ಪ್ರಕಟಿಸಲಿದೆ. ಇದೇ ತಿಂಗಳ 9 ರಂದು ಮಹೇಶ್​ ಬಾಬು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ಜಕ್ಕಣ್ಣ ಆ್ಯಂಡ್​ ಮೂವಿ ಟೀಮ್​ ಸರ್ಪ್ರೈಸ್ ಕೊಡಲು ಪ್ಲ್ಯಾನ್​​ ಮಾಡಿದೆ. ಈ ವಿಷಯ ತಿಳಿದ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಅಂದು ಚಿತ್ರದ ಸಂಪೂರ್ಣ ಮಾಹಿತಿ ಹೊರಬೀಳಲಿದೆ ಎಂಬ ಮಾತು ಕೇಳಿಬರುತ್ತಿದೆ.

ಸದ್ಯ ಮಹೇಶ್ ಬಾಬು ಅಭಿಮಾನಿಗಳು ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಚಿತ್ರದ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆ ಹೆಚ್ಚಿದೆ, ಇಲ್ಲವೇ ಚಿತ್ರದಿಂದ ಮಹೇಶ್ ಅವರ ಫಸ್ಟ್ ಲುಕ್ ರಿಲೀಸ್ ಮಾಡುವ ಚಾನ್ಸ್ ಇದೆ ಎಂಬ ಕಾಮೆಂಟ್​ಗಳು ಬರುತ್ತಿವೆ.

ಈ ಹಿಂದೆ ನಿರ್ದೇಶಹ ರಾಜಮೌಳಿ ಮತ್ತು ಅವರ ತಂದೆ - ಬರಹಗಾರ ವಿಜಯೇಂದ್ರ ಪ್ರಸಾದ್ ಅವರು ಈ ಚಿತ್ರದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು. ಆಫ್ರಿಕನ್ ಕಾಡಿನ ಹಿನ್ನೆಲೆಯಲ್ಲಿ ಸಾಹಸ ಪರಿಕಲ್ಪನೆಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದರು. ಈ ಚಿತ್ರದ ಕಥೆ ಅತ್ಯಂತ ಸಾಹಸಮಯ ಕಥೆಯಾಗಿದೆ. ವಿಜಯೇಂದ್ರ ಪ್ರಸಾದ್ ಅವರೇ ಚಿತ್ರಕ್ಕೆ ಕಥೆ ರಚಿಸುತ್ತಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂದು ಈಗಾಗಲೇ ತಿಳಿಸಿದ್ದಾರೆ.

ಇದನ್ನೂ ಓದಿ: 'ಆ ಸೂಪರ್​ ಸ್ಟಾರ್ ನಟಿಯೊಂದಿಗೆ ಅಭಿನಯಿಸುವ ಕನಸು ಈಡೇರಿತು': ಡಾರ್ಲಿಂಗ್​ ಪ್ರಭಾಸ್

ಮಹೇಶ್ ಬಾಬು ಪ್ರಸ್ತುತ ಗುಂಟೂರು ಕಾರಂ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ತ್ರಿವಿಕ್ರಮ್ ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆಲ ಬದಲಾವಣೆ ಹಿನ್ನೆಲೆ ಈ ಸಿನಿಮಾ ಶೂಟಿಂಗ್ ವಿಳಂಬವಾಗಿದೆ. ಯುವ ಸೆನ್ಸೇಷನಲ್ ನಟಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಅವರು ಈ ಚಿತ್ರದಲ್ಲಿ ಮಹೇಶ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ತಮನ್ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್​ಗಳು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿವೆ. ಇನ್ನೂ 2022ರಲ್ಲಿ ಸಖತ್​ ಸದ್ದು ಮಾಡಿದ ಚಿತ್ರ ಆರ್​ಆರ್​ಆರ್​. ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದ ಎಸ್​ ಎಸ್​ ರಾಜಮೌಳಿ ಅವರ ಮುಂದಿನ ಸಿನಿಮಾ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಯಾವುದು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.