ETV Bharat / entertainment

ಪರಿಣಿತಿ ರಾಘವ್​ ನಿಶ್ಚಿತಾರ್ಥಕ್ಕೆ ದಿನಗಣನೆ: ಮುಂಬೈ ಏರ್​​ಪೋರ್ಟ್​ನಲ್ಲಿ ಕಾಣಿಸಿಕೊಂಡ ಲವ್​ ಬರ್ಡ್ಸ್ - ಪರಿಣಿತಿ ಚೋಪ್ರಾ

ಪರಿಣಿತಿ ರಾಘವ್​ ನಿಶ್ಚಿತಾರ್ಥ ಇದೇ ಮೇ. 13ರಂದು ದೆಹಲಿಯಲ್ಲಿ ನಡೆಯಲಿದ್ದು, ಇಂದು ಮುಂಬೈ ಏರ್​ಪೋರ್ಟ್​​ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

Parineeti Raghav engagement
ಪರಿಣಿತಿ ರಾಘವ್​ ನಿಶ್ಚಿತಾರ್ಥ
author img

By

Published : May 9, 2023, 7:03 PM IST

ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ನಾಯಕ ರಾಘವ್ ಚಡ್ಡಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಈ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಲವ್​ ಬರ್ಡ್ಸ್​​ ಅಂತಿಮವಾಗಿ ಅವರ ಸಂಬಂಧದ ಬಗೆಗಿನ ಊಹಾಪೋಹಗಳಿಗೆ ಅಂತ್ಯ ಹಾಡಲಿದ್ದಾರೆ. ಎಲ್ಲ ವದಂತಿಗಳಿಗೆ ಮೂರು ದಿನಗಳಲ್ಲಿ ಸ್ಪಷ್ಟ ಮಾಹಿತಿ ಸಿಗಲಿದೆ. ಮೇ 13ರಂದು ದೆಹಲಿಯಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮಾರಂಭಕ್ಕೆ ಸುಮಾರು 150 ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಆಹ್ವಾನಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ಪರಿಣಿತಿ ಚೋಪ್ರಾ ಮತ್ತು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಮಾರ್ಚ್ ತಿಂಗಳಲ್ಲಿ ಪದೇ ಪದೆ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ ಡೇಟಿಂಗ್​ ವದಂತಿ ಆರಂಭವಾಯಿತು. ಅದಾದ ಬಳಿವೂ ರೆಸ್ಟೋರೆಂಟ್​ ಹೊರಗೆ, ಏರ್​ಪೋರ್ಟ್​ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಐಪಿಎಲ್​ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿ ಡೇಟಿಂಗ್​ ವದಂತಿಗೆ ತುಪ್ಪ ಸುರಿದಿದ್ದಾರೆ. ಹಲವು ಗಣ್ಯರು ಸಹ ಪರೋಕ್ಷವಾಗಿ ಈ ಜೋಡಿ ಪ್ರೀತಿಯಲ್ಲಿರುವ ಬಗ್ಗೆ ಮಾತನಾಡಿದ್ದಾರೆ.

ಹೀಗೆ ಈ ಜೋಡಿ ಹಲವು ಬಾರಿ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾದ ಹಿನ್ನೆಲೆ ಡೇಟಿಂಗ್​, ಎಂಗೇಜ್​ಮೆಂಟ್​​, ಮದುವೆ ವದಂತಿ ಜೋರಾಗಿಯೇ ಹರಡುತ್ತಿದೆ. ಮೇ 13ರಂದು ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎಂದು ಆಪ್ತಮೂಲಗಳು ತಿಳಿಸಿದ್ದು, ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಇವರ ಎಂಗೇಜ್​ಮೆಂಟ್​​ ಬಹುತೇಕ ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಇತ್ತೀಚೆಗಷ್ಟೇ ಮೊಹಾಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿ ಗಮನ ಸೆಳೆದಿದ್ದರು. ಪಂದ್ಯದ ಹಲವಾರು ಚಿತ್ರಗಳು ಮತ್ತು ವಿಡಿಯೋ ತುಣುಕುಗಳು ವೈರಲ್ ಆಗಿವೆ. ಒಂದು ಚಿತ್ರದಲ್ಲಿ, ಪರಿಣಿತಿ ರಾಘವ್ ಅವರ ಭುಜದ ಮೇಲೆ ಒರಗಿ ಸಖತ್​ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳು ಅವರ ಪ್ರೇಮ ಸಂಬಂಧದ ಬಗ್ಗೆ ಮಾತನಾಡಿವೆ. ಪ್ರೇಕ್ಷಕರು ಸ್ಟೇಡಿಯಂನಲ್ಲಿ ನಟಿಯನ್ನು ಅತ್ತಿಗೆ ಎಂದು ಕರೆದಿದ್ದರು.

ವರದಿಗಳನ್ನು ನಂಬುವುದಾದರೆ, ಪರಿಣಿತಿ ಮತ್ತು ರಾಘವ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಪಡೆದಿದ್ದಾರೆ. ದೀರ್ಘಕಾಲದ ಸ್ನೇಹಿತರರು ಕೂಡ ಹೌದು. ಪರಿಣಿತಿ ಮತ್ತು ರಾಘವ್ ಇನ್​ಸ್ಟಾಗ್ರಾಮ್​ನಲ್ಲಿಯೂ ಒಬ್ಬರನ್ನೊಬ್ಬರು ಅನುಸರಿಸುತ್ತಾರೆ.

ಇದನ್ನೂ ಓದಿ: ಕೇರಳ ಸ್ಟೋರಿ ಬ್ಯಾನ್​ 'ರಾಜಕೀಯ ಪ್ರೇರಿತ': ಸಿನಿಮಾ ವೀಕ್ಷಿಸಿ ನಿರ್ಧಾರ ಕೈಗೊಳ್ಳಿ ಎಂದ ನಿರ್ದೇಶಕ

ಕೆಲಸದ ವಿಚಾರ ಗಮನಿಸುವುದಾದರೆ, ನಟಿ ಪರಿಣಿತಿ ಚೊಪ್ರಾ ಅವರು 'ಚಮ್ಕಿಲಾ'ದಲ್ಲಿ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಸ್ಕ್ರೀನ್​ ಶೇರ್ ಮಾಡಲಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶನದ ಈ ಚಿತ್ರ ಇಬ್ಬರು ಜನಪ್ರಿಯ ಪಂಜಾಬಿ ಗಾಯಕರಾದ ಅಮರ್​ಜೋತ್ ಕೌರ್ ಮತ್ತು ಅಮರ್ ಸಿಂಗ್ ಚಮ್ಕಿಲಾ ಅವರ ಸುತ್ತ ಸುತ್ತುತ್ತದೆ. ಇನ್ನೂ ರಾಘವ್ ಚಡ್ಡಾ ಅವರು (ಪಂಜಾಬ್‌, ಆಪ್​​) ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಕಾಂತಾರ 2 ಸಿನಿಮಾ ಸ್ಕ್ರಿಪ್ಟ್​ ಬಹುತೇಕ ರೆಡಿ; ಶೀಘ್ರದಲ್ಲೇ ಶೂಟಿಂಗ್‌ಗೆ ತಯಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.