ETV Bharat / entertainment

ರಾಗಿಣಿ ಅಭಿನಯದ 'ಇ-ಮೇಲ್'ಗೆ ಪ್ರಜ್ವಲ್ ದೇವರಾಜ್ ಸಾಥ್ - Ragini Dwivedi

ರಾಗಿಣಿ ದ್ವಿವೇದಿ ಅಭಿನಯದ 'ಇ-ಮೇಲ್' ಸಿನಿಮಾ ಶೂಟಿಂಗ್​​ ಪೂರ್ಣಗೊಂಡಿದೆ. ಪ್ರಜ್ವಲ್ ದೇವರಾಜ್ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ್ದಾರೆ.

Ragini Dwivedi starrer E-mail first look
ರಾಗಿಣಿ ದ್ವಿವೇದಿ
author img

By ETV Bharat Karnataka Team

Published : Jan 6, 2024, 1:00 PM IST

ಇ-ಮೇಲ್​​ ಫಸ್ಟ್ ಲುಕ್ ಅನಾವರಣಗೊಳಿಸಿದ ಅನಾವರಣಗೊಳಿಸಿ

ಗ್ಲ್ಯಾಮರ್ ಜೊತೆಗೆ ಉತ್ತಮ ನಟನೆಯಿಂದ ಕನ್ನಡವಲ್ಲದೇ ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟಿ ರಾಗಿಣಿ ದ್ವಿವೇದಿ. ಈ ಚೆಲುವೆ ಮುಖ್ಯ ಭೂಮಿಕೆಯಲ್ಲಿರುವ 'ಇ-ಮೇಲ್' ಸಿನಿಮಾ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿರುವ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ.

ಇ-ಮೇಲ್​​ ಫಸ್ಟ್ ಲುಕ್: ಸ್ಯಾಂಡಲ್​ವುಡ್​​ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ 'ಇ-ಮೇಲ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ, ಇಡೀ ತಂಡಕ್ಕೆ‌ ಆಲ್ ದಿ ಬೆಸ್ಟ್‌ ಹೇಳಿದ್ದಾರೆ. ರಾಗಿಣಿ ದ್ವಿವೇದಿ ಅವರ ಚಿತ್ರದ ಫಸ್ಟ್ ಲುಕ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

E-mail first look
ಇ-ಮೇಲ್​​ ಫಸ್ಟ್ ಲುಕ್

ಇ-ಮೇಲ್​​ ಚಿತ್ರತಂಡ ಹೀಗಿದೆ: ಎಸ್.ಆರ್. ರಾಜನ್ ಅವರು ಇಮೇಲ್ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಪ್ರಮುಖ ನಾಯಕಿಯಾಗಿ ರಾಗಿಣಿ ದ್ವಿವೇದಿ ಬಣ್ಣ ಹಚ್ಚಿದ್ದಾರೆ. ಮುರುಗ ಅಶೋಕ್, ಮನೋಬಲ, ಜೈಲರ್ ಚಿತ್ರ ಖ್ಯಾತಿಯ ಬಿಲ್ಲಿ, ಲೊಳ್ಳುಸಭಾ ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ರಾಮ್ ಸನ್ನಿ, ನಯನ ಚೌಹಾನ್, ಶೈಲಜ, ಶ್ವೇತ, ತೇಜಸ್ವಿನಿ, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಹತೇಕ ಕನ್ನಡ ಕಲಾವಿದರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಭವ್ಯ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ; ಗಾಯಕ ಸೋನು ನಿಗಮ್ ಹರ್ಷ ​

ಸಿನಿಮಾದಲ್ಲಿ ಸುಮಧುರ ಹಾಡುಗಳಿವೆ. ಜುಬಿನ್ ಹಾಗೂ "ಐ ಲವ್ ಯು" ಚಿತ್ರ ಖ್ಯಾತಿಯ ಕಿರಣ್ ತೊಟಂಬೈಲ್ ಸಂಗೀತ ನೀಡಿದ್ದಾರೆ. ಕನ್ನಡದ ಹಾಡುಗಳನ್ನು ಸಂತೋಷ್ ನಾಯಕ್ ಬರೆದಿದ್ದಾರೆ. ಮಾಸ್ ಮಾದ, ಬೀರ್ ಮಾಸ್ಟರ್ ಹಾಗೂ ಫಯಾಸ್ ಖಾನ್ ಸಾಹಸ ನಿರ್ದೇಶನ ಹಾಗೂ ಸೆಲ್ವಂ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಗೋವಾ ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ. ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

Ragini Dwivedi
ಮಹಿಳಾ ಪ್ರಧಾನ ಚಿತ್ರದಲ್ಲಿ ರಾಗಿಣಿ ದ್ವಿವೇದಿ

ಇದನ್ನೂ ಓದಿ: 2024ರಲ್ಲಿ ಮದುವೆಯಾಗಲಿರುವ ನಟಿಮಣಿಯರು ಇವರೇ ನೋಡಿ

ಸದ್ಯ ಪೋಸ್ಟರ್​ನಿಂದ ಗಮನ ಸೆಳೆಯುತ್ತಿರುವ ಇ-ಮೇಲ್ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. 2024 ರಲ್ಲಿ ರಾಗಿಣಿ ದ್ವಿವೇದಿ ನಟನೆಯ ಮೊದಲ ಚಿತ್ರ ಸದ್ಯದಲ್ಲೇ ರಿಲೀಸ್ ಆಗುತ್ತಿದ್ದು, ಸಿನಿ ಪ್ರೇಮಿಗಳು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.