ETV Bharat / entertainment

ರಾಜ್​ ಬಿ ಶೆಟ್ಟಿ ಸಿನಿಮಾಗೆ ಪ್ರೇಕ್ಷಕರಿಂದ ಬಹುಪರಾಕ್​.. ಮೂರು ದಿನಗಳಲ್ಲಿ 'ಟೋಬಿ' ಗಳಿಸಿದ್ದಿಷ್ಟು... - ಈಟಿವಿ ಭಾರತ ಕನ್ನಡ

Toby collections: 'ಟೋಬಿ' ಸಿನಿಮಾ ಬಿಡುಗಡೆಯಾದ ಮೂರು ದಿನಗಳಲ್ಲಿ 10 ರಿಂದ 12 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

toby
ಥಿಯೇಟರ್​ಗಳಲ್ಲಿ ಅಬ್ಬರಿಸುತ್ತಿದೆ 'ಟೋಬಿ' ಸಿನಿಮಾ
author img

By ETV Bharat Karnataka Team

Published : Aug 28, 2023, 7:16 PM IST

ಥಿಯೇಟರ್​ಗಳಲ್ಲಿ ಅಬ್ಬರಿಸುತ್ತಿದೆ 'ಟೋಬಿ' ಸಿನಿಮಾ

'ಒಂದು ಮೊಟ್ಟೆಯ ಕಥೆ'ಯಲ್ಲಿ ಮುಗ್ಧನಾಗಿ, 'ಗರುಡ ಗಮನ ವೃಷಭ ವಾಹನ'ದಲ್ಲಿ ರೌಡಿಯಾಗಿ ಕಾಣಿಸಿಕೊಂಡಿದ್ದ ನಟ ರಾಜ್​ ಬಿ ಶೆಟ್ಟಿ 'ಟೋಬಿ'ಯಾಗಿ ರಾಜ್ಯಾದ್ಯಂತ ಅಬ್ಬರಿಸುತ್ತಿದ್ದಾರೆ. ಶೆಟ್ರ ಜೊತೆ ಚೈತ್ರಾ ಜೆ ಆಚಾರ್​ ಮತ್ತು ಸಂಯುಕ್ತಾ ಹೊರನಾಡು ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಆಗಸ್ಟ್​ 25 ರಂದು ತೆರೆ ಕಂಡು, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಲ್ಟಿಫ್ಲೆ​ಕ್ಸ್​ಗಳಲ್ಲಿ ಟೋಬಿ ಸಿನಿಮಾದ ಕ್ರೇಜ್​ ಕೊಂಚ ಜಾಸ್ತಿನೇ ಇದೆ. ಒಳ್ಳೆಯ ಕಂಟೆಂಟ್​ ಜೊತೆಗೆ ಉತ್ತಮ ಸಿನಿಮಾವನ್ನು ಕೊಟ್ಟರೆ ಕನ್ನಡ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಅನ್ನೋದಕ್ಕೆ ಟೋಬಿ ಸಿನಿಮಾವೇ ಸಾಕ್ಷಿಯಾಗಿದೆ.

'ಟೋಬಿ' ಅನ್ನೋದು ಡಾರ್ಕ್​ ಕಥೆ ಅಂದುಕೊಂಡಿದ್ದವರಿಗೆ ಇದೊಂದು ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಚಿತ್ರ ಅನ್ನೋದು ಗೊತ್ತಾಗಿದೆ. ಅದೇ ರೀತಿ ಟೋಬಿ ಸಿನಿಮಾ ಮೂರು ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆ ಕಲೆಕ್ಷನ್​ ಮಾಡಿದೆ ಎನ್ನಲಾಗಿದೆ. ಗಾಂಧಿನಗರದ ಸಿನಿಮಾ ಪಂಡಿತರ ಪ್ರಕಾರ, ಟೋಬಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ರಾಜ್ಯಾದ್ಯಂತ 150 ರಿಂದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಟೋಬಿ ಸಿನಿಮಾ ಬಿಡುಗಡೆ ಭರ್ಜರಿ ಪ್ರದರ್ಶನ ಕಾಣ್ತಿದೆ.

ಅದೇ ರೀತಿ ಶನಿವಾರ ಹಾಗೂ ಭಾನುವಾರ ರಜೆ ಇದ್ದ ಕಾರಣ ಮಲ್ಟಿಪ್ಲೆಕ್ಸ್​ಗಳಲ್ಲಿ ಟೋಬಿ ಚಿತ್ರಕ್ಕೆ ಬೊಂಬಾಟ್ ರೆಸ್ಪಾನ್ಸ್​ ಸಿಕ್ಕಿದೆ. ಈ ಕ್ರೇಜ್ ನೋಡಿದ್ರೆ ಟೋಬಿ ಸಿನಿಮಾ ಮೂರು ದಿನಕ್ಕೆ 10 ರಿಂದ 12 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ಗಾಂಧಿನಗರದ ಸಿನಿಮಾ ಪಂಡಿತರ ಮಾತಾಗಿದೆ. ರಾಜ್ ಬಿ ಶೆಟ್ಟಿ ಹಾಗೂ ಚೈತ್ರಾ ಜೆ ಆಚಾರ್​ ಕೂಡ ಬೆಂಗಳೂರಿನ ಕೆಲ ಮಲ್ಟಿಫ್ಲೆಕ್ಸ್​ ಹಾಗೂ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಶೆಟ್ರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.

ಇದನ್ನೂ ಓದಿ: ಕಥೆಯೇ ಹೀರೋ, ಫುಲ್ ಪೈಸಾ ವಸೂಲ್‌ ಎಂದ ರಾಜ್‌ ಶೆಟ್ಟಿ: 'ಟೋಬಿ'ಗೆ ಪ್ರೇಕ್ಷಕನ ಜೈಕಾರ!

ಶೆಟ್ರ ನಟನೆಗೆ ಪ್ರೇಕ್ಷಕರಿಂದ ಬಹುಪರಾಕ್​: ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಎರಡು ಆ್ಯಕ್ಷನ್ ಸೀನ್​ಗಳಿದ್ದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಳ್ಳುತ್ತಿವೆ. ಒಂದು ಅಚ್ಚರಿ ಅಂದ್ರೆ ರಾಜ್ ಶೆಟ್ರು ಮಾತು ಬರದವರ ಪಾತ್ರದಲ್ಲಿ ಅಮೋಘ ಅಭಿನಯ ತೋರಿದ್ದಾರೆ. ಮೂರು ಶೇಡ್​ಗಳಲ್ಲಿ ಕಾಣಿಸಿಕೊಂಡಿರುವ ಶೆಟ್ರು, ಪ್ರೇಕ್ಷಕರನ್ನು ರಂಜಿಸುವ ದೃಷ್ಟಿಯಿಂದ ರಿಯಲ್ ಆಗಿ ಮೂಗಿಗೆ ಮೂಗುತಿ ಚುಚ್ಚಿಸಿಕೊಂಡು ಅಭಿನಯ ಚಾತುರ್ಯ ಮೆರೆದಿದ್ದಾರೆ. ಇದನ್ನು ಗಮನಿಸಿದ್ರೆ ನಟನ ಡೆಡಿಕೇಶನ್ ಎಂಥದ್ದು ಅನ್ನೋದು ಗೊತ್ತಾಗುತ್ತದೆ ಅನ್ನೋದು ಪ್ರೇಕ್ಷಕರ ಅಭಿಪ್ರಾಯ.

ರಾಜ್ ಬಿ ಶೆಟ್ಟಿ ಮಗಳ ಪಾತ್ರದಲ್ಲಿ ಚೈತ್ರಾ ಆಚಾರ್ ಕೂಡ ಪ್ರೇಕ್ಷಕರ ಮನಗೆದ್ದಿದ್ದಾರೆ. ಸಂಯುಕ್ತಾ ಹೊರನಾಡು ವೇಶ್ಯೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಖಳ ನಟನಾಗಿ ದೀಪಕ್ ಶೆಟ್ಟಿ ಗಮನ ಸೆಳೆದಿದ್ದಾರೆ. ಗೋಪಾಲ್ ದೇಶಪಾಂಡೆ ಕೂಡ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆದ್ರೆ ಸಿನಿಮಾದ ಅವಧಿ ಸ್ವಲ್ಪ ಜಾಸ್ತಿ ಅನಿಸುತ್ತಿದೆ.

ಕ್ಯಾಮರಾಮ್ಯಾನ್ ಪ್ರವೀಣ್ ಶ್ರೀಯನ್ ಮಂಗಳೂರಿನ ಸುಂದರ ತಾಣಗಳನ್ನು ಬಹಳ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತದ ಜೊತೆಗೆ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಟಿ ಕೆ ದಯಾನಂದ್ ಕಥೆ ಬರೆದಿದ್ದು, ರಾಜ್ ಬಿ ಶೆಟ್ಟಿ ರಚನೆ ಮತ್ತು ಬಾಸಿಲ್ ಅವರ ನಿರ್ದೇಶನವಿದೆ. ಲೈಟರ್ ಬುದ್ಧ ಫಿಲ್ಮ್ಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಡಿ ರವಿ ರೈ ಕಳಸ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ 'ಟೋಬಿ' ಕ್ರೇಜ್​: ಸಿನಿಮಾ ಪ್ರಮೋಷನ್‌ನಲ್ಲಿ ಶೆಟ್ರು ಸಖತ್​ ಬ್ಯುಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.