ETV Bharat / entertainment

'ನಾನು ಜೈಲಿನೊಳಗೇ ಜೀವನ ಕೊನೆಗೊಳಿಸಲು ಬಯಸಿದ್ದೆ': ರಾಜ್ ಕುಂದ್ರಾ - ಈಟಿವಿ ಭಾರತ ಕರ್ನಾಟಕ

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲುವಾಸದಲ್ಲಿದ್ದ ದಿನಗಳ ಅನುಭವವನ್ನು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಹಂಚಿಕೊಂಡಿದ್ದಾರೆ.

Etv Bharat'That was painful': Raj Kundra recalls contemplating 'ending things' in jail as family was enduring humiliation
ನಾನು ಜೈಲಿನೊಳಗೆ ನನ್ನ ಜೀವನವನ್ನು ಕೊನೆಗೊಳಿಸಲು ಬಯಸಿದ್ದೆ: ರಾಜ್ ಕುಂದ್ರಾ
author img

By ETV Bharat Karnataka Team

Published : Oct 25, 2023, 9:25 PM IST

ಹೈದರಾಬಾದ್: ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾಗಿ 2021ರಲ್ಲಿ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದ ಸಮಯವನ್ನು ಮೆಲುಕು ಹಾಕಿದ್ದಾರೆ. ಈ ಸಮಯದಲ್ಲಿ ತನ್ನ ಪತ್ನಿಯ ಅಚಲ ಬೆಂಬಲ ತನಗೆ ನಿರ್ಣಯಕವಾಗಿತ್ತು ಎಂದು ಹೇಳಿದ್ದಾರೆ.

ಕುಂದ್ರಾ ಅವರು ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ತಡೆಗಟ್ಟುವಿಕೆ) ಕಾಯಿದೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಕ್ರಮ ಎದುರಿಸಿದ್ದರು. ಸೆಪ್ಟೆಂಬರ್ 2021 ರಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು. ತಮ್ಮ ಜೈಲು ಅನುಭವದಿಂದ ಸ್ಫೂರ್ತಿ ಪಡೆದ 'ಯುಟಿ 69' ಎಂಬ ಸಿನಿಮಾದ ಮೂಲಕ ರಾಜ್ ಕುಂದ್ರಾ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ. ಇತ್ತೀಚೆಗೆ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ರಾಜ್ ಕುಂದ್ರಾ ಮಾತನಾಡಿ, "ನಾನು ಜೈಲಿನಲ್ಲಿದ್ದಾಗ, ವಾರಕ್ಕೊಮ್ಮೆ ಮಾತ್ರ ಫೋನ್‌ನಲ್ಲಿ ಕೆಲವೇ ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿತ್ತು. ಅದಕ್ಕಾಗಿಯೇ ಶಿಲ್ಪಾ ಮತ್ತು ನಾನು ಪರಸ್ಪರ ಪತ್ರಗಳನ್ನು ಬರೆಯುತ್ತಿದ್ದೆವು. ನಾನು ಅವಳ ಪತ್ರಗಳನ್ನು ಓದುತ್ತಿದ್ದೆ ಮತ್ತು ಹೊರಗೇನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತಿದ್ದೆ. ಶಿಲ್ಪಾಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ನನ್ನ ವ್ಯವಹಾರದಲ್ಲಿ, ನನ್ನ ಜೀವನದಲ್ಲಿ ನಾನು ಎಷ್ಟು ಪ್ರಾಮಾಣಿಕನಾಗಿದ್ದೇನೆ ಮತ್ತು ನಾನು ಯಾವ ರೀತಿಯ ಕಾರ್ಯವಿಧಾನಗಳನ್ನು ಅನುಸರಿಸುತ್ತೇನೆ ಎಂಬುದರ ಬಗ್ಗೆ ತಿಳಿದಿದೆ. ಶಿಲ್ಪಾರಿಂದ ನನಗೆ ತುಂಬಾ ಬೆಂಬಲ ಸಿಕ್ಕಿದೆ" ಎಂದಿದ್ದಾರೆ.

"ವಾಸ್ತವವಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ. ಜೈಲಿನೊಳಗೇ ನನ್ನ ಜೀವನವನ್ನು ಕೊನೆಗೊಳಿಸಲು ಬಯಸಿದ್ದೆ. ಏಕೆಂದರೆ ಆಗಲೇ ನನ್ನ ಪ್ರತಿಷ್ಠೆಗೆ ಹಾನಿಯಾಗಿತ್ತು. ಇದು ತುಂಬಾ ಅವಮಾನಕರವಾಗಿತ್ತು. ನನ್ನಿಂದಾಗಿ, ಮಾಧ್ಯಮಗಳು ನನ್ನ ಹೆಂಡತಿ, ಮಕ್ಕಳು ಮತ್ತು ಪೋಷಕರ ಹಿಂದೆ ಬಿದ್ದಿದ್ದರು. ಇದೆಲ್ಲದರ ಬಗ್ಗೆ ಯೋಚಿಸುವುದು ತುಂಬಾ ಭಯಾನಕ ಮತ್ತು ನೋವಿನಿಂದ ಕೂಡಿತ್ತು. ಹೊರಗೇನು ನಡೆಯುತ್ತಿದೆ ಎಂದು ನಾನು ಊಹಿಸಬಲ್ಲೆ. ಆದರೆ ಅದರಾಚೆಗೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ. ಇದು ನನಗೆ ಜೀವನದಲ್ಲಿ ಕಷ್ಟದ ಸಮಯ. ಸತ್ಯ ಏನೆಂದು ನನಗೆ ತಿಳಿದಿತ್ತು ಮತ್ತು ಅದು ಒಂದು ದಿನ ಹೊರಬರುತ್ತದೆ ಎಂದು ನನಗೆ ನಾನೇ ಹೇಳಿಕೊಳ್ಳುವ ಧೈರ್ಯವಿತ್ತು" ಎಂದು ಹೇಳಿದ್ದಾರೆ.

ಶಹನವಾಜ್ ಅಲಿ ನಿರ್ದೇಶನದ ಯುಟಿ 69 ಚಲನಚಿತ್ರವು ರಾಜ್ ಕುಂದ್ರಾ ಅವರು ಆರ್ಥರ್ ರೋಡ್ ಜೈಲಿನಲ್ಲಿದ್ದ ಅನುಭವಗಳನ್ನು ವಿಡಂಬನಾತ್ಮಕವಾಗಿ ಪರಿಶೋಧಿಸುವ ನೈಜ ಕಥೆ ಎಂದು ಹೇಳಲಾಗುತ್ತದೆ. ನವೆಂಬರ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಬ್ಲ್ಯಾಕ್​ ಕಾಸ್ಟ್ಯೂಮ್​​​​​ನಲ್ಲಿ ಪತಿ ಜೊತೆ ಸ್ಟನ್ನಿಂಗ್​ ಫೋಟೋ ಹಂಚಿಕೊಂಡ ನಟಿ ದೀಪಿಕಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.